Thursday, March 29, 2012

ತುಂಟ ಜಾಹೀರಾತುಗಳು

ಮೋಟುಗೋಡೆಯಲ್ಲಿ ನಾವು ಆಗಿಂದಾಗ ತುಂಟ  ಜಾಹೀರಾತುಗಳನ್ನು ಹಾಕುತ್ತ ಬಂದಿದ್ದೇವೆ. ಇಲ್ಲಿ ಇನ್ನೊಂದಿಷ್ಟು ಚಿತ್ರಗಳಿವೆ. ನೋಡಿ ಆನಂದಿಸಿ. ಕೆಲವನ್ನು ನೀವು ಮೊದಲೇ ನೋಡಿರಬಹುದು. ಇನ್ನು ಕೆಲವು ಹೊಸತಿರಬಹುದು. ಅರ್ಥವಾದರೆ ನಕ್ಕುಬಿಡಿ, ಅರ್ಥವಾಗದಿದ್ದರೆ, ಮತ್ತೊಮ್ಮೆ ನೋಡಿ:)











Monday, March 26, 2012

ಪಾಪ ಬಾಳೆಹಣ್ಣು! ;-)


Wednesday, March 21, 2012

ತುಂಟ ಚಿತ್ರಗಳು

ಗೋಪಾಲಕೃಷ್ಣ ಕುಂಟಿನಿ ಮೊನ್ನೆ ತಮ್ಮ ಫೇಸ್ ಬುಕ್ ಪ್ರೊಫೈಲಿನಲ್ಲಿ "ಆನೆ ಚಿತ್ರ ಬಿಡಿಸುವ ಸುಲಭ ರೀತಿ!!" ಎಂಬ ತಲೆ ಬರಹದ ಅಡಿಯಲ್ಲಿ, ತುಂಟ ಚಿತ್ರವೊಂದನ್ನು ಹಂಚಿಕೊಂಡಿದ್ದರು. 


ಈ ಚಿತ್ರ ನೋಡಿದ ಕೂಡಲೇ, ಹಿಂದೊಮ್ಮೆ ಯೂಟ್ಯೂಬ್ ನಲ್ಲಿ ನೋಡಿದ್ದ ಇಂತಹ ತುಂಟ ಚಿತ್ರಗಳ ಸರಣಿ ನೆನಪಾಯಿತು. ಅದನ್ನು ಮತ್ತೆ ಹುಡುಕಿದೆ.  ಇಲ್ಲಿದೆ, ನೋಡಿ: (ಆಫೀಸಲ್ಲಿದ್ದರೆ ಬೇಡ!:)





Thursday, March 15, 2012

ಸೆಕೆ ಮತ್ತು ಚಳಿ

ವೃದ್ಧಾಪ್ಯ ಸಮೀಪಿಸುತ್ತಿರುವ ತುಕ್ಕೋಜಿರಾಯರೂ ಅವರ ಹೆಂಡತಿಯೂ ವೈದ್ಯರಲ್ಲಿಗೆ ತಪಾಸಣೆಗೆ ತೆರಳಿದರು. ತುಕ್ಕೋಜಿರಾಯರ ಅಮೂಲಾಗ್ರ ತಪಾಸಣೆಯನ್ನು ಮಾಡಿದ ಡಾಕ್ಟರು, "ಈ ಪ್ರಾಯದಲ್ಲಿ ನಿಮ್ಮ ಆರೋಗ್ಯ ಹೇಗಿದ್ದರೆ ಚೆನ್ನವೋ ಹಾಗೇ ಇದೆ. ಬಿಪಿ-ಶುಗರ್ರು ನಾರ್ಮಲ್ ಆಗಿದೆ. ಒಂದಿಷ್ಟು ಸಣ್ಣ ಪುಟ್ಟ ಸಮಸ್ಯೆಗಳಿವೆ, ಅವೆಲ್ಲ ಮಾಮೂಲಿ, ಏನೂ ಚಿಂತೆ ಮಾಡಬೇಕಾಗಿಲ್ಲ" ಎಂದು ಸಮಾಧಾನದ ಮಾತುಗಳನ್ನ ಆಡಿದರು. "ನಿಮಗೇನಾದರೂ ಸಮಸ್ಯೆ ಇದೆ ಅನ್ನಿಸಿದರೆ ಕೇಳಿ, ಪರಿಹರಿಸೋಣ" ಎಂಬ ಸಲಹೆಯನ್ನೂ ನೀಡಿದರು.

