ಇಳಿಯಬೇಕು ನಿನ್ನೊಳಗೆ ನಾನು
ಸುರಿದಂತೆ, ಸೋನೆ ಇಳೆಗೆ
ಒಳಗೊಳಗಿನಾಳ ಶೋಧಿಸುವ ಬಯಕೆ
ಮರಬೇರು ಬಸಿದಂತೆ ಭುವಿಗೆ
ಮುತ್ತಿಕ್ಕಬೇಕು ಉನ್ಮತ್ತ ತುಟಿಗೆ
ಪರಾಗವನು ಹೀರ್ದಂತೆ ದುಂಬಿ
ಬಂಗಾರ ದೇಹ ಮುದ್ದಾಡಬೇಕು
ಹಾಲುಕ್ಕಿದಂತೆ, ತುಂಬಿ
ನಿನ್ನೇರುತಗ್ಗು ಹತ್ತಿಳಿಯಬೇಕು
ಹೊಕ್ಕಂತೆ ಸಲಗ ವನಕೆ
ಎರಡಿದ್ದ ಜೀವ ಒಂದಾಗಬೇಕು
ಒರಳೊಳಗೆ ಇದ್ದಂತೆ, ಒನಕೆ
ನಿನ್ನೊಳಗನುತ್ತು ಚಿತ್ತಾಗಬೇಕು
ಹಲ ಸೀಳಿದಂತೆ ಹೊಲವ
ಅರಳಬೇಕು ನೀ ನನ್ನ ಒಳಗೆ
ಹೂವರಳಿ ಬಿರಿದಂತೆ ಒಲವ
13 comments:
ಒರಳೊಳಗೆ ಇದ್ದಂತೆ, ಒನಕೆ
LOL!!!
ಅಬ್ಬಾ! ಎಲ್ಲಾ ತರಹದ ಕವಿತೆಗಳನ್ನು ಬರೆಯುವುದರಲ್ಲಿ ಎತ್ತಿದ ಕೈಯಲ್ರೀ ನಿಮ್ದು!!
ಅದ್ಭುತ...!!!
ಉತ್ತಮೋತ್ತಮ. ನಂಗೆ ಬಹಳ ಹಿಡಿಸ್ತು. ಅದರಲ್ಲೂ rhyming words ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ ಬಾರಿ.
very good..
keep it UP!!
Cheers!
chennagide :)
abba!!
ತಗ್ಗು ದಿನ್ನೆಗಳ ಏರಿಳಿಯುತ ಮೋಟು ಗೋಡೆಯನ್ನು ಇಣುಕಿದಾಗ... ಕಂಡುದೇನು...
ಆಹಾ...
ಅದ್ಭುತ.. ಅತ್ಯದ್ಭುತ
ರಸ ನಿಮಿಷಗಳ ಅತಿ ಮಧುರ ವರ್ಣ ರಂಜಿತ ಆಲೋಕನ...
ತನು ಮನ ಮುದಗೊಳಿಸುವುದರಲ್ಲಿ ಎರಡಲ್ಲ... ಮೂರು ಮಾತಿಲ್ಲಾ
ಶ್ರೀನಿಧಿ,
ಪ್ರಾಸಬದ್ಧ ಕವನ.. ತುಂಬಾ ಚೆನ್ನಾಗಿ ಮೂಡಿಬಂದಿದೆ. ಅಶ್ಲೀಲತೆಯನ್ನೆಲ್ಲೂ ಕಾಣಿಸದೇ ಸಮಾಗಮದ ಮಧುರತೆಯನ್ನು ಪ್ರಕೃತಿಯೊಡನೆ ಹೋಲಿಸಿದ ಪರಿ ಅದ್ಭುತವೂ ಸುಂದರವೂ ಆಗಿದೆ. "ತುಂತುರು ಹನಿ"ಯೂ ಕೂಡಾ ಸುಂದರ ಕವನ/ಕಥೆಗಳೊಂದಿಗೆ ಹನಿಯಲೆಂದು ಆಶಿಸುವೆ.
ಶ್ರೀನಿಧಿ, ವೆರಿ ಗುಡ್!
ಓಹ್!!!
ಚೆನ್ನಾಗಿದೆ. ;-)
ಶ್ರೀನಿಧಿ,
Excellent ಕವನ.
ಒಂದು ಸಾಲು ಸ್ವಲ್ಪ ವಾಚ್ಯವಾಯಿತು:
"ಒರಳೊಳಗೆ ಇದ್ದಂತೆ, ಒನಕೆ".
ಇದರ ಬದಲಾಗಿ "ರಸದೊಳಗೆ ರಸದ ಬೆರಕೆ" ಎಂದು ಹೇಳಬಹುದಾಗಿತ್ತೇನೊ?
ನಿಮ್ಮ ಕವನ ಓದುತ್ತಿದ್ದಂತೆ,ಹಿರಿಯನೊಬ್ಬ ಕಿರಿಯನೊಬ್ಬನಿಗೆ ಹೇಳಿದ ಒಂದು ಗಾದೆ ಮಾತು (ಯಾವುದೋ ನಾಟಕದಲ್ಲಿ ಹೇಳಿದ್ದು) ನೆನಪಾಯಿತು:
"ತಮ್ಮಾ, ದಿನ್ನಿ ಇದ್ದಲ್ಲಿ ಕೈ ಊರು; ತಗ್ಗಿದ್ದಲ್ಲಿ ಕೋಲೂರು!"
ಕನ್ನಡ ಕಾವ್ಯಭಂಡಾರಕ್ಕೆ ಮೌಲಿಕ ಕೊಡುಗೆ ನೀಡುತ್ತಿರುವ ನಿಮಗೆ ಅಭಿನಂದನೆಗಳು.
Post a Comment