Tuesday, March 24, 2009

ಕ..ಲ್ಪ

ಕಲಸಿ ದೇವಸ್ಥಾನದಲ್ಲಿ ಕಂಡು ಬರುವ ಮಿಥುನ ಶಿಲ್ಪಗಳು.

*********************************



*********************************



*********************************



*********************************



*********************************



*********************************



*********************************



*********************************




*********************************



*********************************



*********************************



*********************************



*********************************



*********************************



*********************************


*********************************

ಅಂದಹಾಗೆ, ತಲೆಬರಹಕ್ಕೆ ಸ್ಪೂರ್ತಿ: ಪರಮವೀರಚಕ್ರ

Thursday, March 19, 2009

ಹಿಗ್ಗಿಹೋದ ವಿನೆಗರ್ ಮತ್ತು ಇತರ ಸಮಸ್ಯೆಗಳು - 2


ಅಯ್ಯೋ ದುರ್ವಿಧಿಯೇ......... ಇಲ್ಲಿ ಕೂಡ ಮುದ್ರಾ ರಾಕ್ಷಸ ಹಾವಳಿ ಮಾಡಿದನೆ? Wild ಆದಮೇಲೆ Life ಅನ್ನೊಶಬ್ದವೇ ಬಿಟ್ಟು ಹೋದಾ೦ಗಿದೆ. ಅದನ್ನ ಸೇರಿಸಿದರೆ ಸರಿ ಆಗುವದಿಲ್ಲವೆ? ಆವಾಗ ಇನ್ಪೆಕ್ಶನ್ ಮತ್ತೆ ಪ್ರಗ್ನೆನ್ಸಿಗೆ ಪರಿಣಾಮ ಆಗುವ ಸ೦ಭವ ಉ೦ಟು.




ಇದು ಯಾರು ಬರೆದ ಕಥೆಯೋ ..............


ಕುಡದಿದ್ದು ಹೌದು ಮಾರಾಯರೆ, ಆದರೆ ಮ೦ಡೆಗೆ ಹತ್ತಿರಲಿಲ್ಲ. ನನ್ನ ಕ೦ಟ್ರೋಲಲ್ಲೆ ಇದ್ದೆ. ಆ ಪೋಲೀಸ ಹಿಡದು ಡ್ರಿ೦ಕ್ ಆ೦ಡ್ ಡ್ರೈವ್ ಕೇಸ್ ಹಾಕಬಹುದಾ ಮಾರಾಯರೆ?



ಅಬ್ಬಾ ಸು೦ದರಾ೦ಗಜಾಣಾ, 19ಕ್ಕೆ 16ಗರ್ಲ್ ಫ್ರೆ೦ಡ್ಸ್ ಅ೦ದ್ರೆ 36 ಅನ್ನೋವಷ್ಟರಲ್ಲಿ 69 ಆಗಿರುತ್ತದೆ ಅಲ್ಲವೋ? ಆದರೂ ಊರಿಗೆಲ್ಲ ನಾನೊಬ್ಬಳೇ ಪದ್ಮಾವತಿ ಅ೦ತ ಹೇಳಿಕೊಳ್ಳುವದು ತಪ್ಪು ಮಾರಾಯಾ.




ಮು೦ಬೈ ನಲ್ಲಿ ಭಾರಿ ಸೆಖೆ ಉ೦ಟು, ಕನಾ೯ಟಕ ಎಕ್ಸ್ ಪ್ರೆಸ್ ರೈಲು ಒ೦ದು ಘ೦ಟೆ ತಡವಾಗಿ ಓಡುತ್ತಿದೆ, ಬಸವನ ಗುಡಿಯಲ್ಲಿ ಎ೦ಥದೋ ಸಭೆಯಿ೦ದ ಟ್ರಾಫಿಕ್ ಜ್ಯಾ೦ ಆಗಿದೆ. ಈವಷ೯ ಬಳ್ಳಾರಿಯಲ್ಲಿ ಮಾವಿನ ಬೆಳೆ ಜೋರು ಉ೦ಟ೦ತೆ. ಆ ಲೆಕ್ಕದಲ್ಲಿ ನಮ್ಮ ಮ೦ಗಳೂರಿನಲ್ಲಿ ಇವತ್ತು ಮಳೆ ಬರುವ ಸಾಧ್ಯತೆ ಉ೦ಟಾ?



ಚಿತ್ರ ಕೃಪೆ: ಶ್ರೀಧರ

Friday, March 13, 2009

ಯಯಾತಿಯ ಕಾಮ

ಯಯಾತಿ... ವಿ.ಎಸ್. ಖಾಂಡೇಕರ್‌ರ ಮರಾಠಿ ಮೂಲದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ. ಹಸ್ತಿನಾಪುರದ ಅರಸು ನಹುಷನ ಮಗ ಯಯಾತಿಯ ವ್ಯಥೆಯ ಬದುಕಿನ ಚಿತ್ರಣವನ್ನು ಖಾಂಡೇಕರ್ ಅದೆಷ್ಟು ಅದ್ಭುತವಾಗಿ ವರ್ಣಿಸುತ್ತಾ ಹೋಗುತ್ತಾರೆಂದರೆ ಓದುತ್ತಿರಬೇಕಾದರೆ ಅದೊಂದು ಕಾದಂಬರಿಯಲ್ಲ, ಕಾವ್ಯ ಎಂದೆನಿಸಿಬಿಡುತ್ತದೆ. ಖಾಂಡೇಕರ್ ಅದರಲ್ಲಿ ಬಳಸುವ ಉಪಮೆಗಳು, ರೂಪಕಗಳು, ಜೀವನಾನುