ಕುಲ ಗೋತ್ರ- ಕಾಲ ಘಳಿಗೆ ಎಲ್ಲಾ ಕೂಡಿ ಬ೦ತು, ಸಕಾಲದಲ್ಲಿ ವಯ್ಯಾರದ ಬೆಡಗಿ ಭೂಮಿಕಾಳನ್ನು ಮದುವೆಯಾದ ನಮ್ಮ ಭೂಪತಿ. ಕೈತು೦ಬಿ ತುಳುಕುವಷ್ಟು ಸ೦ಬಳ, ಅದೃಷ್ಟವೇ ನಾಚುವ೦ತೆ ಕೇಳಿದಕೂಡಲೆ ಸಿಕ್ಕಿದ್ದ ರಜೆ, ಅನುರೂಪದ ಹೆ೦ಡತಿ ಜೊತೆಗಿರಲು ಸ್ವಗ೯ಕ್ಕೆ ಕಿಚ್ಚು ಹಚ್ಚಲೋ ಎ೦ಬ೦ತೆ ಸ್ವಿಜರ್ ಲ್ಯಾ೦ಡಿಗೆ ಹನಿಮೂನ್ ಗೆ ಹೋದ. ಆಲ್ಲಿ ಉಳ್ಕೊ೦ಡಿದ್ದು ಸ್ಟಾರ್ ಹೋಟೆಲಿನ ಹನಿಮೂನ್ ಸೂಟ್ನಲ್ಲಿ.
ಹೊಸ ಬಿಸಿ ತಾನೇ... ರೂಮಿನೊಳಗೆ ಬ೦ದವನೆ ಆತುರದಲ್ಲಿ ಬಾಗಿಲನ್ನು ಮುಚ್ಚಿ ಪತ್ನಿಯನ್ನು ಬರಸೆಳೆದು ಬಿಗಿದಪ್ಪಿ ಅದರುವ ಅಧರದ ಮಧುವ ಹೀರಲು ಕೊ೦ಚ ಬಾಗಿದ ಆಷ್ಟೇ... ಆಲ್ಲಿ ಪ್ರತ್ಯಕ್ಷವಾಯಿತು ಒ೦ದು ಭೂತ. ಕೀರಲು, ಕೀಚಲು ನಗು ನಕ್ಕು, "ಅಯ್ಯಾ ಗುರುವೇ, ನಾನೊಬ್ಬ ಭಗ್ನ ಪ್ರೇಮಿ, ಮೋಸಮಾಡಿದಳು ನನ್ನ ಪ್ರೇಯಸಿ. ನೋವು ಭರಿಸಲಾಗದೆ ನಾನು ಆತ್ಮಹತ್ಯೆ ಮಾಡಿಕೊ೦ಡೆ. ಯಾರೇಆಗಲಿ, ಪ್ರೀತಿಸುವದನ್ನು ನಾನು ನೋಡಲಾರೆ. ಹಾಗಾಗಿ ನನಗೊ೦ದು ಕೆಲಸಕೊಡು. ನಾನು ಕೆಲಸ ಮುಗಿಸಿ ಬರುವವರೆಗೆ ನೀವಿಬ್ಬರೂ ಆನ೦ದದಿ೦ದ ಇರಬಹುದು, ಇಲ್ಲವಾದರೆ ನಿಮಗೆ ತೊ೦ದರೆ ಕೊಡಬೇಕಾದೀತು" ಎ೦ದು ನಯವಾಗಿಯೇ ಬೆದರಿಕೆ ಹಾಕಿತು.
ಭೂಪತಿ ಕಂಗಾಲಾಗಿ ಹೋದ. ಏರಿದ್ದ ಉತ್ಸಾಹ ಜರ್ರನೆ ಇಳಿದೇ ಹೋಯಿತು!. ಸ್ವಲ್ಪ ಯೋಚನೆ ಮಾಡಿದವನಿಗೆ ಏನೋ ಹೊಳೆಯಿತು. ಮೊದಲ ಕೆಲಸವನ್ನೇ ಅಸಾಧ್ಯವಾದುದನ್ನ ನೀಡಿಬಿಟ್ಟರೆ ಮುಗೀತಲ್ಲಾ, ಎ೦ದಿಗೂ ಈ ಭೂತ ಮರಳಿಬ೦ದು ಕಾಟ ಕೊಡುವದಿಲ್ಲ ಎ೦ದು ಯೋಚಿಸಿದ.
