Showing posts with label ಹಾಸ್ಯ. Show all posts
Showing posts with label ಹಾಸ್ಯ. Show all posts

Friday, October 19, 2012

ಗುಬ್ಬಿ ಚಟ

"ಗುಬ್ಬಿ ಚಟ" ಅನ್ನೋ ಈ ನಾಣ್ಣುಡಿಯನ್ನ ತಾವು ಕೇಳಿರಲೇಬೇಕು. ಅದ್ರ ಅರ್ಥನೂ ಗೊತ್ತಿರಲೇ ಬೇಕು. ಆದ್ರೆ  ಗುಬ್ಬಿ ಚಟ ಅನ್ನೋ ಗಾದೆ ಅಥವಾ ಮಾತು ಹ್ಯಾಗೆ ಬಂತು ಗೊತ್ತ? ಇಲ್ಲಿ ಕೇಳಿ ಅದರ ಕತೆ.

ಒಂದಲ್ಲ ಒಂದು ದೊಡ್ಡ ಕಾಡಲ್ಲಿ ಒಂದು ದೊಡ್ಡ ಆನೆ ಇತ್ತಂತೆ. ಅದಕ್ಕೆ ಒಂದು  ದಿನ ಯಾಕೊ ಬೆನ್ನಲ್ಲಿ ತುರಿಕೆ ಬಂತು. ಅದು ಅಂತಿಂತಾ ಜಾಗ ಅಲ್ಲ, ಅದೆಲ್ಲೋ ಕೆರಕೊಳೋದು ಕಷ್ಟವಾದ ಜಾಗ. ತುರಿಕೆಯಿಂದ ಅದು ಅಸಹನೆಗೆ  ಒಳಗಾಯಿತು, ಘೀಳಿಡುತ್ತಾ ಅತ್ತ ಇತ್ತ ಸುತ್ತ ಮುತ್ತ ತಿರುಗಾಡ ತೊಡಗಿತು. ಇದನ್ನೆಲ್ಲಾ ಒಂದು ಪುಟ್ಟ ಗುಬ್ಬಿ ಅಲ್ಲೇ ಪಕ್ಕದ ಮರದಮೇಲೆ  ಕೂತು ನೋಡುತ್ತಿತ್ತು. ಅದಕ್ಕೆ ಆನೆಯ ಅಂತರಾಳ ಅರ್ಥವಾಗಲಿಲ್ಲ, ತನಗೆ ತಿಳಿದಂಗೆ ಅದು ಯೋಚಿಸತೊಡಗಿತು.

ಆನೆ ಬೆದೆಗೆ ಬಂದಿದೆ ಅದರ ಸಾಥಿ ಹಾಥಿಗಾಗಿ ಘಿಳಿಡುತ್ತಿದೆ ಅಂದುಕೊಂಡಿತು. ಆನೆಯ  ತುರಿಕೆಯ ಅಸಹನೆ ಹೆಚ್ಚಾಗುತ್ತ ಸಾಗಿತು. ಗುಬ್ಬಿ ಅತ್ತಿತ್ತ ಸುತ್ತಮುತ್ತೆಲ್ಲ ಹಾರಾಡಿ  ಗಂಡಾನೆ ಇದೆಯೋ ನೋಡಿತು, ಯಾವುದೂ ಕಂಡುಬರಲಿಲ್ಲ. ಆನೆ ದಾರಿಕಾಣದೆ ಸಿಕ್ಕಸಿಕ್ಕಲ್ಲೆಲ್ಲ ಓಡತೊಡಗಿತು. ಅತ್ತಿತ್ತ ಓಡಿದ ಆನೆಗೊಂದು ತೆಂಗಿನ ಮರ ಕಂಡಿತು. ತನ್ನ ತುರಿಕೆಯ ಬೆನ್ನನ್ನು ಹಾಕಿ ಅದಕ್ಕೆ ತಿಕ್ಕಿಕೊಳ್ಳ ತೊಡಗಿತು. ಇತ್ತ ಈ ಗುಬ್ಬಿಗೆ, ಆನೆಗೆ ಏನಾದರು ಸಹಾಯ ಮಾಡೇ ತೀರಬೇಕೆಂಬ ಬಯಕೆ ಮತ್ತಷ್ಟು ಜೋರಾಯಿತು. ಆನೆಗೆ ಸಂಗಾತಿ ಹಾತಿ ಸಿಗದಿದ್ದರೆ ಏನಂತೆ, ತನ್ನ ಕೈಲಾದಷ್ಟು (?) ಸಹಾಯ ಮಾಡುವ ಉದ್ದೇಶದಿಂದ ಆನೆಯ ಹಿಂದಿಂದ ತನ್ನೆಲ್ಲ ಶಕ್ತಿ ಹಾಕಿ ಬಜಾಯಿಸ ತೊಡಗಿತು. ಇದೇ ಸಮಯಕ್ಕೆ ಸರಿಯಾಗಿ ಆನೆ ಬೆನ್ನು ಹಾಕಿ ಉಜ್ಜಿದ ರಭಸಕ್ಕೆ  ಒಂದು ಒಣ ತೆಂಗಿನ ಕಾಯಿ ಆನೆಯ ತಲೆಯಮೇಲೆ ಬಿತ್ತು. ತೆಂಗಿನ ಕಾಯಿ ಬಿದ್ದ ಏಟಿಗೆ ಆನೆ ಒಮ್ಮೆ ಸೊಂಡಿಲೆತ್ತಿ ಜೋರಾಗಿ ಘೀಳಿಟ್ಟಿತು. ಗುಬ್ಬಿ ಅದನ್ನ ಕೇಳಿ, "ಆಹ್, ಆನೆ ಸಂತೃಪ್ತ ವಾಗಿದೆ, ತನ್ನ ಶ್ರಮ ಸಾರ್ಥಕ ಅಂದುಕೊಂಡು ಅಲ್ಲಿಂದ ಹಾರಿ ಹೋಯಿತು.

