ಮಾಸ್ ಕಮ್ಯೂನಿಕೇಶನ್ ಓದುವಾಗ ನನ್ನ ಫ್ರೆಂಡ್ 'ಶೋಭಿ' ಎನ್ನುವವನೊಬ್ಬನಿಗೆ ತುಂಬಾ ಗುಂಗುರು ಕೂದಲಿತ್ತು. ಅದು ಎಷ್ಟು ಚೆನ್ನಾಗಿತ್ತು ಎಂದರೆ, ಎಲ್ಲಾ ಹುಡುಗಿಯರು ಕಣ್ಣಲ್ಲಿ ಮೆಚ್ಚುಗೆ ಸೂಸುತ್ತಿದ್ದರು. ಸಾಧ್ಯವಾದಾಗಲೆಲ್ಲ ಅವನ ಹಿಂದೆ ಬೀಳುತ್ತಿದ್ದರು.
ನಮಗೋ ಹೊಟ್ಟೆಕಿಚ್ಚು. ಒಮ್ಮೆ ಕಾರಿಡಾರಿನಲ್ಲಿ ಹುಡುಗ ಹುಡುಗಿಯರೆಲ್ಲ ಸೇರಿ ಹರಟೆ ಕೊಚ್ಚುತ್ತಿದ್ದಾಗ ಶೋಭಿಯ ತಲೆ ಕೂದಲಿನ ಪ್ರಸ್ತಾಪ ಬಂತು. ಹುಡುಗಿಯರೆಲ್ಲ "ಶೋಭಿ ಅದು ಹೇಗೆ ಅಷ್ಟು ಗುಂಗುರಾಗಿ ಇಟ್ಟಿದಾನೆ ಕೂದ್ಲು.. ಅದರ ಗುಟ್ಟೇನಾದ್ರೂ ನಿಂಗೆ ಗೊತ್ತಾ? ಗೊತ್ತಿದ್ರೆ ನಮಗೂ ಹೇಳಿಕೊಡೋ" ಎಂದು ನನಗೆ ಗಂಟು ಬಿದ್ದರು.
ಪಕ್ಕದಲ್ಲಿದ್ದ ನನ್ನ ಗೆಳೆಯನಿಗೆ ಉರಿದುಹೋಯ್ತು ಅನ್ಸುತ್ತೆ, "ಶೋಭಿ ತಲೆಗೆ ಟೋಪಿ ಹಾಕ್ಕೊಳ್ಳೋ ಬದಲು ಅಂಡರ್‌ವೇರ್ ಹಾಕ್ಕೋಳ್ತಾನೆ ಅಷ್ಟೇ" ಎಂದ. ಆಮೇಲೆ ಹುಡುಗಿಯರು ತುಟಿ ಪಿಟಿಕ್ ಎನ್ನಲಿಲ್ಲ!
[ಮೋಟುಗೋಡೆಗೆ ಹಾಕಲಿಕ್ಕೆ ಈ ಟೋಪಿಯನ್ನು ಕಳುಹಿಸಿಕೊಟ್ಟವರು ಶ್ರೀ ಜಿ.ಎನ್. ಮೋಹನ್]