Wednesday, August 11, 2010

ಪೋಲಿ ಪ್ರಕೃತಿ -೪

ಪೋಲಿ ಪ್ರಕೃತಿ ಸರಣಿಯ ನಾಲ್ಕನೇ ಕಂತು.  ಸೃಷ್ಟಿಕರ್ತನಿಗೆ ಶರಣು!






Wednesday, July 28, 2010

ಮಳೆಗಾಲದೀ ಚಳಿಗೆ..

ಹೊರಗೆ ಧಾರೆ ಧಾರೆ ಮಳೆ.. ಕಪ್ಪಿಟ್ಟ ಮುಗಿಲು.. ತೊಯ್ದು ಬಂದ ಹುಡುಗಿಯ ನಡುಗುವ ಮೈ.. ಇಂಥ ಮಳೆಗಾಲದಿಂಥ ಚಿತ್ರ ಕವನವಾದರೆ? ರಸಋಷಿಗೆ ನಮೋನಮಃ!


ಕೀಲಿಕೈ ಎಲ್ಲಿಹುದು?
-ಕುವೆಂಪು

ಕೀಲಿಕೈ ಎಲ್ಲಿಹುದು ಬಾಗಿಲನು ತೆರೆಯೆ?
ಓ ದ್ವಾರಪಾಲಕನೆ, ಎಲ್ಲಿ ಹೋಗಿರುವೆ?

ದೂರದಿಂ ಬಂದಿಹೆನು; ಬಲು ಬಳಲಿ ನೊಂದಿಹೆನು;
ಕತ್ತಲಲಿ ಸೋತಿಹೆನು ದಾರಿ ನಡೆದು!
ಮುಳ್ಳುಕಲ್ಲನು ತುಳಿದು, ಹಳ್ಳಕೊಳ್ಳವ ಕಳೆದು,
ತುಂಬಿ ಹರಿಯುವ ಹೊಳೆಯ ಹಾದುಬಂದೆ!

ಮುಂಗಾರುಮಳೆಗರೆದು ಚಳಿಯ ತಣ್ಪೇರುತಿದೆ;
ಮೈಗಂಟಿಕೊಂಡಿರುವುದುಟ್ಟ ಸೀರೆ!
ಕೇಶಪಾಶವು ತೊಯ್ದು ಮುಡಿಗೆದರಿಕೊಂಡಿಹುದು;
ಕಂಪಿಪುದು ಕೋಮಲೆಯ ಕುಸುಮ ಕಾಯ!

ಬಿರುಗಾಳಿ ಬೀಸುತಿದೆ; ಕುಡಿಮಿಂಚು ತಳಿಸುತಿದೆ;
ಸಿಡಿಲೆರಗಿ ಬಾನೆಲ್ಲ ಕೆರಳಿರುವುದು!
ಹೊರಗೆಲ್ಲಿಯೂ ಮಲಗೆ ಬೆಚ್ಚನೆಯ ತಾವಿಲ್ಲ;
ತಿಮಿರ ಭಯ ಹೃದಯದೊಳು ಹರಿಯುತಿಹುದು!

ಮಲಗಿರುವನೆನ್ನಿನಿಯನೊಳಗೆ ಬಿಸುಸಜ್ಜೆಯಲಿ;
ಕರೆದರೂ ಕೇಳಿಸದು. ಗುಡುಗುತಿಹುದು!
ಚಳಿಯಿಂದ ಪಾರಾಗುವೆನು ರಮಣನೆಡೆ ಸೇರಿ:
ತೊಯ್ದುಡುಪಿಗಿಂತ ನಗ್ನತೆಯೆ ಲೇಸು!

ಕತ್ತಲಲಿ ಬಂದಿರುವೆ; ತಾಯ್ಮನೆಯನಗಲಿರುವೆ;
ತೊಯ್ದು ಮಳೆಯಲಿ ಕದವ ತಟ್ಟುತಿರುವೆ!
ಬಾಗಿಲನು ಕಾಯದೆಯೆ ನೀನೆಲ್ಲಿ ಹೋಗಿರುವೆ?