ಹೇಗಿದೆ ಗುಬ್ಬಿ ಚಟದ ಕಥೆ?           



Wednesday, December 19, 2007

ಬ್ಯಾಳೆ

ಏಳೆಂಟು ವರ್ಷಗಳ ಹಿಂದಿನ ಕತೆ. ಬ್ಯಾಳೆ ಹುಳಿ ಉಣ್ಣುವಾಗ ಇದರ ನೆನಪಾಗದೆ ಇರುವುದಿಲ್ಲ. ಇಂದಿನಂತದೇ ಮಳೆ. ಹಿಂದಿನ ದಿನ ರಾತ್ರಿಯಿಂದಲೂ ಜಡಿಯುತ್ತಿತ್ತು. ಸಿರ್ಸಿ ಬದಿಯ ನೆಂಟರ ಮನೆಗೆ ಅಪರೂಪಕ್ಕೆ ಹೋಗಿದ್ದೆ. ನನಗಿಷ್ಟ ಎಂದು ಆ ದಿನ ಅವರ ಮನೆಯಲ್ಲಿ ಮಧ್ಯಾಹ್ನದ ಊಟಕ್ಕೆ ಬ್ಯಾಳೆ ಹುಳಿ ಮಾಡಿದ್ದರು.

ಮನೆಯವರು ಮತ್ತು ನನ್ನನ್ನು ಬಿಟ್ಟರೆ ಮತ್ಯಾರೂ ಇರಲಿಲ್ಲ. ಯಜಮಾನರೂ ಪಂಕ್ತಿಯ ಬುಡದಲ್ಲಿ, ಅವರ ಪಕ್ಕ ಅತಿಥಿಯಾದ ನಾನು ನನ್ನ ಪಕ್ಕ ಅವರ ಮಗ, ಹೀಗೆ ಕುಳಿತು ಊಟ ಪ್ರಾರಂಭಿಸಿದೆವು. ಯಜಮಾನರ ಹೆಂಡತಿ ಸಾವಕಾಶವಾಗಿ ಸಮಾಧಾನದಿಂದ ಬಡಿಸುತ್ತಿದ್ದರು. ನನಗೆ ಹುಳಿ ಬಡಿಸಿದವರೇ ಏನೋ ನೆನಪಾದಂತೆ ಒಂದು ಕಡೆ ನಿಂತು ತಮ್ಮ ತವರು ಮನೆಯ ಸುದ್ದಿ ಹೇಳತೊಡಗಿದರು.

