Thursday, May 17, 2007

ಮೋಟುಗೋಡೆಯನ್ನ ಜಗತ್ತು ಇಣುಕಲು ಹೊರಟಿದೆ!

ನಾವು ಮೂರು ಜನ, ಸಂದೀಪ, ಸುಶ್ರುತ, ಮತ್ತೆ ನಾನು ಈ ಬ್ಲಾಗನ್ನ ಮೊದಲು ಆರಂಭಿಸಿದಾಗ ಬಹಳ ಅಳುಕು ಇತ್ತು, ಜನ ಏನಂದುಕೊಳ್ಳುತ್ತಾರೋ ಅಂತ. ಆಮೇಲೆ ನಮ್ಮ ಜೊತೆ ಹರ್ಷನೂ ಬಂದು ಸೇರಿಕೊಂಡ. ಟೀಮು ನಾಲ್ಕಾಯಿತು. ಕೆಲವರು ಹೊಗಳಿದರು, ಇನ್ನು ಕೆಲವರು ತೆಗಳಿದರು, ಮತ್ತೆ ಕೆಲವರು ಮೂಗು ಮುರಿದರು. ನಮಗೇನೂ ಬೇಜಾರಿಲ್ಲ! ನಮ್ಮ ಕೆಲ್ಸ ನಾವು ಮುಂದುವರಿಸಿಕೊಂಡು ಬಂದೆವು.

ಈಗ ನೋಡಿದರೆ, ಹೀಗಾಗಿದೆ! ನಮ್ಮ ಪ್ರಯತ್ನವನ್ನ ಕನ್ನಡದ ಪ್ರಮುಖ ವೆಬ್ ಸೈಟ್ ದಟ್ಸ್ ಕನ್ನಡ ಗಮನಿಸಿದೆ, ನಮ್ಮ ಬಗೆಗೆ ನಾಲ್ಕು ಮಾತುಗಳನ್ನಾಡಿದೆ.

ನಾವು ತೀರಾ ಕೆಟ್ಟದ್ದನ್ನಂತೂ ಮಾಡುತ್ತಿಲ್ಲ ಅಂತ ಸಮಾಧಾನ ನಮಗೆಲ್ಲ!

ಹೀಗೇ ನಿಮ್ಮ ಪ್ರೋತ್ಸಾಹ ಮುಂದುವರೆಸಿ, ನಾವೂ ಇಣುಕುವುದನ್ನ ಮುಂದುವರಿಸುತ್ತೇವೆ.

ಇತೀ ನಿಮ್ಮ,
ಇಣುಕುವವರು.

4 comments:

Anonymous said...

common carry on..
doing a good job...

Anonymous said...

@ Nidhi, shu, sandy mattu Harsha ::

Good job guys,

Tumbane effort madiddera, addarindale olle matugalu hudukikondu badive :)

Ee abhinandaneyannu ondu kshana nintu, aswadini, nantara matte nimmellara prayatnavannu munduvaresaliddire embude nambuge..


Cheers
Chin

@Everyone else: Take a bow...

Sandeepa said...

Cool!!

reading this now!!

ಟೈಮೇ ಇರ್ಲೆ ದೋಸ್ತ..

ಅದ್ಕೆ ಇಲ್ಲೊಂದ್ ಕೊಂಡಿ ಹಾಕಿ ಒಳ್ಳೆ ಕೆಲ್ಸ ಮಾಡಿದೆ ನೋಡು..

Anonymous said...

ಖುಷಿಯಿಂದ,ಖುಷಿ ಕೊಡುವ ಕೆಲಸ ಮಾಡ್ತಾ ಇದ್ದೀರ.ಥ್ಯಾಂಕ್ಸ್ ಕಣ್ರಿ. ಇಂಥಾ ವಿಷಯಗಳಲ್ಲಿ ನಿರಾಳವಾಗಿ ಇರೋದ್ರಿಂದ ಬದುಕೂ ಆರೋಗ್ಯವಾಗಿರುತ್ತೆ, ಭಾಷೆಯೂ ಮೊನಚಾಗಿರುತ್ತೆ.ಕನ್ನಡದ ಅತ್ತ್ಯುತ್ತಮ ಕವಿಗಳು ಹಾಗು ಗದ್ಯ ಲೇಖಕರು ಮೋಟುಗೋಡೆಯನ್ನು ಜಿಗಿಯಬಲ್ಲವರಾಗಿದ್ದರಿಂದಲೇ ಜೀವನದರ್ಶನವನ್ನು ಮಾಡಿಸುವ ಗುಣವನ್ನೂ ಪಡೆದರು. ಮಡಿವಂತ ಮನಸ್ಸಿಗೆ ರೋಗ ಹಿಡಿಯುತ್ತದೆಯಷ್ಟೆ. ಬ್ಲಾಗಿನ ಬರಹಗಳನ್ನು ಗಮನಿಸಿದರೆ ಆಸ್ವಾದನೆ ಹಾಗು ಅಶ್ಲೀಲತೆಯ ನಡುವಿನ ಸೂಕ್ಶ್ಮವನ್ನು ನೀವು ಚೆನ್ನಾಗಿ ಬಲ್ಲಿರಿ ಎನ್ನಿಸುತ್ತದೆ-ಅದು ಬಹಳ ಮುಖ್ಯ. ಅಂದ ಹಾಗೆ ಬಿಳಿಗಿರಿಯವರ ಲಿಮರಿಕ್ಕುಗಳು ಹಾಗು ಲಂಕೇಶರ ಕೆಲವು ಪದ್ಯಗಳನ್ನು ಹಾಕಿ-ಅವು ಬ್ಲಾಗಿನ ಸೂಕ್ಷ್ಮ ಅಭಿರುಚಿಗೆ ಮೆರುಗು ನೀಡುತ್ತವೆ. ಯುರೋಪಿನಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಮನೆ ಮನೆಗಳಿಗೆ ಕಲ್ಪಿಸುವ ಸೌಲಭ್ಯ ಬಂದ ಒಂದು ತಿಂಗಳ ನಂತರ, ಗೃಹಸ್ಥರು ಯಾವ ರೀತಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಒಂದು ಸಮೀಕ್ಷೆ ಮಾಡಿದರಂತೆ- ಶೇ.೯೦ಕ್ಕಿಂತ ಹೆಚ್ಚು ಪೋರ್ನ್ ಸೈಟ್ ನೋಡುವುದಕ್ಕೆ! ಪಿರಂಡಾಲೊ,ನ್ಯಾಷ್, ಲಾರೆನ್ಸ್ ಇವರಂಥ ಬರಹಗಾರರಿಲ್ಲದ ಸಮಾಜ ಇನ್ನೇನು ಮಾಡುತ್ತದೆ!
-ಕೆ.ಫಣಿರಾಜ್