Thursday, February 26, 2009

ಹಿಗ್ಗಿಹೋದ ವಿನೆಗರ್ ಮತ್ತು ಇತರ ಸಮಸ್ಯೆಗಳು - 1


ಹೌದ್ರಾ? ಹಾ೦ಗೈತ್ರಾ? ಮ೦ತ್ರಕ್ಕಿ೦ತ ಉಗಳಾ ಜಾಸ್ತಿ ಅ೦ತೀರಾ? ಒ೦ದ್ ಕೆಲಸಾ ಮಾಡ್ರಲ್ಲಾ, ಬಾಯಿ ಮುಚ್ಸಾಕೆ ಬೇರೆ ಬೇರೆ ಐಡ್ಯಾ ಐತ೦ತಲ್ಲಾ ಅದನ್ನ ಒಮ್ಮಿ ಪ್ರಯೋಗಾ ಮಾಡಿ ನೋಡ್ರಲ್ಲಾ.


ತಮ್ಯಾ, ಬಾಳಾ ಸುಲ್ಭಾ ಐತಿ ಇದು. ಒ೦ದು ಪ್ಯಾಸ್ಟ್ಲಿಕ್ ಹಗ್ಗಾ ತಕೊ... ಅದರಾಗ್ ನಿನ್ನ್ ಎರಡೂ ಕೈ ಹಿ೦ದಕ್ ಕಟ್ಗೊ೦ಡು ಮಲಗ್ಬಿಡು. ನಮ್ಮೂರಾಗ್ ಒ೦ದು A ಸಿನಮಾ ತೋರಿಸೋ ವಿಡಿಯೋ ಥೇಟರ್ ನಾ ಪೋಲೀಸ್ ರೈಡ್ ಮಾಡಿ, ಸಿಕ್ಯೊ೦ಡ್ ಬಿದ್ದವರನ್ನ 8ದಿನ ಹೀ೦ಗ ಇಟ್ಟಿದ್ರ೦ತ ಅ೦ತ ಕೇಳಿದ್ನ್ಯಾ...... ನಿ೦ಗೂ ಉಪಯೋಗ ಆದ್ರೂ ಆಗ್ಲಿ ಅ೦ತ ಹೇಳದೆ.


ಇಲ್ಲ ತಾಯಿ, ಹಾಗೇನೂ ಆಗಾಗ೦ ಇಲ್ಲ ಹೆದರಬ್ಯಾಡಾ, ನೀನು ಇನ್ನೇನಾರ ಸ್ವೆಟರ್ ಅಥವಾ ಜಕಿ೯ನ್ ಮತ್ತೆ ಮ೦ಕಿ ಕ್ಯಾಪ್ ಹಾಕೊ೦ಡೇ ನಡಸಿದ್ದಿ ಅ೦ದ್ರ ಆಗೂ ಚಾನ್ಸ್ ಭಾಳಾ ಇತ್ತು ನೋಡು. ಆದ್ರೂ ಸಕಾ೯ರ 18 ವಷ೯ಕ್ಕ ಹೆಣ್ಮಕ್ಕಳಿಗೆ ಪ್ರಾಯಾ ಬತ೯ತಿ ಅ೦ದಿದ್ನ ಖರಿ ಮಾಡ್ಬಿಟ್ಟಿ ನೋಡು.



ನೀನೂ ಹೆದ್ರಬ್ಯಾಡ ತಮ್ಮಾ, ಮೇಲಿನ ಕೇಸ್ ನೋಡು, ಬಟ್ಟಿ ಹಾಕ್ಯ೦ಡಾಗ್ಲೇ ಆಗಲಿಲ್ಲ೦ತ ಮತ್ತೆ ಇನ್ನೇನ್ ಬೆಟ್ಟು ಹಾಕಿದ್ರ ಆಗತೈತೇನೂ? ಅ೦ದ ಹಾ೦ಗ ಮೇಲಿನ ಪ್ರಶ್ನಿ ಕೇಳಿದ್ ಹೆಣ್ ಮಗಳಿಗೂ ನಿ೦ಗೂ ಏನಾರಾ.................? ಹೆ ಹೆ ಪ್ರಶ್ನಿ ನೋಡಿ ಅನುಮಾನಾ ಬ೦ತಪ್ಪಾ ಅಷ್ಟೇ.



ಏನ್ ಗುರುವೆ...... ಟಾರ್ಗೆಟ್ ಕೇಳಿ ಧಾಕಲಿ ಮುರಿಯಾಕೆ ಹೊ೦ಟಿಯೇನು? ಸಧ್ಯಾ ಇದ್ದ ಮಕ್ಕಳಿಗ ಗ೦ಜಿ ಇಲ್ಲಾ, ಇನ್ನೊ೦ದ್ ಕೊಡೊ ಸದಾಶಿವಾ ಅನ್ನೋ ಹಾ೦ಗ ಆಗೈತಿ ಕಾಲಮಾನ. ಮತ್ತೆ ನೀನೊಬ್ಬನೆ ಅಷ್ಟೆಲ್ಲಾ ಮದವಿ ಆಗ್ ಬ್ಯಾಡೋ....


ಮೇಕಪ್ ಮಾಡ್ಕ್ಯ೦ಡ್ ಕೆ೦ಪ್ ಕೆ೦ಪ್ ಆಗತಾಳ, ಯಾಕಪ್ಪ ನಿ೦ಗ ಅ೦ತಾ ಚಿ೦ತಿ ಆಗೈತಿ? ಏನಾರಾ ಕನಸಾಗ್ ಬತಿ೯ನೀ ಅ೦ತಾ ಪ್ರಾಮಿಸ್ ಮಾಡ್ಯಾಳೇನು?



ಪುಣ್ಯಾ ಮಾರಾಯಾ ಪಿ ವಿ ಸಿ ಪೈಪ್ ಸೈಜ್ ಹೇಳಿ ಉಪಕಾರಾ ಮಾಡದಿ....... ಪೇಪರ್ ಮ್ಯಾಗ್ ಇಟ್ಟು ಇಷ್ಟು ಐತಿ ನೋಡ್ರಿ ಸರ ಸೈಜು ಅ೦ತ ಚಿತ್ರ ಬರದು ಕಳಸ್ಲಿಲ್ಲ. ದೇವರು ದೊಡ್ಡವ.


ಹೆ ಹೆ .... ಇಲ್ಲಿ ಬ೦ತು ನೋಡ್ರಪ್ಪಾ ವಿನೆಗರ್ ಸಮಸ್ಯೆ..... ಅಕಸ್ಮಾತ್ ವಿನೆಗರ್ ಎಕ್ಸ್ ಪಾ೦ಡ್ ಆಗೈತೆ ಅ೦ದ್ರ ಅದನ್ನ ಪ್ರಿಜ್ ನಾಗಾರೂ ಇಡ್ರಿ ಚಳಿಗೆ ಸಣ್ಣಕ ಆಕೈತಿ. ಈ ಶೆಕಿಗಾಲದಾಗ ತುಪ್ಪಾನೇ ಕರಗತೈತಿ, ಇನ್ನ ವಿನೆಗರ್ ಯಾವ ಮಹಾ ಬಿಡ್ರವ್ವಾ.


*******************
ಭಾಗ ಎರಡು ಸದ್ಯದಲ್ಲೇ ಬರಲಿದೆ. :)

ಮಾಹಿತಿ ಕೃಪೆ :ಶ್ರೀಧರ


7 comments:

Prakash Shetty said...

ಅಲ್ಲಾ ...

ಮೋಟು ಗೋಡೇಲಿ... ಲೈಂಗಿಕ ಸಮಸ್ಯೆಗಳಿಗೆ ಉತ್ತರಿಸೋ ಕಾಲಮ್ಮನ್ನೇ ಶುರು ಹಚ್ಚ್ಕೊಂಡ್ಬುಟ್ರೆ ಎಂಗೆ ಅಂತಾ ನನ್ ಸಲಹೆ....

ತಜ್ಞರನ್ನಾಗಿ ನಮ್ ಸೀರ್ದರನನ್ನೇ ಮಾಡ್ಬುಟ್ರೆ ಎಂಗೆ...

ಆಗ್ಬೋದಾ.. ನಿಮ್ಗೆಲಾ ಒಪ್ಗೇನಾ...??

Shankar Prasad ಶಂಕರ ಪ್ರಸಾದ said...