ಸಾರಂಶ ಇಷ್ಟೆ: ಅವರ ತವರು ಮನೆಯಲ್ಲಿ ಗಂಡಸರೆಲ್ಲಾ ಹುಳಿಯಲ್ಲಿನ ಬೇಳೆಯನ್ನೆಲ್ಲಾ ಆಸೆಪಟ್ಟು ಹಾಕಿಸಿಕೊಳ್ಳುತ್ತಿದ್ದರಿಂದ ಕೊನೆಯಲ್ಲಿ ಊಟಮಾಡುತ್ತಿದ್ದ ಹೆಂಗಸರಿಗೆ ಬರೀ ಸಾರು ಉಳಿದಿರುತ್ತಿತ್ತಂತೆ.

ಅವರ ಮಾತಿನ ಕೊನೆಯ ವಾಕ್ಯ ಹೀಗಿತ್ತು..
"ಎಲ್ಲಾ ಗಂಡಸ್ರೇ ಕಾಲಿ ಮಾಡ್ಬುಡ್ತಿದ್ವಲೀ.. ಹಂಗಾಗಿ ಹೆಂಗಸ್ರಿಗೆ ಬ್ಯಾಳ್ಯೇ ಇರ್ತಿತ್ತಿಲ್ಲೆ.."

ಅಲ್ಲಿಯವರೆಗೂ ಸಹನೆಯಿಂದ ಮೌನವನ್ನು ಉಳಿಸಿಕೊಂಡಿದ್ದ ಮನೆಯ ಯಜಮಾನರು ಈಗ ಗಂಭೀರ ಸ್ವರದಲ್ಲಿ ಹಳಿದರು:
"ನಿನ್ ಅಪ್ಪನ್ ಮನೆಲ್ಲಿ ಹೇಳಲ್ಲ, ತ್ಯಳತ್ತನೇ ಯಶೋದ.. ಪ್ರಪಂಚದಲ್ಲಿ ಎಲ್ಲೇ ಹೋದ್ರು, ಹೆಂಗಸ್ರಿಗೆ ಬ್ಯಾಳಿರ್ತಿಲ್ಲೆ.. "

Tuesday, September 11, 2007

ಕುಟ್ಟು ಭಟ್ರು

ಹೊರಬೈಲು ನಮ್ಮೂರಿನ ಪಕ್ಕದೂರು. ಅಲ್ಲಿ ಕುಟ್ಟು ಭಟ್ರು ಅಂತ ಒಬ್ರಿದಾರೆ. ಅದು ಅವರ ಅಡ್ಡ ಹೆಸರೋ ಅಥವಾ ಅದೇ ಅವರ ಅಂಕಿತನಾಮವೋ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಎಲ್ಲರೂ ಅವರನ್ನು 'ಕುಟ್ಟು ಭಟ್ರು' ಅಂತಲೇ ಕರಿಯೋದು. ಸುಮಾರು ಎಪ್ಪತ್ತು-ಎಪ್ಪತ್ತೈದು ವರ್ಷ ವಯಸ್ಸಿನ 'ಯುವಕ' ಅವರು. ಯುವಕ ಎನ್ನಲು ಕಾರಣ ಅವರ ಚುರುಕುತನ. ತಮ್ಮ ಕೆಂಪು ಟಿವಿಎಸ್ ಚಾಂಪ್‍ನಲ್ಲಿ ಇವತ್ತಿಗೂ ಅವರು 'ಕುಟುರ್ರ್..' ಎಂದು ಹೋಗುವುದನ್ನು ನೀವು ನಮ್ಮೂರ್ ಕಡೆ ಬಂದರೆ ನೋಡಬಹುದು.