ಓ ದ್ವಾರಪಾಲಕನೆ, ಬೇಗ ಬಾರೈ.

Friday, July 9, 2010

70 ways to keep a woman happy

There are 70 ways to keep a woman happy.

Number one: take her shopping.

The rest is 69!

Monday, July 5, 2010

ರಿಯಲ್ ?????


ತಿನ್ನಬಹುದಾ? ತಿನ್ತಾರಾ ? ಹೇಗೆ? ಯಾರು? ರುಚಿ? ನಿಜವಾಗ್ಲೂ?
ಗೊತ್ತಿಲ್ಲಾ ....... :(

ಮತ್ತೆ ಏನು ಗೊತ್ತು?
ಇದನ್ನ ನಮಗೆ ಕಳ್ಸಿದ್ದು , ರವಿ. S D :)

Friday, June 11, 2010

ಮಹಾboob ಮತ್ತು...

ಒಂದಷ್ಟು ಚಿತ್ರಗಳನ್ನು ಚಿತ್ರವಿಚಿತ್ರಕ್ಕೆಂದು ಸಂಪಾದಿಸಿಟ್ಟುಕೊಂಡಿದ್ದರು ಲಕ್ಷ್ಮೀ ಅವರು. ಆ ಚಿತ್ರಗಳನ್ನು ನೋಡಿ, ಅವು ಮೋಟುಗೋಡೆಗೆ ಹೆಚ್ಚು ಸೂಕ್ತವೆಂದೆನಿಸಿ, ಇಲ್ಲಿ ’ಪ್ರದರ್ಶನ’ ಮಾಡಲಾಗಿದೆ! ಈ ಚಿತ್ರಗಳನ್ನು ಲಕ್ಷ್ಮೀ ಅವರಿಗೆ ಕಳುಹಿಸಿಕೊಟ್ಟವರಿಗೆ ಧನ್ಯವಾದಗಳು.

ಎಂಜಾಯ್!

೧. ಪ್ರಚಾರವನ್ನು ಹೀಗೂ ಮಾಡಬಹುದೇ?



೨. ಯಾರು ಯಾರಿಗೆ ಹೇಳಿದರು? ಸಂದರ್ಭ-ಸಹಿತ ವಿವರಿಸಿ. (೪ ಅಂಕಗಳು)



೩. ಸರ್ಕಾರದ್ದು ಅಂದ ಮೇಲೆ ಯೋಚನೆ ಮಾಡಲೇ ಬೇಕು!



೪. ಹಾಸಿಗೆಯಲ್ಲಿ ಇನ್ನೂ ಏನೇನು ಕಾದಿದೆಯೋ ಏನೊ!



೫. ತ್ರಿಕಾಲ ಸತ್ಯ!



೬. ಇವನು ಮಹಾboobನ ಶಿಷ್ಯ ಇರಬೇಕು.



೭. ಲೀಗಲೈಸ್ ಮಾಡಿದ್ದಾರೆ ಅಂತ ಹೀಗೆ ಜಾಹೀರಾತು ಕೊಡೋದೇ?



೮. ಟಾಪ್ಸು?



೯. ಬಿಸಿ ಬೇರೆ ಕೇಡು!



೧೦. ಇನ್ನೂ ಏನೇನು ಸಪ್ಲೈ ಮಾಡ್ತಾರೋ ಏನೊ.



೧೧. "ಇವತ್ತು ಊಟಕ್ಕೆ ಎಲ್ಲಿಗೆ ಹೋಗಿದ್ದೆ?" ಅಂತ ಯಾರಾದರೂ ಕೇಳಿದರೆ ಹೇಗೆ ಹೇಳೋದು?



-ಅ
11.06.2010
11.15AM