ತುಕ್ಕೋಜಿ ರಾಯರು ಏನನ್ನೋ ಹೇಳೋಕೆ ಹೊರಟಿದ್ದು ವೈದ್ಯರ ಗಮನಕ್ಕೂ ಬಂತು. ಆದರೆ ಏನೋ ಮುಜುಗರ ಇದ್ದ ಹಾಗಿತ್ತು. ವೈದ್ಯರು "ಪರವಾಗಿಲ್ಲ ಹೇಳಿ, ಸಂಕೋಚ ಬೇಡ" ಎಂದು ಮತ್ತೆ ಹೇಳಿದ ಮೇಲೆ, ನಿಧಾನವಾಗಿ ಬಾಯಿಬಿಟ್ಟರು ರಾಯರು.

"ಏನಿಲ್ಲ ಡಾಕ್ಟ್ರೇ, ಹೆಂಡತಿ ಜೊತೆಗೆ ಮೊದಲ ಬಾರಿ ಸೆಕ್ಸ್ ಮಾಡೋವಾಗ ಸೆಕೆ ಆಗತ್ತೆ, ಆದರೆ ಎರಡನೇ ಬಾರಿ ಮಾಡುವಾಗ ತುಂಬಾ ಚಳಿ ಆಗತ್ತೆ" ಎಂದರು.

ಡಾಕ್ಟರಿಗೂ ಇದು ಹೊಸ ಸಮಸ್ಯೆ. ಇಲ್ಲಿವರೆಗೆ ಇಂತದ್ದೊಂದು ಕೇಳಿರಲಿಲ್ಲ.

"ಇರಲಿ ನೋಡೋಣ ರಾಯರೇ, ಏನು ಸಮಸ್ಯೆ ಅಂತ ಕಂಡುಹಿಡಿಯೋಣ" ಎಂದವರೇ, ಅವರ ಹೆಂಡತಿಯನ್ನು ಬರಹೇಳಿದರು.

ಆಕೆಗೂ ಎಲ್ಲ ಚೆಕಪ್ ಇತ್ಯಾದಿಗಳು ನಡೆದವು. ಕೊನೆಯಲ್ಲಿ ಹೇಳಲೋ ಬೇಡವೋ ಅಂದುಕೊಂಡರೂ, ಧೈರ್ಯ ಮಾಡಿದ ವೈದ್ಯರು, " ನಿಮ್ಮ ಯಜಮಾನರು ಒಂದು ವಿಚಿತ್ರ ಸಮಸ್ಯೆ ಹೇಳಿದರು,ಅವರು ಮೊದಲ ಬಾರಿ ಸೆಕ್ಸ್ ಮಾಡೋವಾಗ ಸೆಕೆ ಆಗತ್ತಂತೆ, ಎರಡನೇ ಬಾರಿ ಚಳಿ ಆಗತ್ತೆ ಅಂದರು. ನಿಮ್ಮ ಗಮನಕ್ಕೇನಾದರೂ ಅದು ಬಂದಿದೆಯಾ?" ಎಂದು ಕೇಳಿದರು.

ಕೊಂಚ ಹೊತ್ತು ಏನೂ ಮಾತಾಡದ ರಾಯರ ಹೆಂಡತಿ, ಒಮ್ಮೆಗೇ ಧ್ವನಿ ಏರಿಸಿ ಹೇಳಿದರು.

"ಹೋಗಿ ಹೇಳಿ ಅವರಿಗೆ, ಯಾಕೆ ಹಾಗೆ ಆಗತ್ತೆ ಅಂದ್ರೆ ಮೊದಲನೆಯದು ನಡೆಯೋದು ಏಪ್ರಿಲ್ ನಲ್ಲಿ ಹಾಗೂ ಎರಡನೆಯದು ಡಿಸೆಂಬರ್ ನಲ್ಲಿ"

(ಇಂಗ್ಲಿಷ್ ಬ್ಲಾಗೊಂದರಿಂದ)