ಕುಟ್ಟು ಭಟ್ರು ಒಮ್ಮೆ ಸಾಗರಕ್ಕೆ ಹೋಗಿದ್ರಂತೆ. ಪ್ಯಾಟೆ ಎಲ್ಲಾ ತಿರುಗಿ, ಸಾಮಾನೆಲ್ಲಾ ಖರೀದಿ ಮಾಡಿದ್ದಾಯ್ತು. ರಾಘವೇಂದ್ರ ಬಸ್ ಬರ್ಲಿಕ್ಕೆ ಇನ್ನೂ ಅರ್ಧ ಗಂಟೆ ತಡ ಇತ್ತು. ಸರಿ ಇನ್ನೇನು ಮಾಡುವುದು? ಸಾಗರದ ಮಾರ್ಕೆಟ್ ರೋಡಿನಿಂದ ಸ್ವಲ್ಪ ಒಳಕ್ಕೆ ಹೋದರೆ ಅಲ್ಲಿ 'ಬೆಲ್ಲದ ಕ್ರ್‍ಇಷ್ಣಪ್ಪನ ಅಂಗಡಿ' ಅಂತ ಒಂದು ಇದೆ. ಬಹಳ ಹಳೆಯ ಕಾಲದಿಂದಲೂ ಇರುವ ಇದು 'ಸಾಗರೀಕ'ರಿಗೆಲ್ಲ ಚಿರಪರಿಚಿತ. ಪ್ಯಾಟೆಗೆ ಹೋದವರೆಲ್ಲ ಬಸ್ ಬರಲಿಕ್ಕೆ ಸಮಯವಿದೆ ಎಂದಾದರೆ ಸುಸ್ತಾರಿಸಿಕೊಳ್ಳಲಿಕ್ಕೆ ಬೆಲ್ಲದ ಕ್ರ್‍ಇಷ್ಣಪ್ಪನ ಅಂಗಡಿ ಹೊಕ್ಕುತ್ತಾರೆ. ನಮ್ಮ ಕುಟ್ಟು ಭಟ್ರೂ ಅಲ್ಲಿಗೇ ಹೋದ್ರು.

ಅಲ್ಲಿ ಅದಾಗಲೇ ನಮ್ಮೂರಿನವರೊಬ್ಬರು ಕುಳಿತಿದ್ದರು. ಕುಟ್ಟು ಭಟ್ರು ಅವರ ಪಕ್ಕ ಹೋಗಿ ಕೂತ್ರು. ಆಗ ಬೆಲ್ಲದ ಕ್ರಿಷ್ಣಪ್ಪ ಹಿಂದಿನ ದಿನ ನಡೆದ ಕತೆಯೊಂದನ್ನು ಹೇಳ್ತಿದ್ನಂತೆ:

ಬೆಲ್ಲದ ಕ್ರಿಷ್ಣಪ್ಪನ ಅಂಗಡಿ ಎದುರು ಒಂದು ಪಾತ್ರೆ ಅಂಗಡಿಯಿದೆ. ಅಲ್ಲಿಗೆ ನಿನ್ನೆ ಒಬ್ಬ ಭಜಾರಿ ಹೆಂಗಸು ಹೊಕ್ಕಳಂತೆ. ಭಜಾರಿ ಹೆಂಗಸು ಯಾಕೆಂದರೆ ಅವಳು ತುಂಬಾ ತುಂಬಾ ದಪ್ಪಗಿದ್ದಳಂತೆ. ಎಷ್ಟು ದಪ್ಪಗಿದ್ದಳು ಅಂದ್ರೆ ಅಷ್ಟು ದಪ್ಪಗಿದ್ದಳು. ಅವಳು ಪಾತ್ರೆ ಅಂಗಡಿ ಹೊಕ್ಕಾಗ ಅದರ ಮಾಲೀಕ ಚಾ ಕುಡಿಯಲಿಕ್ಕೋ ಏನಕ್ಕೋ ಹೊರಗಡೆ ಹೋಗಿದ್ದ. ಈ ಹೆಂಗಸು ಯಾರೂ ಇಲ್ಲದ್ದು ನೋಡಿ ಒಂದು ದೊಡ್ಡ ದಬರಿಯನ್ನ ಎತ್ತಿ ತನ್ನ ಲಂಗದೊಳಗೆ ಸೇರಿಸಿಬಿಟ್ಟಳಂತೆ!! ಅಷ್ಟರಲ್ಲಿ ಅಂಗಡಿಯವನು ಬಂದ. ಇವಳು ಏನೂ ಆಗದವಳಂತೆ ಅವನ ಬಳಿ ಯಾವುದೋ ಪಾತ್ರೆಯನ್ನು ಕೇಳಿ, ಅದು ಅವಳ ಚೌಕಾಶಿಯ ಮಿತಿಯೊಳಗೆ ಬಾರದೇ, 'ಸರಿ ಹಾಗಾದ್ರೆ' ಎಂದು ಹೊರಟಳಂತೆ.

