ಆದರೆ ಕಾಂಡೋಮಿಗೆ ಪರಿಮಳ ಯಾಕಿರಬೇಕು, ಅದು ಯಾವ ಕಾರಣಕ್ಕೆ ಜನಕ್ಕೆ ಇಷ್ಟವಾಗಬೇಕು ಎಂಬುದು ನನ್ನ ವೈಯಕ್ತಿಕ ಕುತೂಹಲ ಮತ್ತು ಆಶ್ಚರ್ಯ; ಅದಿರಲಿ. ;)
* * *
ಚೀನಾದ ಬೀಜಿಂಗ್‍ನಲ್ಲಿ ಕಳೆದ ಜುಲೈ ಹನ್ನೊಂದರಂದು 'ಕಾಂಡೋಮ್ ಫ್ಯಾಶನ್ ಶೋ' ನಡೆಯಿತು. ಚೀನಾದ ಅತಿ ದೊಡ್ಡ ಕಾಂಡೋಮ್ ತಯಾರಿಕಾ ಸಂಸ್ಥೆ Guilin Latex Factory, ಏಡ್ಸ್ ವಿರುದ್ಧ ಕಾಂಡೋಮ್ ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಈ ಫ್ಯಾಶನ್ ಶೋನಲ್ಲಿ ಲಲನೆಯರು ವಿವಿಧ ವಿನ್ಯಾಸದ, ವಿವಿಧ ಅಳತೆಗಳ ಕಾಂಡೋಮಿನಿಂದ ಹೆಣೆಯಲ್ಪಟ್ಟಿದ್ದ ಸ್ಕರ್ಟು, ಗೌನು, ನೈಟ್ ಡ್ರೆಸ್‍ಗಳು, ಬಿಕಿನಿಗಳನ್ನು ತೊಟ್ಟು ಪ್ರದರ್ಶನ ನಡೆಸಿದರು. ಅದರ ಕೆಲವು ಫೋಟೋಗಳು, ನಿಮಗಾಗಿ:
ಈ ಜಗತ್ತಿನಲ್ಲಿ ಏನೇನೆಲ್ಲಾ ನಡೆಯೊತ್ತಪ್ಪಾ ಅನ್ನೋದು ನನ್ನ ಎರಡನೇ ಆಶ್ಚರ್ಯ; ಅದಿರಲಿ. ;)
* * *
ಪಶ್ಚಿಮ ನೆದರ್‌ಲ್ಯಾಂಡ್ಸ್‍ನಲ್ಲಿ ಇತ್ತೀಚಿಗೆ ಹಾಟ್ ಏರ್ ಬಲೂನ್ ಒಂದು ಆಗಸದಲ್ಲಿ ತೇಲುತ್ತಿತ್ತು. ವಿಶೇಷವೇನೆಂದರೆ, ಇದು ಜಗತ್ತಿನ ಅತಿ ದೊಡ್ಡ ಕಾಂಡೋಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಗಿನ್ನಿಸ್ ಬುಕ್‍ನ ಪುಟಗಳೊಳಗೆ ಸೇರಲಿದೆಯಂತೆ. ಜನರಲ್ಲಿ ಸೇಫ್ ಸೆಕ್ಸ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಕಾಂಡೋಮ್-ಬಲೂನ್ ಹಾರಿಬಿಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತಂತೆ.
ಕಾಂಡೋಮುಗಳು ಯಾವ್ಯಾವ ಉದ್ದೇಶಗಳಿಗೆಲ್ಲ ತಯಾರಿಸಲ್ಪಡುತ್ತವೆಯಪ್ಪಾ ಎಂಬುದು ನನ್ನ ಮೂರನೇ ಆಶ್ಚರ್ಯ; ಅದೂ ಇರಲಿ. ;)
* * *
ಜಗತ್ತಿನ ಅತಿ ಹಳೆಯ ಕಾಂಡೋಮ್ ಯಾವುದು? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ:

ಲಂಡನ್‍ನ ಸ್ವೀಡನ್‍ನಲ್ಲಿ ದೊರೆತಿರುವ ಸುಮಾರು ೧೬೪೦ರಷ್ಟು ವರ್ಷ ಹಳೆಯದಾದ ಇದು ಇನ್ನೂ ಹಾಳಾಗದೆ ಉಳಿದಿದೆ. ಇದೊಂದು ಮರುಬಳಕೆ ಮಾಡಬಹುದಾದ (reusable) ಕಾಂಡೋಮ್. 'ಬಳಸುವ ಮುನ್ನ ಬಿಸಿ ಹಾಲಿನಲ್ಲಿ ಅದ್ದಿ ತೆಗೆಯುವುದು ಖಾಯಿಲೆಗಳಿಂದ ದೂರವಿರುವ ಉದ್ದೇಶದಿಂದ ಉತ್ತಮ' ಎಂದು ಇದರ ಮ್ಯಾನ್ಯುಯಲ್ ಮೇಲೆ ಲ್ಯಾಟಿನ್ ಭಾಷೆಯಲ್ಲಿ ಬರೆದಿದ್ದಾರೆ. ಹಂದಿಯ ಕರುಳಿನಿಂದ ತಯಾರಿಸಲ್ಪಟ್ಟಿರುವ ಇದು, ೨೫೦ ಅತಿ ಹಳೆಯ ಲೈಂಗಿಕ ಸಾಮಗ್ರಿಗಳಲ್ಲಿ ಒಂದಾಗಿದೆ. ಆಸ್ಟ್ರಿಯಾದ Tirolean County Museum ನಲ್ಲಿ ಇತ್ತೀಚೆಗೆ ಇದು ಪ್ರದರ್ಶಿಸಲ್ಪಟ್ಟಿತು.
* * *
ಆಶ್ಚರ್ಯ ಪಟ್ಟಿದ್ದು ಸಾಕು, ಈಗ ಜಗತ್ತಿನ ಪ್ರಸಿದ್ಧ ಕಾಂಡೋಮ್ ತಯಾರಿಕಾ ಕಂಪನಿ 'ಡ್ಯೂರೆಕ್ಸ್'ನ ಕೆಲವು ಜಾಣ ಜಾಹಿರಾತುಗಳನ್ನು ನೋಡಿ, ನಗಿ:



[ಮಾಹಿತಿ ಮತ್ತು ಚಿತ್ರಗಳ ಲಿಂಕ್ ಕಳುಹಿಸಿಕೊಟ್ಟವರು: ರೋಹಿತ್ ಕೆ.ಜಿ.]