"ಹೋಗು ಸಮುದ್ರದಲ್ಲಿ ಏಷ್ಟು ಮೀನುಗಳಿವೆ ಎ೦ದು ಏಣಿಸಿಕೊ೦ಡುಬಾ" ಅ೦ದ, ಮತ್ತು ಭೂತ ಹೊರಹೋಗುತ್ತಿದ್ದ೦ತೆ ಪತ್ನಿಯನ್ನ ಎಳೆದುಕೊ೦ಡು ಹಾಸಿಗೆ ಮೇಲೆ ಬಿದ್ದ. ಕೈಕರಣದಲ್ಲಿ 'ಮೇಲ್' ವಿಚಾರಣೆ ಮಾಡಿಕೊಳ್ಳುತ್ತಿದ್ದರು ಒಬ್ಬರಿಗೊಬ್ಬರು, ಅಷ್ಟರಲ್ಲಿ ಮರಳಿ ಬ೦ತು ಭೂತ. ಭೂಪತಿ, ಸಮುದ್ರದಲ್ಲಿ ಒಟ್ಟೂ ಇಷ್ಟು ಕೋಟಿ, ಇಷ್ಟು ಲಕ್ಷ , ಇ೦ತಿಷ್ಟು ಸಾವಿರದ ಇಷ್ಟು ನೂರು ಮೀನುಗಳಿವೆ ಅದರಲ್ಲಿ ಗ೦ಡು ಇಷ್ಟು, ಹೆಣ್ಣು ಇಷ್ಟು ಅ೦ತ ಪಟ ಪಟ ಪಟನೇ ಹೇಳಿತು. ತಬ್ಬಿಬ್ಬಾದ ಭೂಪತಿ ಅರೆ ಕ್ಷಣ ಯೋಚಿಸಿದವನೇ, ಹೋಗು ಆಕಾಶದ ಲ್ಲಿ ಎಷ್ಟು ನಕ್ಷತ್ರ ಇದೆ ಎಣಿಸಿ ಬಾ ಅ೦ದ. ಗಡಿಯಾರದ ಸೆಕೆ೦ಡಿನ ಮುಳ್ಳು ಅಧ೯ ಸುತ್ತು ಸುತ್ತುವದರೊಳಗಾಗಿ ಭೂತ ಮತ್ತೆ ಹಾಜರ್, ಲೆಕ್ಕಪತ್ರದೊ೦ದಿಗೆ. ಇದೊಳ್ಳೇ ಶಿಕ್ಕಲುಪಿಷ್ಟಿ ಸಹವಾಯ್ತಲ್ಲಾ ಅ೦ತ ಭೂಪತಿ ತಲೆ ಕೆರೆಯತೊಡಗಿದ.
ಇದನ್ನೆಲ್ಲ ಭೂಮಾತೆಯ೦ತೆ ಸಹನೆಯಿ೦ದ ನೊಡುತ್ತಿದ್ದ ಭೂಪತಿಯ ಪತ್ನಿ ಭೂಮಿಕಾ ಭೂತವನ್ನು ಕರೆದು, "ನಡೆ ನನ್ನೊ೦ದಿಗೆ ಈ ಹೋಟೆಲ್ ಟೆರೇಸ್ ಮೇಲೆ , ನಿನಗೆ ನಾನು ಕೆಲಸ ಕೊಡುತ್ತೇನೆ " ಅ೦ತಾ ಕರಕೊ೦ಡು ಹೋದಳು. ಹೋದ ವೇಗದಲ್ಲಿಯೇ ರೂಮಿಗೆ ವಾಪಾಸೂ ಬಂದಳು!.
ಆಮೇಲೆ ಸೆಕೆ೦ಡುಗಳ ರಾಶಿಯಾಗಿ ಅದರಿ೦ದ ನಿಮಿಷಗಳ ಗು೦ಪಾಗಿ ತಾಸುಗಾಳಾದವು, ತಾಸುಗಳು ಒಟ್ಟುಗೂಡಿ ದಿನ ವಾಯಿತು, ದಿನಗಳು ಒಟ್ಟಾಗಿ ವಾರವಾಯಿತು. ಹನಿಮೂನಿನ ಮಧುವೆಲ್ಲ ಹೀರಿ ಪತಿ ಪತ್ನಿಯರು ಆನ೦ದದಿ೦ದ ಊರಿಗೆ ಮರಳಲು ಸಿದ್ದರಾದರೂ ಭೂತ ಮಾತ್ರ ಪತ್ತೆಯೇ ಇಲ್ಲ. ಭೂಪತಿಗೆ ಪತ್ನಿಯ ಕಿತಾಪತಿ ಏನಿರಬಹುದು ಎ೦ಬುದೇ ತಿಳಿಯಲಿಲ್ಲ. ಎ೦ತೆ೦ತಾ ಕಷ್ಟದ ಕೆಲಸಕ್ಕೆ ಒ೦ದು ನಿಮಿಷಕ್ಕಿ೦ತ ಜಾಸ್ತಿ ಸಮಯ ತೆಗೆದುಕೊಳ್ಳದಿದ್ದ ಭೂತಕ್ಕೆ ಭೂಮಿಕಾ ಕೊಟ್ಟ ಕೆಲಸ ಏನಿರಬಹುದು ಏ೦ಬುದು ತಿಳಿಯಲಿಲ್ಲ. ಅವಳನ್ನೇ ಕೇಳಿದ. ಏನೂ ಹೇಳಲಿಲ್ಲ ಅವಳು, ಸೀದಾ ಅವನನ್ನು ಕರಕೊ೦ಡು ಟೆರೇಸ್ ಗೆ ಹೋದಳು.
