Friday, September 17, 2010

ಮೊಗ್ಗಿನ ಮಧು

ಮೊಲೆ ಮೊಗ್ಗ ಮುಗ್ಧತೆಯ
ಆಹ್ವಾನ ದೊರೆತಾಯ್ತು
ತಡವೇಕೆ ಇನ್ನ? ಎನ್ನ ಮನದನ್ನ..

ಸವಿಯ ಕುಂಭವ ನೀನು ಮನಸಾರೆ ಮುತ್ತು,
ಪಡೆ ಮನದಣಿಯೆ ಮತ್ತು
ಬಾಯ್ತುಂಬ ಸುಖದ ಕೈತುತ್ತು

ತುಂಬಿಹುದು ಎದೆ ತುಂಬ
ಪ್ರೀತಿ ಅಮೃತ ಧಾರೆ
ಕ್ಷಣ ಕ್ಷಣಕೂ ತಲ್ಲಣ,
ಮಧುರ ಪೇಮದ ಸಿಂಚನ-
ಹನಿ ಹನಿಯಾಗಿ ನೀ ಈ ಪ್ರೀತಿ ರಸ ಹೀರೆ.

ನನ್ನಯ ಎದೆಯರಸ,
ಮಧುರವೀ ರಸನಿಮಿಷ
ಈ ಮೊಗ್ಗಿನಾ ಮಧುವ
ಮೆಲ್ಲ ಮೆಲ್ಲನೆ ಮೆಲ್ಲು
ತನುವ ಮೊಗ್ಗಿದು, ಮನದ ಹೂವರಳಿಸುವುದು
ನನ್ನ ತನು-ಮನಗಳೆರಡನ್ನೂ
ಒಟ್ಟೊಟ್ಟಿಗೇ ಗೆಲ್ಲು

ತಣಿವಾಗಿ ದಣಿ ದಣಿದು
ಮುದವಾಗಿ ಮಣಿ ಮಣಿದು
ಸಾಮೀಪ್ಯದಾ ಸೋನೆ ಸುರಿದು ತೇಲೋಣ
ಸಂತೃಪ್ತಿಯಲಿ.. ಮತ್ತೊಂದು ಜಗದಲ್ಲಿ..
ನಮ್ಮ ತೋಳ್ತೆಕ್ಕೆಯಲಿ..


* *
ಇದು ಅಧಿಕೃತವಾಗಿ ಮೋಟುಗೋಡೆಗೆ ಬಂದ ಮೊದಲ ಮಹಿಳಾ ಎಂಟ್ರಿ! ಇದನ್ನು ಬರೆದು ಕಳುಹಿಸಿರುವುದು ಸಹಬ್ಲಾಗಿಣಿಯೊಬ್ಬರು. ತಮ್ಮ ಹೆಸರನ್ನು ಅನಾಮಿಕವಾಗಿಡುವಂತೆ ಸೂಚಿಸಿದ ಅವರಿಗೆ ಥ್ಯಾಂಕ್ಸ್ ಹೇಳುತ್ತಾ, ಈ ಪ್ರಕ್ರಿಯೆ ಮುಂದುವರೆಯಲಿ ಅಂತ ಹಾರೈಸುತ್ತೇವೆ.

Saturday, September 4, 2010

ಮೂರು ಪ್ರಣಯಗೀತೆಗಳು

1) ಮಧುಮಾಸ ಚಂದ್ರಮ..
ಚಿತ್ರ: ವಿಜಯವಾಣಿ
ಹಾಡಿದವರು: ಎಸ್. ಜಾನಕಿ, ವಾಣಿ ಜಯರಾಂ




2) ಈ ಸಮಯ ಆನಂದಮಯ..
ಚಿತ್ರ: ಬಭ್ರುವಾಹನ
ಹಾಡಿದವರು: ಎಸ್. ಜಾನಕಿ, ಡಾ| ರಾಜಕುಮಾರ್



3) ಬೆಸುಗೆ ಬೆಸುಗೆ..
ಚಿತ್ರ: ಬೆಸುಗೆ
ಹಾಡಿದವರು: ಎಸ್.ಪಿ. ಬಾಲಸುಬ್ರಹ್ಮಣ್ಯ, ವಾಣಿ ಜಯರಾಂ

Saturday, August 21, 2010

ಏಡ್ ಲಕ್ಸ ಆಯ್ತು ಕಣಣ್ಣೋ..!

