-ರಜನಿ ಎಂ.ಜಿ.
(ವಿಜಯ ಕರ್ನಾಟಕದ ಮಹಿಳಾ ವಿಜಯ ಪುರವಣಿಯಲ್ಲಿ ಪ್ರಕಟವಾಗಿದ್ದ ಲೇಖನ)
ಮೊದಲ ಬಾರಿ ಸ್ಯಾನಿಟರಿ ನ್ಯಾಪ್‌ಕಿನ್ ಜಾಹೀರಾತು ಟಿವಿಯಲ್ಲಿ ಪ್ರಸಾರವಾಗಿದ್ದು ನೆನಪಿದೆಯೇ? ರೇಣುಕಾ ಶಹಾನೆ ('ಸುರಭಿ' ಕಾರ್ಯಕ್ರಮದಿಂದ ಜನಪ್ರಿಯಳಾಗಿದ್ದಳಲ್ಲ, ಅವಳೇ!) ಸರಳವಾದ ಉಡುಪಿನಲ್ಲಿ ಬಂದುನಿಂತು "ನಾನು ನಿಮ್ಮ ಬಳಿ ಹೇಳಲೇಬೇಕಾದ ವಿಷಯವೊಂದಿದೆ. ಆದರೆ ಹೇಗೆ ಹೇಳಲಿ?" ಎಂದು ಸಂಕೋಚದಿಂದ, ಮೆಲುದನಿಯಲ್ಲಿ ಅದರ ಬಗ್ಗೆ ಸೂಚ್ಯವಾಗಿ ಹೇಳುವ ಜಾಹೀರಾತದು. ಸಂಪ್ರದಾಯವಾದಿಗಳು ಅಂದು ಮೂಗು ಮುರಿದಿದ್ದರು. ಮಕ್ಕಳು ಇದೇನೆಂದು ಕೇಳಿದರೆ ಏನು ಹೇಳುವುದು ಎಂದು ಹೌಹಾರಿದ್ದರು. ಆದರೆ ಮಕ್ಕಳ ಗಮನ ಸೆಳೆಯುವಂಥದ್ದೇನೂ ಅದರಲ್ಲಿರಲಿಲ್ಲ. ಹೈಸ್ಕೂಲು, ಕಾಲೇಜಿಗೆ ಹೋಗುವ ತರುಣಿಯರು ಮಾತ್ರ ಪರಸ್ಪರ ಕಿವಿಯಲ್ಲಿ ಪಿಸುಗುಟ್ಟಿಕೊಂಡು ಕಿಲಕಿಲ ನಕ್ಕಿದ್ದರು. ಅಷ್ಟು ವರ್ಷಗಳಿಂದ ಆರೋಗ್ಯ ಇಲಾಖೆ ಹೇಳಲು ವಿಫಲವಾಗಿದ್ದ ನೈರ್ಮಲ್ಯದ ಪಾಠವನ್ನು ಕೇವಲ ಒಂದು ಜಾಹೀರಾತು ಸಾಧಿಸಿ ತೋರಿಸಿತ್ತು. ಮಾತ್ರವಲ್ಲ, ಜಾಹೀರಾತು ಲೋಕದಲ್ಲಿದ್ದ ಮಡಿವಂತಿಕೆಯನ್ನೂ ಕಳಚಿತ್ತು. ಅದರ ಪರಿಣಾಮವಾಗಿಯೇ ಇಂದು ಅದೇ ನ್ಯಾಪ್ಕಿನ್ ಕಂಪೆನಿ ಯಾವುದೇ ಸಂಕೋಚ, ಮುಜುಗರಗಳಿಗೆ ಅವಕಾಶವಿಲ್ಲದಂತೆ "ಹ್ಯಾವ್ ಅ ಹ್ಯಾಪಿ ಪಿರಿಯಡ್" ಎಂದು ವಿಶ್ ಮಾಡಿಕೊಳ್ಳುವಂಥ ಆರೋಗ್ಯಕರ ಪರಿಸರವನು ರೂಪಿಸಿಕೊಂಡಿತು.
ಸ್ಯಾನಿಟರಿ ನ್ಯಾಪ್‌ಕಿನ್‌ಗಳಷ್ಟೇ ಗರ್ಭ ನಿರೋಧಕ ಮಾತ್ರೆ ಮತ್ತು ಕಾಂಡೋಮ್‌ಗಳ ಬಗ್ಗೆಯೂ ಮಡಿವಂತಿಕೆ ಇತ್ತು. ಜಾಗೃತಿಯ ಅಗತ್ಯವಿತ್ತು. ಆದರೆ ಅದರ ಸುರಕ್ಷೆಗೆ ಒತ್ತು ಕೊಡದೇ, ಕಾಮೋತ್ತೇಜಕ ಮಾತ್ರೆಗಳೇನೋ ಎಂಬಂತೆ ದೃಶ್ಯಗಳನ್ನು ಬಳಸಿದ್ದರಿಂದಲೇ ನಿರೀಕ್ಷಿತ ಮಟ್ಟದಲ್ಲಿ ಜಾಗೃತಿ ಮೂಡಿಸಲಿಲ್ಲವೆನಿಸುತ್ತದೆ. ಪಡಖಾನೆಯಲ್ಲಿ ಕೂತು ಟಿವಿ ನೋಡುವ ನಮ್ಮ ಮಂದಿ ಅಂಥ ದೃಶ್ಯಗಳನ್ನು ಕಂಡಕೂಡಲೇ ಚಾನೆಲ್ ಬದಲಾಯಿಸುತ್ತಾರೆ ಎನ್ನುವುದನ್ನು ಆ ಜಾಹೀರಾತು ಮಾಡಿದವರು ಮರೆತಿದ್ದರೇನೊ.
ಇತ್ತೀಚೆಗೆ ಟಿವಿಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಗರ್ಭ ನಿರೋಧಕ ಮಾತ್ರೆಗಳ ಜಾಹೀರಾತುಗಳನ್ನು ನೋಡಿದಾಗ ಇದೆಲ್ಲಾ ನೆನಪಾಯಿತು... ಮುಂದೆ ಓದಲು ಭೇಟಿ ಕೊಡಿ: ಜೀವನ್ಮುಖಿ
[Thanks to Rajani M.G. & Vijay Karnataka]
1 comment:
ವಿಜಯ ಕರ್ನಾಟಕ ಹಾಗು ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ಈ ಲೇಖನಕ್ಕೆ ಇನ್ನೂ ಹೆಚ್ಚಿನ publishing ಬೇಕಾಗಿತ್ತು.
ಮೋಟು ಗೋಡೆಯಾಚೆ-ಯಲ್ಲಿ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನಿಮಗೆ ಅಭಿನಂದನೆಗಳನ್ನು ಹಾಗು ಧನ್ಯವಾದಗಳನ್ನು ಸಲ್ಲಿಸುತ್ತೇನೆ.
Post a Comment