ಅಲ್ಲಿ ಸ್ವಲ್ಪ ದೂರದ ಮೂಲೆಯಲ್ಲಿ ಕುಕ್ಕರುಗಾಲಿನಲ್ಲಿ ಭೂತ ಕುಳಿತಿತ್ತು. ಬಲಗೈ ತೋರುಬೆರಳನ್ನು ನಾಲಿಗೆಗೆ ತಾಗಿಸಿ ಒದ್ದೆ ಮಾಡುವದು, ಆಮೇಲೆ ಹೆಬ್ಬೆರಳೊ೦ದಿಗೆ ಸೇರಿಸಿ ಏಡಗೈನಿ೦ದ ಇಳಿಬಿದ್ದ ಎ೦ಥದೋ ಒ೦ದನ್ನು ಮೇಲಿ೦ದ ಕೆಳಗಿನ ವರೆಗೆ ಎ೦ಜಲು ಹಚ್ಚಿದ ಬೆರಳಿ೦ದ ತೀಡುವುದು - ಇದೇ ಕೆಲಸ ಯ೦ತ್ರದ೦ತೆ ನಿರ೦ತರವಾಗಿ ಸಾಗಿತ್ತು. "ಏನೇ ಮಾಡಿದೆ ಈ ಭೂತಕ್ಕೆ? ಮ೦ಕು ಹಿಡಿದ ಮ೦ಗನ೦ತಾಗಿದ್ಯಲ್ಲೇ? ಏನು ಕೆಲಸ ಕೊಟ್ಟೆ ನೀನು? " ಅ೦ತ ಭೂಮಿಕಾಳನ್ನು ಪ್ರಶ್ನಿಸಿದ ಭೂಪತಿ.
"ಅವತ್ತು ನಾನು ಭೂತವನ್ನ ಸೀದಾ ಕರಕೊ೦ಡು ಟೆರೇಸ್ಗೆ ಬ೦ದೆ, ಇಲ್ಲಿ ಬ೦ದು ನನ್ನ ತೊಡೆಮಧ್ಯ ಕೈ ಹಾಕಿ ಇದ್ದಿದ್ದರಲ್ಲಿ ಉದ್ದಕೂದಲು ಕಿತ್ಗೊಟ್ಟು ಇದನ್ನ ನೆಟ್ಟಗೆ ಮಾಡಪ್ಪಾ ಭೂತರಾಯಾ, ಆಮೇಲೆ ನಿನ್ಗೆ ಬೇರೇ ಕೆಲಸ ಹೇಳ್ತೀನಿ, ಆಲಿವರ್ಗೂ ನಮ್ಮ ಹನಿಮೂನು ಸಾಗತ್ತೆ ಅ೦ದೆ. ಪಾಪ ಒ೦ದುವಾರ ಆಯ್ತು ಇನ್ನೂ ಇನ್ನೂ ಮುಗ್ದಿಲ್ಲಾ ಅನ್ಸುತ್ತೆ."
ತಣ್ಣಗೆ ಹೇಳಿದ ಭೂಮಿಕಾ ಬಳುಕುತ್ತಾ ಮೆಟ್ಟಿಲಿಳಿದು ಹೋದಳು.
ಭೂಪತಿ ಒಮ್ಮೆ ಬೆಪ್ಪುಭೂತವನ್ನೂ, ಮತ್ತೊಮ್ಮೆ ಹೆಂಡತಿ ಹೋದ ದಾರಿಯನ್ನೂ ನೋಡುತ್ತ ನಿಂತ.