ಕ್ರಿಷ್ಣಪ್ಪ ತನ್ನ ಅಂಗಡಿಯಲ್ಲೇ ಕುಳಿತು ಇದನ್ನೆಲ್ಲಾ ನೋಡುತ್ತಿದ್ದನಲ್ಲ, ಅವಳು ಹೊರಡುತ್ತಿದ್ದಂತೆ ಇವನು ಹೋಗಿ ತಡೆದು ನಿಲ್ಲಿಸಿ, ಪಾತ್ರೆ ಅಂಗಡಿಯವನಿಗೆ ವಿಷಯವನ್ನು ಹೇಳಿದನಂತೆ. ಇಬ್ಬರೂ ಸೇರಿ ಸರಿಯಾಗಿ ಗದರಿಸಿದ ಮೇಲೆ (ಅಷ್ಟರಲ್ಲಿ ಒಂದಷ್ಟು ಜನರೂ ಸೇರಿದ್ದರು) ಅವಳು ಕದ್ದುದನ್ನು ಒಪ್ಪಿ ತನ್ನ ಲಂಗದೊಳಗಿಂದ ದಬರಿಯನ್ನು ತೆಗೆದು ಕೊಟ್ಟು ಹೋದಳಂತೆ.

-ಕತೆ ಕೇಳುತ್ತಿದ್ದ ನಮ್ಮ ಕುಟ್ಟು ಭಟ್ರು ಒಂದು ದೀರ್ಘ ನಿಟ್ಟುಸಿರು ಬಿಟ್ಟು ಏನಂದ್ರಂತೆ ಗೊತ್ತಾ? "ಅಲ್ಲ ಮಾರಾಯಾ.. ದಬರಿ ಆಗಿದ್ರಿಂದ ಬಚಾವು.. ಇನ್ನೇನಾದ್ರೂ ಸಣ್ಣ-ಪುಟ್ಟ ಲೋಟವೋ ಚಮಚವೋ ಆಗಿದ್ದಿದ್ರೆ ಸಿಗ್ತಾನೇ ಇರ್ಲಿಲ್ವಲ್ಲೋ ಮಾರಾಯಾ..!!"

['ದಟ್ಸ್‍ಕನ್ನಡ'ದಲ್ಲಿ ಮೋಟುಗೋಡೆಯ ಒಳಗೆ ಸೇರಿಸಬಹುದಾದಂತಹ ಲೇಖನವೊಂದು ಪ್ರಕಟವಾಗಿದೆ. ಆಸಕ್ತರಿಗಾಗಿ :ಕೊಂಡಿ.]

Tuesday, September 4, 2007

ಟೋಪಿ

ಮಾಸ್ ಕಮ್ಯೂನಿಕೇಶನ್ ಓದುವಾಗ ನನ್ನ ಫ್ರೆಂಡ್ 'ಶೋಭಿ' ಎನ್ನುವವನೊಬ್ಬನಿಗೆ ತುಂಬಾ ಗುಂಗುರು ಕೂದಲಿತ್ತು. ಅದು ಎಷ್ಟು ಚೆನ್ನಾಗಿತ್ತು ಎಂದರೆ, ಎಲ್ಲಾ ಹುಡುಗಿಯರು ಕಣ್ಣಲ್ಲಿ ಮೆಚ್ಚುಗೆ ಸೂಸುತ್ತಿದ್ದರು. ಸಾಧ್ಯವಾದಾಗಲೆಲ್ಲ ಅವನ ಹಿಂದೆ ಬೀಳುತ್ತಿದ್ದರು.

ನಮಗೋ ಹೊಟ್ಟೆಕಿಚ್ಚು. ಒಮ್ಮೆ ಕಾರಿಡಾರಿನಲ್ಲಿ ಹುಡುಗ ಹುಡುಗಿಯರೆಲ್ಲ ಸೇರಿ ಹರಟೆ ಕೊಚ್ಚುತ್ತಿದ್ದಾಗ ಶೋಭಿಯ ತಲೆ ಕೂದಲಿನ ಪ್ರಸ್ತಾಪ ಬಂತು. ಹುಡುಗಿಯರೆಲ್ಲ "ಶೋಭಿ ಅದು ಹೇಗೆ ಅಷ್ಟು ಗುಂಗುರಾಗಿ ಇಟ್ಟಿದಾನೆ ಕೂದ್ಲು.. ಅದರ ಗುಟ್ಟೇನಾದ್ರೂ ನಿಂಗೆ ಗೊತ್ತಾ? ಗೊತ್ತಿದ್ರೆ ನಮಗೂ ಹೇಳಿಕೊಡೋ" ಎಂದು ನನಗೆ ಗಂಟು ಬಿದ್ದರು.