ಮೋಟುಗೋಡೆಗೆ ಬಿದ್ದ ಹಿಟ್ಟುಗಳ ಸಂಖ್ಯೆ ಈಗ ಎರಡು ಲಕ್ಷ ದಾಟಿದೆ! ನಮಗೆ ಬರಹಗಳನ್ನು ಕೊಟ್ಟ, ಸಾಮಗ್ರಿಗಳನ್ನು ಒದಗಿಸಿದ, ಲಿಂಕುಗಳನ್ನು ಮೇಯ್ಲ್ ಮಾಡಿದ, ನಮ್ಮ ಬಗ್ಗೆ ಬರೆದ, ಪ್ರತಿಕ್ರಿಯೆಗಳಿಂದ ಖುಶಿ ಕೊಟ್ಟ, ನಮ್ಮನ್ನು ಪ್ರೋತ್ಸಾಹಿಸಿದ, ಓದಿ ಆನಂದಿಸಿದ ...ನಿಮಗೆಲ್ಲರಿಗೂ ಸಿಕ್ಕಾಪಟ್ಟೆ ಥ್ಯಾಂಕ್ಸು! :-)



Wednesday, August 11, 2010

ಪೋಲಿ ಪ್ರಕೃತಿ -೪

ಪೋಲಿ ಪ್ರಕೃತಿ ಸರಣಿಯ ನಾಲ್ಕನೇ ಕಂತು.  ಸೃಷ್ಟಿಕರ್ತನಿಗೆ ಶರಣು!






Wednesday, July 28, 2010

ಮಳೆಗಾಲದೀ ಚಳಿಗೆ..

ಹೊರಗೆ ಧಾರೆ ಧಾರೆ ಮಳೆ.. ಕಪ್ಪಿಟ್ಟ ಮುಗಿಲು.. ತೊಯ್ದು ಬಂದ ಹುಡುಗಿಯ ನಡುಗುವ ಮೈ.. ಇಂಥ ಮಳೆಗಾಲದಿಂಥ ಚಿತ್ರ ಕವನವಾದರೆ? ರಸಋಷಿಗೆ ನಮೋನಮಃ!


ಕೀಲಿಕೈ ಎಲ್ಲಿಹುದು?
-ಕುವೆಂಪು

ಕೀಲಿಕೈ ಎಲ್ಲಿಹುದು ಬಾಗಿಲನು ತೆರೆಯೆ?
ಓ ದ್ವಾರಪಾಲಕನೆ, ಎಲ್ಲಿ ಹೋಗಿರುವೆ?

ದೂರದಿಂ ಬಂದಿಹೆನು; ಬಲು ಬಳಲಿ ನೊಂದಿಹೆನು;
ಕತ್ತಲಲಿ ಸೋತಿಹೆನು ದಾರಿ ನಡೆದು!
ಮುಳ್ಳುಕಲ್ಲನು ತುಳಿದು, ಹಳ್ಳಕೊಳ್ಳವ ಕಳೆದು,
ತುಂಬಿ ಹರಿಯುವ ಹೊಳೆಯ ಹಾದುಬಂದೆ!

ಮುಂಗಾರುಮಳೆಗರೆದು ಚಳಿಯ ತಣ್ಪೇರುತಿದೆ;
ಮೈಗಂಟಿಕೊಂಡಿರುವುದುಟ್ಟ ಸೀರೆ!
ಕೇಶಪಾಶವು ತೊಯ್ದು ಮುಡಿಗೆದರಿಕೊಂಡಿಹುದು;
ಕಂಪಿಪುದು ಕೋಮಲೆಯ ಕುಸುಮ ಕಾಯ!

ಬಿರುಗಾಳಿ ಬೀಸುತಿದೆ; ಕುಡಿಮಿಂಚು ತಳಿಸುತಿದೆ;
ಸಿಡಿಲೆರಗಿ ಬಾನೆಲ್ಲ ಕೆರಳಿರುವುದು!
ಹೊರಗೆಲ್ಲಿಯೂ ಮಲಗೆ ಬೆಚ್ಚನೆಯ ತಾವಿಲ್ಲ;
ತಿಮಿರ ಭಯ ಹೃದಯದೊಳು ಹರಿಯುತಿಹುದು!

ಮಲಗಿರುವನೆನ್ನಿನಿಯನೊಳಗೆ ಬಿಸುಸಜ್ಜೆಯಲಿ;
ಕರೆದರೂ ಕೇಳಿಸದು. ಗುಡುಗುತಿಹುದು!
ಚಳಿಯಿಂದ ಪಾರಾಗುವೆನು ರಮಣನೆಡೆ ಸೇರಿ:
ತೊಯ್ದುಡುಪಿಗಿಂತ ನಗ್ನತೆಯೆ ಲೇಸು!

ಕತ್ತಲಲಿ ಬಂದಿರುವೆ; ತಾಯ್ಮನೆಯನಗಲಿರುವೆ;
ತೊಯ್ದು ಮಳೆಯಲಿ ಕದವ ತಟ್ಟುತಿರುವೆ!
ಬಾಗಿಲನು ಕಾಯದೆಯೆ ನೀನೆಲ್ಲಿ ಹೋಗಿರುವೆ?

ಓ ದ್ವಾರಪಾಲಕನೆ, ಬೇಗ ಬಾರೈ.