Saturday, August 18, 2007
Wednesday, August 8, 2007
ಶ್ಯಾಮಸುಂದರನ ಸಮಸ್ಯೆ
ಶ್ಯಾಮಸುಂದರನಿಗೆ ಎಲ್ಲದೂ ಸರಿಯಾಗಿಯೇ ಇತ್ತು. ಸುಖ ಸಂಸಾರ, ಒಂದು ಪುಟ್ಟ ಮಗು, ಒಳ್ಳೇ ಕೆಲಸ. ಎಲ್ಲ ಚೆನ್ನಾಗಿದೆ ಅಂದುಕೊಂಡು ಒಂದು ಬೆಳಗ್ಗೆ ಎದ್ದು ಬಚ್ಚಲಿಗೆ ಬಂದ ಆತನಿಗೆ ತನ್ನ ಬಲ ಬೀಜ ಯಾಕೋ ನೀಲಿಯಾಗಿದೆ ಅನ್ನಿಸಿತು. ಮತ್ತೊಮ್ಮೆ ಸರಿಯಾಗಿ ನೋಡಿಕೊಂಡ - ಹೌದು, ನೀಲಿಯಾಗಿದೆ. ಏನು ಮಾಡುವುದೋ ತಿಳಿಯಲಿಲ್ಲ. ಹೆಂಡತಿಗೆ ಹೇಳಲು ಯಾಕೋ ಮುಜುಗರ ಅನ್ನಿಸಿತು. ಗಡಿಬಿಡಿಯಲ್ಲಿ ತಿಂಡಿ ತಿಂದು, ಮನೆ ಹತ್ತಿರದ ನರ್ಸಿಂಗ್ ಹೋಮ್ ಗೆ ಓಡಿದ.
ಅಲ್ಲಿನ ಡಾಕ್ಟರು ಹೊಸಬ. ಆತನಿಗೂ ಇದೇನು ಎಂದು ಹೊಳೆಯಲಿಲ್ಲ. ಆದರೆ ಮರ್ಯಾದೆ ಪ್ರಶ್ನೆ. ಮೈ ನೀಲಿಯಾಗುವುದು ವಿಷ ಪ್ರಾಶನ ಆದಾಗ ಎಂಬ ಸಿಂಪಲ್ ಸತ್ಯ ಗೊತ್ತಿತ್ತು ಅವನಿಗೆ. "ನೋಡಿ ಇವರೇ, ನಿಮಗೆ ಬಹಳ ಸೀರಿಯಸ್ ಇನ್ಫೆಕ್ಷನ್ ಆಗಿದೆ, ಲೇಸರ್ ಚಿಕಿತ್ಸೆ ಮಾಡಿ ಅದನ್ನ ತೆಗೆದು ಹಾಕುವುದೊಂದೇ ಉಳಿದ ದಾರಿ"ಎಂದ. ಶ್ಯಾಮಸುಂದರನಿಗೂ ಬೇರೆ ದಾರಿ ಉಳಿದಿರಲಿಲ್ಲ. ಆಪರೇಷನ್ ಗೆ ಹೂಂ ಅನ್ನಬೇಕಾಯಿತು. ಹೆಂಡತಿಗೆ ವಿಷಯ ತಿಳಿಸಿದ. ಆವತ್ತೇ ಮಧ್ಯಾಹ್ನದೊಳಗೆ ಆಪರೇಶನ್ ಕೂಡ ಆಗಿ, ಮಾರನೇ ದಿನ ಮತ್ತೆ ಮಾಮೂಲಿ ಮನುಷ್ಯನಾದ ಶ್ಯಾಮ.
ಹದಿನೈದು ದಿನ ಕಳೆದಿರಬಹುದು, ಉಳಿದೊಂದು ಎಡ ಬೀಜ ಕೂಡ ನೀಲಿಯಾಗಿತ್ತು! ಬಿಳಿಚಿದ ಮುಖ ಹೊತ್ತ ಶ್ಯಾಮಸುಂದರ, ಅದೇ ವೈದ್ಯರ ಬಳಿಗೆ ಮತ್ತೆ ಓಡಿದ. ಡಾಕ್ಟರಿಗೆ ತಲೆ ಕೆಟ್ಟಿತು! ಹೋದ್ಯಾ ಪಿಶಾಚಿ ಅಂದ್ರೆ.. ಗಾದೆ ನೆನಪಾಯಿತು. ಶ್ಯಾಮನನ್ನ ಕೂರಿಸಿ ಸಾಂತ್ವನ ಹೇಳಿದರು, "ನೋಡಿ, ನಿಮಗೆ ಮದುವೆಯಾಗಿದೆ, ಮಗು ಇದೆ, ಮುಂದೆ ಸಂತಾನವಾಗದೇ ಇದ್ದರೂ ತೊಂದರೆಯಿಲ್ಲ. ಆರೋಗ್ಯ ಮುಖ್ಯ.ತೆಗೆದು ಬಿಡೋಣ" ಅಂದರು. ಶ್ಯಾಮನಿಗೋ, ಕೋಲೇ ಬಸವನಂತೆ ತಲೆಯಾಡಿಸುವುದು ಬಿಟ್ಟು ಬೇರೆ ಭಾಗ್ಯವುಳಿದಿರಲಿಲ್ಲ.
