Thursday, October 29, 2009

ಕಾಂಡೋಮ್ ಕೊಳ್ಳೋ ಕಷ್ಟಗಳು

-ಸುಘೋಷ್ ನಿಗಳೆ

ಈ ಲೇಖನ ಓದುವ ಮೊದಲು ನಿಮ್ಮಲ್ಲಿ ಒಂದು ರಿಕ್ವೆಸ್ಟ್. ಲೈಂಗಿಕತೆ, ಕಾಮ, ಕಾಂಡೋಮ್ ಇತ್ಯಾದಿಗಳ ಬಗ್ಗೆ ಮಾತನಾಡಲು, ಚರ್ಚಿಸಲು ನಿಮಗೆ ಮುಜುಗರ ಎನಿಸುತ್ತದೆಯಾದರೆ ದಯವಿಟ್ಟು ಲೇಖನ ಓದಬೇಡಿ. ಈ ಲೇಖನ ಕೇವಲ ‘ಪುರುಷರಿಗೆ’ ಮಾತ್ರ. ಅಂದ ಹಾಗೆ ಭಾರೀ ಸೀಕ್ರೆಟ್ ಏನನ್ನೂ ಬರೆಯಲು ಹೋಗುತ್ತಿಲ್ಲ ಮತ್ತೆ ಹಾಂ…

ಜನಸಂಖ್ಯಾ ನಿಯಂತ್ರಣಕ್ಕಾಗಿ, ಸೇಫ್ ಸೆಕ್ಸ್ ಗಾಗಿ, ಏಡ್ಸ್ ತಡೆಗಟ್ಟುವುದಕ್ಕಾಗಿ, ಮಕ್ಕಳ ನಡುವಿನ ಅಂತರಕ್ಕಾಗಿ, ಹೀಗೆ ಹಲವು ಕಾರಣಗಳಿಗೆ ಸರ್ಕಾರ ನೇರವಾಗಿ ಕಾಂಡೋಮ್ ಪ್ರಮೋಟ್ ಮಾಡುತ್ತದೆ. (‘ಮಾತಾಡೋನೇ ಮಹಾಶೂರ’ ಆಡ್ ನೆನಪಾಯಿತೆ?). ಅಷ್ಟೇ ಅಲ್ಲ ವೈದ್ಯರು, ಆಸ್ಪತ್ರೆಗಳು, ತಜ್ಞರು ಕೂಡ ಕಾಂಡೋಮ್ ಬಳಕೆಯನ್ನು ಪ್ರೋತ್ಸಾಹಿಸುತ್ತಾರೆ. ಅನೇಕ ಶೌಚಾಲಯಗಳಲ್ಲಿ ಕಾಂಡೋಮ್ ವೆಂಡಿಂಗ್ ಮಷಿನ್ ಗಳನ್ನು ಸರ್ಕಾರವೇ ಇರಿಸಿದೆ. ಅಷ್ಟೇ ಅಲ್ಲ ಹಲವು ಕಡೆಗಳಲ್ಲಿ ಕಾಂಡೋಮ್ ಅನ್ನು ಉಚಿತವಾಗಿ ಹಂಚಲಾಗುತ್ತದೆ. (ಉಚಿತವಾಗಿ ಹಂಚುವ ಕಾಂಡೋಮ್ ಗಳ ಗುಣಮಟ್ಟದ ಚರ್ಚೆ ಸಧ್ಯ ಬೇಡ) ನಾಕೋ, ಕೆಎಸ್ಎಪಿಎಸ್ ನಂತಹ ಸಂಸ್ಥೆಗಳಂತೂ ಎಚ್ಐವಿ ತಡೆಗಟ್ಟಲು ನಡೆಸುವ ಪ್ರಚಾರದಲ್ಲಿ ಕಾಂಡೋಮ್ ಬಳಕೆಗೆ ಅಗ್ರ ಸ್ಥಾನ ನೀಡುತ್ತವೆ.

ಸನ್ನಿವೇಶ ಹೀಗಿದ್ದರೂ ನಮ್ಮ ಮೆಡಿಕಲ್ ಶಾಪ್ ನಡೆಸುವವರು ಮಾತ್ರ ಇನ್ನೂ ಯಾವುದೋ ಓಬಿರಾಯನ ಕಾಲದಲ್ಲಿದ್ದಾರೆ ಎನಿಸುತ್ತದೆ. ಮೆಡಿಕಲ್ ಶಾಪ್ ನವರಷ್ಟೇ ಅಲ್ಲ, ಗ್ರಾಹಕರು ಕೂಡ..... ಪೂರ್ತಿ ಓದಿಗೆ ಭೇಟಿ ಕೊಡಿ: ಕಿತಾಪತಿ ಸುಘೋಷ್

4 comments:

ಸುಪ್ತವರ್ಣ said...

ಮಹಿಳಾ ಡ್ರಗ್ಗಿಸ್ಟ್ ಗಳಿರುವ ಕಡೆ ಸ್ವಲ್ಪ ಜಾಸ್ತಿನೇ ಮುಜುಗರ ಎನ್ನುವುದು ಹೌದಾದರೂ ನನ್ನ ಅನುಭವದ ಪ್ರಕಾರ ಇವತ್ತಿನ ತನಕ ಯಾವುದೇ ಮೆಡಿಕಲ್ ಅಂಗಡಿಯಲ್ಲಿ ಅಂಗಡಿಯಾತ ನನಗೆ ಮುಜುಗರ ತಂದಿಲ್ಲ. ಅವರಿಗೆ ಅದು ದಿನನಿತ್ಯದ ಕೆಲಸ. ಮುಜುಗರ ಏನಿದ್ದರೂ ನಮ್ಮ ಮನಸ್ಸಿನ ಆಟ ಅಷ್ಟೆ. ಏನೋ! ನಿಮ್ಮ ಅನುಭವ ಬೇರೇನೇ ಇರಬಹುದು! ಮೊದಲ ಸಲ ಕಾಂಡೋಮ್ ಕೊಳ್ಳುವುದು ಮಾತ್ರ ಮೊದಲ ಸಲದ ಸೆಕ್ಸ್ ಗಿಂತ ಕಷ್ಟ ! ಇದು ನನ್ನ ಅನುಭವ !