ಪಕ್ಕದಲ್ಲಿದ್ದ ನನ್ನ ಗೆಳೆಯನಿಗೆ ಉರಿದುಹೋಯ್ತು ಅನ್ಸುತ್ತೆ, "ಶೋಭಿ ತಲೆಗೆ ಟೋಪಿ ಹಾಕ್ಕೊಳ್ಳೋ ಬದಲು ಅಂಡರ್‌ವೇರ್ ಹಾಕ್ಕೋಳ್ತಾನೆ ಅಷ್ಟೇ" ಎಂದ. ಆಮೇಲೆ ಹುಡುಗಿಯರು ತುಟಿ ಪಿಟಿಕ್ ಎನ್ನಲಿಲ್ಲ!

[ಮೋಟುಗೋಡೆಗೆ ಹಾಕಲಿಕ್ಕೆ ಈ ಟೋಪಿಯನ್ನು ಕಳುಹಿಸಿಕೊಟ್ಟವರು ಶ್ರೀ ಜಿ.ಎನ್. ಮೋಹನ್]

Wednesday, June 20, 2007

ಈಗ ಡುಂಡೀರಾಜ್ ಸಮಯ..!

ಹನಿಗವನಗಳ ರಾಜ ಶ್ರೀ ಎಚ್. ಡುಂಡೀರಾಜರ ಒಂದಷ್ಟು ಪೋಲೀ ಹನಿಗಳು:

ಯೋಜನೆ

ನಾವಿಬ್ಬರು
ನಮಗಿಬ್ಬರು
ಮೂರಾಗದಂತೆ ರಬ್ಬರು

ಮಗು

ಎಪ್ಪತ್ತು ವರುಷದ ಮುದುಕ
ಅಪ್ಪನಾದನಂತೆ
ವಿಚಿತ್ರ! ಆದರೂ ನಿಜ.
ಮುದ್ದು ಮುದ್ದಾದ
ಗಂಡು ಮಗು
ಹೆಸರು ವಯಾಗ್ರಜ!

ಆ-ಶ್ರಮ

ಕಟ್ಟಾ ಬ್ರಹ್ಮಚಾರಿಯಾಗಿದ್ದವ
ಪ್ರಸ್ತದ ಮರುದಿನ
ಏದುಸಿರು ಬಿಡುತ್ತಾ ಹೇಳಿದ-
ಅಬ್ಬಾ! ಎಂಥಾ ಶ್ರಮ
ಈ ಗೃಹಸ್ಥಾಶ್ರಮ!

ಅಭಿಪ್ರಾಯ

ಪಾನ ನಿರೋಧ
ಬೇಕೇ? ಬೇಡವೇ?
ಎನ್ನುವ ಚರ್ಚಾಗೋಷ್ಠಿಯಲ್ಲಿ
ಹೇಳಿದನೊಬ್ಬ ಮೆಲುದನಿಯಲ್ಲಿ
ಪಾನ
ನಿರೋಧ
ಎರಡೂ ಇರಲಿ.

ಬದಲಾವಣೆ

ಕಾಶಿ, ರಾಮೇಶ್ವರ
ಎನ್ನುತ್ತಿದ್ದ ತಾತ
ಶುರುಮಾಡಿದ್ದಾನೆ ಈಗ
ಹೊಸ ವರಾತ:
ನೋಡಬೇಕಂತೆ ಸಿಮ್ಲಾ,
ಕಾಶ್ಮೀರ, ಆಗ್ರ
ಎಲ್ಲೋ ಸಿಕ್ಕಿರಬೇಕು
ವಯಾಗ್ರ!

ಲಿಂಗ

ನಲ್ಲ ಪುಲ್ಲಿಂಗ
ನಲ್ಲೆ ಸ್ತ್ರೀಲಿಂಗ
ಏಕಾಂತದಲ್ಲಿ
ಭೇದವೆಲ್ಲಿ?
ಇಬ್ಬರೂ ಒಂದೇ
ಡಾರ್ಲಿಂಗ!

ಹುಟ್ಟು

ಸರತಿ ಸಾಲು
ಶುರುವಾದದ್ದು
ದ್ವಾಪರ ಯುಗದಲ್ಲಿ
ಪಾಂಡುಪುತ್ರರಿಗೆ
ದ್ರೌಪದಿ ನುಡುದಳು-
ಸ್ವಾಮಿ, ಕ್ಯೂ ನಿಲ್ಲಿ.

ಕಿವಿ ಮಾತು

ಆಗಿರಬಹುದು ವೇದಿಕೆಯಲ್ಲಿ
ನೀವು ಜನಪ್ರಿಯ ಕವಿ ಡುಂಡಿ
ಬೆಡ್‍ರೂಮಿನಲ್ಲಿ ಚುಟುಕು ಬೇಡ
ಎಂದಳು ಹೆಂಡತಿ ಕಿವಿ ಹಿಂಡಿ!

ಕದನ ವಿರಾಮ

ಗಂಡ ಹೆಂಡಿರ ಜಗಳ ಉಂಡು ಮಲಗುವ ವರೆಗೆ
ಆಮೇಲೆ ಕತ್ತಿ ಒರೆಗೆ!

ಮುಂದೆ

ಮೊದಲು ಎಲ್ಲರೂ ಮುಂದೆ ಬರುತ್ತಾರೆ
ಸಲಿಗೆ ಕೊಟ್ಟರೆ ಮುಂದುವರಿಸುತ್ತಾರೆ
ಅಕಸ್ಮಾತ್ ಮುಂದೆ ಬಂದರೆ
ಮುಂದೆ ಯಾರು ವರಿಸುತ್ತಾರೆ??

ಪಥ್ಯ

ಒಂದೊಂದು ರೋಗಕ್ಕೆ ಒಂದೊಂದು ಮದ್ದು; ಒಂದೊಂದು ಪಥ್ಯ
ಲೈಂಗಿಕ ರೋಗಕ್ಕೆ ಒಂದೇ ಮದ್ದು- ದಾಂಪತ್ಯ!

ಫ್ಯಾಷನ್

ಏನು ಪ್ರಯೋಜನ
ಇಂಥಾ ಬಟ್ಟೆ ತೊಟ್ಟು?
ಬೇಡವೆಂದರೂ ಎದ್ದು
ತೋರುವುದು- ತೊಟ್ಟು!

ಭಾವೈಕ್ಯ

ಭಾವೈಕ್ಯ ಭಾವೈಕ್ಯ
ಎಲ್ಲಿದೆ ಸ್ವಾಮಿ ಭಾವೈಕ್ಯ?
ಮನೆಗೆ ಹೋಗಿ ನೀವೇ ನೋಡಿ:
ಅಕ್ಕನ ಜೊತೆ ಭಾವ ಐಕ್ಯ!

[ಇಲ್ಲಿಯ ಕೆಲ ಹನಿಗಳನ್ನು ನಮಗಾಗಿ ಕಳುಹಿಸಿಕೊಟ್ಟ ಚಿನ್ಮಯ್ ಶಾಸ್ತ್ರಿ ಅವರಿಗೆ ಧನ್ಯವಾದಗಳು.]

Saturday, June 2, 2007

ಬಾಳಿಗೆ ೨೦ ರುಪಾಯಿ

ಈಗತಾನೆ ತೇಜು ಕೊಟ್ಟು ಕಳುಹಿಸಿದ್ದ CD ನೋಡುತ್ತಿದ್ದೆ. ಅದರಲ್ಲಿ ಕೋಡನಕಟ್ಟೆಯ (ಕ್ವಾಣನ್‘ಕಟ್ಟೆ ಹೇಳೇ ಅಭ್ಯಾಸ, ಇರ್ಲಿ..) ದೇವಸ್ಥಾನದ ಮುಂದೆ, ಬಸ್‘ಸ್ಟ್ಯಾಂಡಿನ್ ಬಳಿಯ ಹುಣಸೇ ಮರ ನೋಡಿ ಇದರ ನೆನಪಾಯ್ತು.