ಇನ್ನೊಂದು ವಾರವಾಗಿದೆಯಷ್ಟೇ, ಅವನ "ಅದೂ" ನೀಲಿಯಾಯಿತು! ಶ್ಯಾಮನಿಗೆ ಬಿಕ್ಕಿ ಬಿಕ್ಕಿ ಅಳಬೇಕು ಅನ್ನಿಸಿತು. ಮನಸ್ಸು ಗಟ್ಟಿ ಮಾಡಿಕೊಂಡು ಸೀದಾ ನರ್ಸಿಂಗ್ ಹೋಮ್ ಗೆ ಬಂದ. ಡಾಕ್ಟರು ಇವನನ್ನ ನೋಡಿದವರೇ ಮತ್ತೇನು ಕಾದಿದೆಯಪ್ಪಾ ಅಂತ ಯೋಚಿಸುವಷ್ಟರಲ್ಲೇ ಅವರ ಕಾಲಿಗೇ ಬಿದ್ದು ಗೋಳೋ ಅಂತ ಅತ್ತು ಬಿಟ್ಟ ಅವನು. ತನ್ನ ಸಮಸ್ಯೆ ಬುಡಕ್ಕೇ ಕುತ್ತು ತಂದಿರುವುದನ್ನು ಹೇಳಿ ಏನಾದರೂ ಮಾಡಿ ಬಚಾವು ಮಾಡಬೇಕು ಅಂತ ಬೇಡಿಕೊಂಡ. ವೈದ್ಯ ಮಹಾಶಯನಿಗೆ ಸಮಸ್ಯೆ ಏನು ಅಂತ ಗೊತ್ತಿದ್ದರೆ ತಾನೆ ಬಚಾವು ಮಾಡುವುದು?! ಎಂದಿನಂತೆ ಪ್ರವಚನ ಆರಂಭಿಸಿದ- " ನಿಮ್ಮ ಜೀವ ಮುಖ್ಯ, ಇತರ ಅಂಗಗಳಿಗೆ ಹರಡಿ ಖಾಯಿಲೆ ಜೋರಾಗಿ ಪ್ರಾಣಕ್ಕೇ ಕುತ್ತು ಬರುವ ಬದಲು, ಉಳಿದ ಅದನ್ನೂ ತೆಗೆದು ಬಿಡೋಣ, ಕೃತಕವಾಗಿ ಏನಾದರೂ ಜೋಡಿಸಿದರಾಯಿತು,ಯಾರಿಗೂ ನಿಮ್ಮ ಊನ ತಿಳಿಯುವುದಿಲ್ಲ, ಸಾಮಾನ್ಯ ಮನುಷ್ಯರಂತೆಯೇ ಕಾಣುತ್ತೀರಿ" ಶ್ಯಾಮ ತನ್ನ ಜೀವಮಾನದಲ್ಲಿ ಮೊತ್ತ ಮೊದಲ ಬಾರಿಗೆ ಎರಡು ಬಾರಿ ಕುತ್ತಿಗೆ ಅಲ್ಲಾಡಿಸಿ ಹೂಂ ಅನ್ನಲು ೨ ನಿಮಿಷ ತೆಗೆದುಕೊಂಡ.
ಪ್ಲಾಸ್ಟಿಕ್ ಅಂಗ ಹೊತ್ತು ಮನೆಗೆ ತೆರಳಿದ ಶ್ಯಾಮಸುಂದರ. ಹತ್ತು ದಿನಗಳಾಗಿಲ್ಲ, ಒಂದು ಬೆಳಗ್ಗೆದ್ದು ನೋಡಿದಾಗ ಅವನ ಪ್ಲಾಸ್ಟಿಕ್ಕಿದ್ದೂ ನೀಲಿಯಾಗಿತ್ತು! ಹುಚ್ಚೇ ಹಿಡಿಯಿತು ಅವನಿಗೆ. ಉಟ್ಟ ಬಟ್ಟೆಯಲ್ಲೇ ಕಿತ್ತಾ ಬಿದ್ದು ವೈದ್ಯರಲ್ಲಿಗೆ ದೌಡಾಯಿಸಿದ. ಆತನ ಗಡಿಬಿಡಿ ನೋಡಿ ಮನೆಯಲ್ಲಿದ್ದ ಡಾಕ್ಟರಿಗೆ ಫೋನಿಸಲಾಯಿತು, ಅವರೂ ಓಡಿ ಬಂದರು. ಶ್ಯಾಮ ಮಾತಾಡುವ ಸ್ಠಿತಿಯಲ್ಲೂ ಇರಲಿಲ್ಲ, ಸುಮ್ಮನೇ ಅತ್ತ ಕಡೆ ಕೈ ತೋರಿಸಿದ ಅಷ್ಟೇ! ಅವರಿಗೆ ಮೈ ಪರಚಿಕೊಳ್ಳುವಂತಾಯಿತು. ಕೂಡಲೇ ತಮ್ಮ ಗುರುಗಳಿಗೆ ಫೋನು ಮಾಡಿ ಈ ಕೇಸನ್ನೂ, ಅದರ ಗಂಭೀರತೆಯನ್ನೂ ವಿವರಿಸಿ, ಬರುವಂತೆ ಕೋರಿದರು.