ಆನಂದ said...

ನೀವು ಬರೆದ ಸ್ಟೋರಿಗಳು ಚೆನ್ನಾಗಿವೆ. ನಿಮ್ಮಿಂದ ಸ್ಫೂರ್ತಿ ಪಡೆದು ನಾನೂ ಕೂಡ, ನನ್ನ ಅನಿಸಿಕೆ, ಎಕ್ಸ್ಪೀರಿಯನ್ಸ್ ಮತ್ತು ನನ್ನ ಫ್ಯಾಂಟಸಿಗಳನ್ನ ನನ್ನ ಬ್ಲಾಗಿನಲ್ಲಿ ಪೋಸ್ಟ್ ಮಾಡಿದ್ದೇನೆ. ನನ್ನ ಈ ಹೊಸ ಬ್ಲಾಗ "ಹುಬ್ಬಳ್ಳಿ ಮಾವ" ದಲ್ಲಿ ಉತ್ತರ ಕನ್ನಡ ಭಾಷೆಯಲ್ಲಿ ಬರೆದ ನನ್ನ ಫ್ಯಾಂಟಸಿ. ಈ ಭಾಷೆಯಲ್ಲಿ ಶೃಂಗಾರ ಕಥೆಗಳನ್ನು ಓದುಬಯಸುವ ನಮ್ಮ ಕನ್ನಡಿಗರು ದಯವಿಟ್ಟು ಈ ಕೆಳಗಿನ ಲಿಂಕ್ ನೋಡಿ. ಕಥೆ/ಬರಹದ ಬಗ್ಗೆ ನಿಮ್ಮ ಅನ್ನಿಸಿಕೆಗಳನ್ನು ಮುಕ್ತ ಮನಸ್ಸಿನಿಂದ ತಿಳಿಸಿರಿ.
http://hubballimava.blogspot.com/

sunaath said...

ನಾನು ಹಾಗು ನನ್ನ ಒಬ್ಬ ವಿವಾಹಿತ ಗೆಳೆಯ ಪೇಟೆಯಲ್ಲಿ ‘ವಿಹಾರ’ ಮಾಡುತ್ತಿದ್ದೆವು. ಆತ ನನ್ನನ್ನು ರಸ್ತೆಯಲ್ಲಿಯೇ ನಿಲ್ಲಲು ಹೇಳಿ ಒಂದು ‘ಪಾನ್ ದುಕಾನಿ’ಗೆ ಹೋಗಿ ಬಂದ. ‘ಏನು ಖರೀದಿ ಮಾಡಿದಿರಿ?’ ಅಂತ ನಾನು ಕೇಳಿದಾಗ ಅವನ ಉತ್ತರ:
"ತಮ್ಮನಿಗೆ raincoat ಬೇಕಾಗಿತ್ತು, ತಕ್ಕೊಂಡು ಬಂದೆ!"

Humor apart,ನನ್ನ ಅನಿಸಿಕೆ ಹೀಗಿದೆ:
ಕಾಂಡೋಮ್ ಬಗೆಗೆ ಈಗಿರುವ ಪ್ರಚಾರ ಏನೇನೂ ಸಾಲದು.
ಸರಕಾರ ಮಿತಸಂತಾನಕ್ಕೆ ಇನ್ನೂ ಜಾಸ್ತಿ ಪ್ರಚಾರ ಕೊಡಬೇಕು. ಕಾಂಡೋಮ್ ಗಳು ಸಿಗುವ ಜಾಗಗಳಲ್ಲಿ ದೊಡ್ಡ ಫಲಕಗಳನ್ನು ಹಾಕಬೇಕು. ಅಲ್ಲಿ ಆಕರ್ಷಕವಾದ ಸ್ಲೋಗನ್ಸ್ ಬೇಕು. ನನಗೆ ನೆನಪಿದ್ದ ಎರಡು ಹಳೆಯ ಸ್ಲೋಗನ್ಸ್ ಹೇಳುತ್ತೇನೆ:
(೧) Make love, not children!
(೨) None is fun!

ಮುಖ್ಯವಾಗಿ, ಇದರಲ್ಲಿ ಏನೂ ತಪ್ಪಿಲ್ಲವೆನ್ನುವ ಭಾವನೆ ಬರುವಂತಹ ಜಾಹೀರಾತುಗಳು ಬರಬೇಕು. ಅಂದಾಗ ಗ್ರಾಹಕನ/ಗ್ರಾಹಕಿಯ ಮುಜುಗರ ತಪ್ಪೀತು.

ಸುಶ್ರುತ ದೊಡ್ಡೇರಿ said...

ಡಿಯರ್ ರೀಡರ್ಸ್,

ಈ ಚರ್ಚೆಗೆ ವಿಮರ್ಶಕಿ ಮತ್ತಷ್ಟು ಸೇರಿಸಿದ್ದಾರೆ. ಅದನ್ನೂ ಓದಿ.