Showing posts with label Shringara Mangalam. Show all posts
Showing posts with label Shringara Mangalam. Show all posts

Wednesday, April 1, 2009

ಶೃಂಗಾರ ಮಂಗಳಂ

ಡಿ.ವಿ.ಗುಂಡಪ್ಪನವರ 'ಶೃಂಗಾರ ಮಂಗಳಂ'‍ನ ಆಯ್ದ ಸಾಲುಗಳು ನಿಮಗಾಗಿ.

ನಿಮ್ಮ ಬೇಸಗೆಯು ಶೃಂಗಾರಮಯವಾಗಿರಲೆಂದು ಮೋಟುಗೋಡೆ ತಂಡವು ಹಾರೈಸುತ್ತೆ.

ಭೋಗಂ ದೋಷಮೆ ಸುಕೃತೋ- |
ದ್ಯೋಗಕ್ಕದು ಸಾಹ್ಯಮಾಗದೇಂ, ಭೋಜನದೊಳ್ ||
ರೋಗಭಯಮೆನುತುಪೋಷ್ಯಮೆ |
ಜಾಗೃತನಶನದಿನೆ ಗಳಿಸಲಾಗದೆ ಬಲಮಂ? ||

ಘೃತದಿಂದೇಳದೆ ಬೀಳ್ಗುಮೆ |
ಹುತವಹನಜ್ವಾಲೆ, ಕಾಮನುಪಭೋಗಗಳಿಂ ||
ಜಿತನಪ್ಪನೆ, ತಾಂ ಪೆರ್ಚನೆ? |
ರತಿಪತಿವಹ್ನಿಗಳಿಗೆಂತು ಶಮನೋಪಾಯಂ? ||

ಹುತವಹನುಂ ರತಿಪತಿಯುಂ |
ಸತತ ಜಗನ್ಮೂಲ ಚೇತನಿಕರ್, ಅನಿವಾರ್ಯರ್ ||
ಅತಿಯೊಳ್ ಭಯಕರರಾದರ್ |
ಮಿತಿಯೊಳ್ ಸುಖಕಾರರ್, ಅಮಲಸಂಸ್ಕಾರಕರರ್ ||

ಪ್ರಣಯಮತೃಪ್ತಂ ಮನದೊಳ್ |
ವ್ರಣಮಪ್ಪುದು ಕೀವು ನೋವುಗಳನಾಗಿಸುತುಂ ||
ಇನಿತೊಲಿಯುತಮಿನಿತದುಮುತ- |
ಮಣಗಿಸಲಹುದದನು ಮಿಶ್ರಮಧುಕಟುನಯದಿಂ ||

ಕಾಮನನೀಶಂ ದಹಿಸಲ್ |
ಕ್ಷೇಮಮದಾರ್ಗಾಯ್ತು, ಸತ್ತನೇನಾ ಕಾಮಂ? ||
ಪ್ರೇಮದ ಪುನರಂಕುರಿತದೆ |
ಸೋಮನೆ ತಾನಾದನಲ್ತೆ ಗೃಹಿಗಳಿಗಾದ್ಯಂ ||

ಶೃಂಗಾರಮಖಿಲಸೃಷ್ಟಿಯ |
ಸಂಘಟಕಂ ಜೀವಿಯಂತರನಿಲೋಪಶಮಂ ||
ಸಂಗಾನುಭವಗಳಿಂ ನಿ-
ಸ್ಸಂಗಕೆ ಜೀವವನು ಪಕ್ವಬಡಿಸುವುಪಾಯಂ ||