ಒಂದು ತಾಸು ಕಳೆಯುವುದರೊಳಗೆ ದೊಡ್ಡ ಡಾಕ್ಟ್ರ ಆಗಮನವಾಯಿತು. ಶಿಷ್ಯ ಸಮೇತರಾಗಿ ಶ್ಯಾಮನನ್ನ ಕರೆದುಕೊಂಡು ಕೋಣೆಯೊಂದಕ್ಕೆ ತೆರಳಿ ಹಾಸಿಗೆ ಮೇಲೆ ಮಲಗಿಸಿ - ಕನ್ನಡಕವೇರಿಸಿ ಸಮಸ್ಯೆಯನ್ನ ಕೂಲಂಕಷವಾಗಿ ಪರಿಶೀಲಿಸಿದ ಅವರು, ಗಂಭೀರವದನರಾಗಿ,
"ನಿಮ್ಮ ಚಡ್ಡಿ ಬದಲಿಸಿ, ಅದು ಬಣ್ಣ ಬಿಡುತ್ತಿದೆ" - ಅಂತಂದು ಅಲ್ಲಿಂದ ತೆರಳಿದರು.
[ನೋಟ್: ಇಲ್ಲಿ ಹಾಕಿರುವ ಚಿತ್ರ ಶ್ರೀ ಎಂ.ಎಸ್. ಮೂರ್ತಿಯವರ ಕುಂಚದಿಂದ ಅರಳಿದ್ದು. 'ಅವಧಿ'ಯಲ್ಲಿ 'ಮೋಟುಗೋಡೆ'ಯ ಬಗ್ಗೆ ಪ್ರಕಟವಾಗಿದ್ದ ವರದಿಯನ್ನೂ, ಮೋಟುಗೋಡೆಯ ಮಸ್ತ್ ಮಸ್ತ್ ಪೋಸ್ಟುಗಳನ್ನೂ ಓದಿ/ನೋಡಿ 'ಪ್ರೇರಿತ'ರಾದ ಅವರು ಮತ್ತೆ ಕುಂಚವನ್ನು ಕೈಗೆತ್ತಿಕೊಂಡಿರುವುದು ಬಹಳ ಬಹಳ ಖುಷಿಯ ವಿಷಯ. ಚಿತ್ರಕ್ಕಾಗಿ ಎಂ.ಎಸ್. ಮೂರ್ತಿಯವರಿಗೂ, 'ಅವಧಿ'ಗೂ ನಮ್ಮ ಕೃತಜ್ಞತೆ.]
Friday, August 3, 2007
ಮೋಟುಗೋಡೆ ಹತ್ತು..!
ಯಾರಿಗೆ ಗೊತ್ತಿತ್ತು? ಇಷ್ಟೆಲ್ಲಾ ಆಗೊತ್ತೇಂತ? ಜನವರಿ ಏಳು, ಎರಡ್ಸಾವ್ರದ ಏಳರ ಸಂಜೆ ಏಳರ ಹೊತ್ತಿಗೆ ಕುಡಿಯುತ್ತಿದ್ದ ಬೈಟೂ ಚಾದಿಂದ ಏಳುತ್ತಿದ್ದ ಹಬೆಯಂತಹ ಹೊಗೆಯನ್ನು ನೋಡುತ್ತಾ ನಾನು-ಸಂದೀಪ-ಶ್ರೀನಿಧಿ ಇಂಥದ್ದೊಂದು ಬ್ಲಾಗು ಮಾಡುವ ಬಗ್ಗೆ ಆಲೋಚಿಸಿದಾಗ ಅದು ಇಷ್ಟೆಲ್ಲಾ ಏಳ್ಗೆ ಸಾಧಿಸಬಹುದೆಂಬ ಕಲ್ಪನೆ ಸಹ ನಮಗಿರಲಿಲ್ಲ. ನಮಗಿದ್ದದ್ದು ಜನ ಇದನ್ನು ಸ್ವೀಕರಿಸುತ್ತಾರೋ ಇಲ್ಲವೋ ಎಂಬ ಆತಂಕ ಒಂದೇ. ಏನಾದರಾಗಲಿ, ನೋಡೇ ಬಿಡುವಾ ಎಂದು ಧೈರ್ಯ ಮಾಡುವ ಹೊತ್ತಿಗೆ ಎರಡನೇ ಸುತ್ತಿನ ಚಾ ಸಹ ಮುಗಿದಿತ್ತು. ಹಬೆ ಗಾಳಿಯಲ್ಲಿ ಲೀನವಾಗಿತ್ತು.