ಸುಮಾರು ವರ್ಷಗಳ ಹಿಂದಿನ ಕತೆ. ಕೋಡನಕಟ್ಟೆಯ ಕಲ್ಯಾಣಮಂಟಪದ ಎದುರಿಗೆ (ಹೊಸಬಾಳೆಗೆ ಹೋಗುವ ಒಳದಾರಿ ಶುರುವಾಗುವುದು ಇಲ್ಲಿಂದಲೇ ಎಂದರು ತಪ್ಪಿಲ್ಲ!) ಮೂರು ನಾಲ್ಕು ಹುಣಸೇ ಮರಗಳಿದ್ದವು. ಈಗಲೂ ಇರಬಹುದು! ಸೈಕಲ್ಲು, ಬೈಕು ಆಗೆಲ್ಲಾ ಸ್ವಲ್ಪ ಕಡಿಮೆಯೇ ಇದ್ದ ಕಾರು ಇತ್ಯಾದಿಗಳನ್ನು ನಿಲ್ಲಿಸಲಾಗುತ್ತಿತ್ತು. ಹೀಗೆ ಒಂದು ಮದುವೆಯ ಊಟದ ನಂತರ ಆ ಜಾಗದಲ್ಲಿ ಕತೆ ನಡೆಯುತ್ತಿತ್ತು.
ನೆನಪಿನಲ್ಲಿರುವವರೆಂದರೆ, ಹಳೆಮನೆ ನರಹರಿಯಣ್ಣ ಹಾಗೂ ದೊಡ್ಡೇರಿ ರವಿ ಮಾವ. ಆಗೆಲ್ಲಾ ಹೊಸತಾಗಿದ್ದ ಬಾಳೆ ಲೆಕ್ಕದ ಊಟದ ಕಡೆಗೆ ಮಾತು ಹರಿಯಿತು.
ಮುಂದಿನದನ್ನು ಸಂಭಾಷಣೆಯ ರೂಪದಲ್ಲೇ ಓದಿ.
"ಹೋಯ್.. ಈಗೆಲ್ಲ ಇಲ್ಲು ಬಾಳೆ ಲೆಕ್ಕ ಮಾಡ್ಬುಟಿದ.. ಎಷ್ಟ್ ಜನ ಊಟ ಮಾಡ್ತ್ವ.. ಅದ್ರಮೇಲೆ ದುಡ್ಡು..
ಅಂದಾಜ್ ಎಷ್ಟ್ ಜನ ಬರ್ಗು ಅಂತ ಮೊದ್ಲೆ ಹೇಳಿರ್ ಆತು ಅಷ್ಟೆ.."

"ಯಾವಾಗಿಂದ ಶುರ್ಮಾಡಿದ್ವೊ ಮಾರಾಯ.. ಗೊತ್ತೇ ಇರ್ಲೆ.. ಮತ್ತೆ.. ಹುಡ್ರ್ ಬಾಳಿಗೆ ಬೇರೆ ಲೆಕ್ವಾ??"

"ಅದ್ನೆಲ್ಲಾ ಒಟ್ಟಿಗೆ ಲೆಕ್ಕಕ್ ಹಿಡಿತ್ವಡ... ಕೆಲ್ಸ್‘ದವ್ರಿಗ್ ಕೊಟ್ಟಿದ್ದು.. ಹೊರ್ಗಿದ್ದವ್ರಿಗೆ.. ಹುಶಾರಿಲ್ದಿದ್ದವ್ರಿಗೆ ಅಂತ ಅಚಿಚೆ ಮನೆವ್ರು ಪ್ಲೇಟಲ್ ಹಾಕ್ಯಂಡ್ ತಗಂಡೋಗಿದ್ದು.. ಎಲ್ಲದು ಲೆಕ್ಕ ಅಂತಾತು"

"ಓಹಾ! ಅಲ್ಲ.. ಅದ್ನೇ ಕೇಳಿದೆ.. ಅದ್ಕೇನಾರು ಕಮ್ಮಿ ರೇಟಿದ್ದ ಅಂತ..??"

"ಹಂಗೆಲ್ಲ ಎಂತು ಇಲ್ಯೋ...

ನಿಂಗವ್ ಒಂತುತ್ತುಣ್ಣಿ, ಎರಡ್ತುತ್ತುಣ್ಣಿ..
ಹತ್ತುತ್ತುಣ್ಣಿ ಐವತ್ತುತ್ತುಣ್ಣಿ..
ಕುಂತುಣ್ಣಿ ಇಲ್ಲ ನಿಂತುಣ್ಣಿ..
ಬಾಳಿಗ್ ೨೦ ರುಪಾಯಿ.."