ಎಂದೋ ಬರೆದು ಬಚ್ಚಿಟ್ಟಿದ್ದ ನಾಲ್ಕು ಪುಟ್ಟ ಹನಿಗಳನ್ನು ಈಗ ಧೈರ್ಯದಿಂದ ಪಬ್ಲಿಷ್ ಮಾಡುತ್ತಿದ್ದೇನೆ; ಸ್ವೀಕರಿಸಿ.. (!)
ನೀನು ದಟ್ಟ ಕಾಡಿನ ಮಧ್ಯೆ
ಸುಪ್ತವಾಗಿ ಹರಿಯುವ ನಿತ್ಯನದಿ
ನಾನು, ಯಾರಿಗೂ ಕಾಣದಂತೆ
ಗುಪ್ತವಾಗಿ ಬಂದು ನೀರು ಕುಡಿದುಹೋಗುವ ಹುಲಿ!
* * *
ಅರಳಿದೆ ನೀನು:
ಸೂರ್ಯನ ಬೆಳಕಿಗೆ ಅರಳುವಂತೆ ಹೂವು
ನಕ್ಕೆ ನೀನು:
ದುಂಬಿಯ ಕಚಗುಳಿಗೆ ನಗುವಂತೆ ಹೂವು
ಸುಖದಲ್ಲಿ ನರಳಿದೆ ನೀನು:
ಮಕರಂಧವನ್ನು ಕಳೆದುಕೊಳ್ಳುವಾಗ ನರಳುವಂತೆ ಹೂವು
* * *
ಇಲ್ಲಿ ಭರ್ಜರಿ ಚಳಿಯಿದೆ:
ಒಂದು ಅಗ್ಗಿಷ್ಟಿಕೆಗಾಗುವಷ್ಟು.
ಕನಿಷ್ಟ ಎರಡು ಕಂಬಳಿ ಬೇಕು;
ಅಥವಾ ಒಂದು ಐಶ್ವರ್ಯ ರೈ ಸಾಕು!
* * *
ನಿನ್ನ ಬೆವೆತ ದೇಹದ ಜೊತೆ
ನಾನು ಬೆರೆತು ರಚಿಸಿದ ಕಾವ್ಯದ ಹೆಸರು
'ಕಾಮ'
3 comments:
Blog is very good, But the gap b/w the writings is more. Really boring.
ಹನಿಯು ಹಳೆಯದಾದರೇನು...
ದನಿಯು ನವನವೀನ..
(ಮೊದ್ಲೆ ಎಲ್ಲೊ ಬರ್ದಿದ್ನನ ಈ commenta?) :)
@ naveen
ನಿಮ್ಮ ದೂರನ್ನು ದಾಖಲಿಸಿಕೊಳ್ಳಲಾಗಿದೆ. ಆದಷ್ಟು ಬೇಗ ಕ್ರಮ ಜರುಗಿಸುತ್ತೇವೆ. :)
@ alpazna
ಹ್ಮ್.. ನಿಜ ನಿಜ..! :)
ಮೊದ್ಲು ಬರ್ದಿದ್ಯಾ? ಎಲ್ಲಿ? ನಂಗಂತೂ ನೆನ್ಪಿಲ್ಲೆ..
Post a Comment