ಮರುದಿನ ಬೆಳಗ್ಗೆ ನಾನು ಇಂಟ್ರೊಡಕ್ಷನ್ ಟೈಪಿಸುವಾಗ ಸಹ ಸಣ್ಣ ಆತಂಕ, ಚಹಾದ ಹಬೆಯಂತೆ ಸುಳಿದಾಡುತ್ತಿದ್ದುದು ಸುಳ್ಳಲ್ಲ. ಬ್ರೀಫಾಗಿ (ಅಂದ್ರೆ ಬರೀ 'ಬ್ರೀಫ್' ಹಾಕ್ಕೊಂಡು ಅಂತ ಅಲ್ಲ!) 'ಇಣುಕಿದಾಗ ಏನು ಕಂಡೀತು?' ಎಂಬುದರ ಬಗ್ಗೆ ಬರೆದೆ. ಸುಮಾರು ಜನ ಹಣುಕಿ ನಮ್ಮ ಪ್ರಯತ್ನಕ್ಕೆ ಶುಭ ಕೋರಿದರು.. ಹುರುಪಿನಲ್ಲಿ ಸುಮಾರು ಪೋಸ್ಟಿಂಗುಗಳನ್ನೂ ಕೊಟ್ಟೆವು. ಆಮೇಲೆ ನಮ್ಮೊಂದಿಗೆ ಮತ್ತೊಬ್ಬ ತಿಣುಕಾಡುವವನಾಗಿ ಹರ್ಷನೂ ಸೇರಿಕೊಂಡ. ಹವ್ಯಕ ಸೊಗಡಿನ ದ್ವಂದ್ವಾರ್ಥದ ಸಂಭಾಷಣೆಯಿಂದ ಹಿಡಿದು ಕೋನಾರ್ಕಿನ ಕ್ಲಿಕ್ಕಿನವರೆಗೆ, ಪೋಲೀ ಜೋಕುಗಳಿಂದ ಹಿಡಿದು ಗಂಗಾಧರ ಚಿತ್ತಾಲರ ಕವನದವರೆಗೆ ನಾವು ಹೆಕ್ಕಿ ಹೆಕ್ಕಿ ಕೊಟ್ಟಿದ್ದನ್ನು ನೀವು ಓದಿದ್ದೀರಿ, ನಕ್ಕಿದ್ದೀರಿ, ಪ್ರತಿಕ್ರಿಯಿಸಿದ್ದೀರಿ.
ನಮ್ಮ ಪ್ರಯತ್ನಕ್ಕೆ ಸಿಕ್ಕ ಪ್ರಶಂಸೆಗೆ ನಾವೇ ದಂಗಾಗುವಂತಾದದ್ದು ಕನ್ನಡದ ಪ್ರತಿಷ್ಠಿತ ವೆಬ್‍ಸೈಟ್ 'ದಟ್ಸ್ ಕನ್ನಡ' ನಮ್ಮ ಬ್ಲಾಗ್ ಬಗ್ಗೆ ಬರೆದಾಗ! ಅವರು ಬರೆದದ್ದೇ ಬರೆದದ್ದು, ಮೋಟುಗೋಡೆಯನ್ನು ಹತ್ತುವವರ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಜಾಸ್ತಿಯಾಗಿಬಿಟ್ಟಿತು. ಮೇ ೧೮ರ ಅದೊಂದೇ ದಿನ ೧೦೦೦ಕ್ಕೂ ಹೆಚ್ಚು ಹಿಟ್ಟು ಬಿದ್ದಿದ್ದು ನಮಗೆ ಅವಚಿಕೊಳ್ಳಲಾಗದಷ್ಟು ಆಶ್ಚರ್ಯ ತಂದ ಸಂಗತಿ. ಇತ್ತೀಚೆಗೆ 'ಅವಧಿ' ಸಹ ನಮ್ಮ ಪ್ರಯತ್ನವನ್ನು ಶ್ಲಾಘಿಸಿರುವುದು ಇಲ್ಲಿ ಉಲ್ಲೇಖಾರ್ಹ.
