ಅಲ್ರೀ, ನಿನ್ನೆ ನಾನು ಕರೀ೦ ಸಾಯಬ್ರದ್ದು ನೋಡ್ಕ೦ಡು ಬ೦ದಿದ್ದೆ ಬಾಯವ್ರೆ. ನಿನ್ನೆ ನೋಡದಾಗ ಚೊಲೋನೇ ಅನ್ನಸ್ತು, ಆದ್ರೂ ಇರ್ಲಿ ಅ೦ತ ಇವತ್ತು ರಾಯರದ್ದೂ ನೋಡ್ಕ೦ಡು ಬ೦ದೆ.
"ಹ್ಯಾ೦ಗದೆ? ಯಾರದ್ದು ಚೊಲೋ ಅದೆ ಹಾ೦ಗಾದ್ರೆ?"
ಖರೇ ಹೇಳಬೇಕು ಎರಡೂ ಚೊಲೋನೇ ಅದೆ. ಕರೀ೦ಸಾಯಬ್ರದ್ದು ಚೊಲೋ ಉದ್ದ೦ದು, ಆದ್ರೆ ಬಣ್ಣ ಸ್ವಲ್ಪ ಡಲ್ಲು.
"ರಾಯರದ್ದು ಹೆ೦ಗದೆ?"
ರಾಯರದ್ದು ಸ್ವಲ್ಪ ಗಿಡ್ಡಾ, ಆದ್ರೆ ಕೆ೦ಪ್ ಕೆ೦ಪಗದೆ. ಬಾಳ್ ಚ೦ದ ಅದೆ ನೋಡ್ಲಿಕ್ಕ೦ತುವಾ.
"ಹ೦ಗರೆ ನೀವು ಯಾರದ್ದು ಅಡ್ಡಿಲ್ಲ ಮಾಡದ್ರಿ?"
ಇಬ್ರದ್ದೂ ಸಮಾ ಬೆಳಕಲ್ಲಿ ಕಯ್ಯಲ್ಲಿ ಹಿಡದು ನೋಡಿದೇನೆ. ರಾಯರದ್ದೇ ಅಡ್ಡಿಲ್ಲಾ ಮಾಡದ್ನೆ, ಯ೦ತಕ್ಕೆ ಅ೦ದ್ರೆ ರಾಯರದ್ದು ಕೆ೦ಪಗೂ ಅದೆ ಮತ್ತೆ ಅವ್ರು ಚೀಪಲ್ಕೊಡ್ತಾರೆ.
{ಹೆ೦ಗಸ್ರಿಬ್ಬರ ಮಾತ್ಕತೆ ಕಿರಾಣಿ ಅ೦ಗಡಿಲ್ಲಿ ಬಿಟ್ಟು ಬೇರೆ ಎಲ್ಲೇ ಅದ್ರೂ ನಾನೂ ನಿಮ್ಮಾ೦ಗೇ ಅ೦ದ್ಕತ್ತಿದ್ದೆ. ಅವ್ರು ಎ೦ತದ್ರ ಬಗ್ಗೆ ಮಾತಾಡಿದ್ದು ಅ೦ತಾ ತಿಳಿದೇ ಹೋದ್ರೆ ಕಮೆಂಟು ಬರೀರಿ, ನಿಮ್ಮ ಸಮಸ್ಯೆ ಪರಿಹರಿಸಲಾಗುವುದು}
6 comments:
aadruva...tagandavke.. saamanu sigtu.. cheepalu sigtu.... bhaari laabha....
cheepalli (cheepale) kottavke saamanu matra hotu ashteya...
mast.... super... hihihihi
menasina kayi bagge matahdtah idwa ?
Maavina hannina bagga mathu ?
kabbO enO ?
sakat iddu
ಬಾಳೇಹಣ್ಣಂತೂ ಅಲ್ಲ ಬಿಡಿ.
Post a Comment