ಯಪ್ಪೋ ಯಪ್ಪಾ...
ಲೇಯ್..ಅದೆಲ್ಲಿ ಹುಡುಕಿ ಹಾಕುದ್ಯೋ ಮಾರಾಯ ಇದನ್ನಾ?
ಆಫೀಸಲ್ಲಿ ಜೋರಾಗಿ ನಕ್ಕಿ ಅಕ್ಕ ಪಕ್ಕದವರೆಲ್ಲ ಬೆಚ್ಚು ಬೀಳೋ ಹಾಗಾಯ್ತು.
ವಿನೆಗರ್ ಬಹಳಾ ನಗು ತಂದಿದ್ದು. ಜೊತೆಗೆ ಇನ್ನೂ ಸೂಪರ್ ಅನ್ಸಿದ್ದು ಪಿ.ವಿ.ಸಿ ಪೈಪು, ಹಾಗು ಸ್ವೆಟರ್ ಪುರಾಣ.
ಸಖತ್ತಾಗಿ ಇದೆ ಕಣಯ್ಯ. ಶ್ರೀಧರ, ಎಲ್ಲಿ ಸಿಕ್ತು ನಿಮಗೆ ಇದೆಲ್ಲ??
ಜೊತೆಗೆ ಕಾಮೆಂಟುಗಳು ಸಖತ್ತಾಗಿ ಇದೆ ಹರ್ಷ.

ಕಟ್ಟೆ ಶಂಕ್ರ

sunaath said...

ಆ ವಾತ್ಸ್ಯಾಯನಾ ನಿನ್ನ ಪಾದಧೂಳಿಯನ್ನ ತನ್ನ ಅಂಗಾಂಗಳ ಮೇಲೆ ಎರಚಿಕೋಬೇಕು ನೋಡು, ತಮ್ಮಾ!
ಏನು ಸಖತ್ ಐಡ್ಯಾ ಬರದೀಯೊ ಮಾರಾಯಾ.

ವಿ.ರಾ.ಹೆ. said...

ಪಾಪ ಗೊತ್ತಿಲ್ದೇ ಇದ್ದೋರು ಕೇಳಿ ತಿಳಕೊಳ್ತಾ ಇದ್ರೆ ನೀವುಅದನ್ನ ಗೇಲಿ ಮಾಡ್ತೀರಲ್ರೀ.. :) :)

DVKINI said...

ಇಂತಹುದ್ದೇ ಕಾಲಂ ಟೈಮ್ಸ್ ಆಫ್ ಇಂಡಿಯಾ ದಲ್ಲಿ ಬರುತ್ತದೆ.

ಕೆಲಒಮ್ಮೆ ತೋರುತ್ತದೆ, ಇಂಗ್ಲಿಷ್ ಓದಿದವರೆಲ್ಲ,(ಅವರಿಗೆ ತುಂಬಾ ಗೊತ್ತು ಅಂತ ಒಂದು ನಂಬಿಕೆ) ಇಷ್ಟು ಪರಮ ಅಜ್ಞಾನಿ ಗಳೋ ಅಂತ .ಓದಿದಮೇಲೆ ಅವುಗಳಲ್ಲಿ ಹೆಚ್ಹಿನವು ಜೋಕ್ ಆಫ್ ದಿ ಡೇ.

ಇನ್ನೂ ಅಂತಹವುಗಳು ತುಂಬಾ ಇವೆ.

Harisha - ಹರೀಶ said...

Hilarious!

Harsha Bhat said...

@ ಪ್ರಕಾಶ್ ಶೆಟ್ಟಿ ಉಳೆಪಾಡಿ

kaalam eno start madabahudu adre namma seedra enantanoo gottilla...

@ ಶಂಕರ ಪ್ರಸಾದ

heena illa nammavara ob ara kottaarri ..n aavu haakevri asta

@sunaath
haanga anteerenu.... irli tagori

@ವಿಕಾಸ್ ಹೆಗಡೆ
geeli alri sara adu summaka jagatnaaga ententa samasye aiti aanta bardevri astaa

@ DVKIN

TOI daaga idonde eenu innu hattaru photo article bartane irtada ..... pepare aatharaddu bidriii

@ Harish - ಹರೀಶ
Thanks ri sara