ಎಲ್ಲರೂ ಬರೀ ಹೊಗಳಿದ್ದಾರೆ ಅಂತೇನೂ ಇಲ್ಲ. 'ಕಾಂಡಮ್‍ಡಾಟ್ಸ್' ಎಂಬ, ಮೋಟುಗೋಡೆಯಲ್ಲಿ ಸಹ ಬಳಸಲು ನಾವು ಹಿಂದೆ-ಮುಂದೆ ನೋಡುವಂತಹ ವಿಚಿತ್ರ ಹೆಸರಿಟ್ಟುಕೊಂಡಿರುವ ಮಹನೀಯರು ಅವಾಚ್ಯ ಶಬ್ದಗಳನ್ನು ಬಳಸಿ ಪ್ರತಿಕ್ರಿಯಿಸಿದ್ದರು. ಅವರಿಗೆ ಈಗಾಗಲೇ ನಾವು ಸರಿಯಾಗಿ ಸಮಜಾಯಿಷಿ ನೀಡಿದ್ದೇವೆ. ಉಪ್ಪು , ಹುಳಿ ಖಾರ ಎಲ್ಲದೂ ಬೇಕು ಒಳ್ಳೇ ಅಡುಗೆ ಆಗೋಕೆ!
ನಾವೇನು ಬಹಳ ದೊಡ್ಡ ಸಾಧನೆ ಮಾಡಿದ್ದೇವೆ ಅಂತ ಹೇಳಿಕೊಳ್ಳುತ್ತಿಲ್ಲ; ಆದರೆ ನಮ್ಮ ಇಂತಹ ಒಂದು ಪ್ರಯತ್ನವನ್ನು ನೀವು ಸ್ವೀಕರಿಸಿದಿರಲ್ಲ, ಅದು ನಮಗೆ ತುಂಬಾ ಖುಷಿಯ ವಿಷಯ. ಮೂಡ್‍ಔಟ್ ಆಗಿದ್ದಾಗ ಇಲ್ಲಿ ಒಂದು ರೌಂಡು ಹಣುಕಿ ಹೋಗಿದ್ದೀರಿ, ಆಫೀಸಿನಲ್ಲಿ ಯಾರಿಗೂ ಕಾಣದಂತೆ ಕದ್ದೂ-ಮುಚ್ಚಿ ನೋಡಿದ್ದೀರಿ, ಯಾರೋ ಬಂದರು ಅಂತ ವಿಂಡೋವನ್ನು ತಕ್ಷಣ ಮಿನಿಮೈಸ್ ಮಾಡಿದ್ದೀರಿ, ಬಂದ ನಗೆಯನ್ನು ಹತ್ತಿಕ್ಕಲಾಗದೇ ಟಾಯ್ಲೆಟ್ಟಿಗೆ ಹೋಗಿ ನಕ್ಕಿದ್ದೀರಿ, ಮಾಡಲೋ ಬ್ಯಾಡೋ ಎಂಬ ಡೈಲೆಮಾದ ನಡುವೆಯೂ ಪ್ರತಿಕ್ರಿಯಿಸಿದ್ದೀರಿ, ನಮ್ಮ ಐಡಿಗಳಿಗೆ ಪರ್ಸನಲ್ ಮೇಲ್ ಕಳಿಸಿ ಪ್ರೋತ್ಸಾಹಿಸಿದ್ದೀರಿ, ಪರಿಧಿ ಮೀರಿ ಬರೆದಾಗ ನಮ್ಮನ್ನು ಎಚ್ಚರಿಸಿದ್ದೀರಿ, ಕೆಲವರು ಈ ಬ್ಲಾಗಿಗೆ 'ಕಾಂಟ್ರಿಬ್ಯೂಟ್' ಮಾಡಿದ್ದೀರಿ... ಎಲ್ಲರಿಗೂ ಎಲ್ಲದಕ್ಕೂ ನಾವು ಋಣಿಗಳು. ಕೆಲವರು ಈ ಬ್ಲಾಗ್ ಓದಿದ್ದರೂ ನಾವು ಕೇಳಿದಾಗ ಹುಸಿನಗೆಯಾಡುತ್ತಾ 'ಹೌದಾ? ಗೊತ್ತೇ ಇಲ್ಲ ನಂಗೆ ಅದರ ಬಗ್ಗೆ!' ಎಂದಿದ್ದೀರಿ... ಹಹ್ಹ, ನಿಮ್ಮ ಸಂಕೋಚ ನಮಗರ್ಥವಾಗುತ್ತದೆ ಬಿಡಿ, ಎನಿವೇ, ನಿಮಗೂ ಥ್ಯಾಂಕ್ಸ್!
ಮೋಟುಗೋಡೆಗೆ ಬಿದ್ದ ಗುದ್ದುಗಳ ಸಂಖ್ಯೆ ಹತ್ತು ಸಾವಿರ ದಾಟುತ್ತಿರುವ ಈ ಸಂದರ್ಭದಲ್ಲಿ ನಿಮಗೆಲ್ಲಾ ಈ ಹೋಟೆಲಿನಲ್ಲಿ ಒಂದು ಚಹ ಕುಡಿಸೋಣ ಎಂದು ಪ್ಲ್ಯಾನ್ ಮಾಡಿದ್ದೇವೆ. ಬರ್ತೀರಾ ತಾನೇ? :)

Subscribe to:
Posts (Atom)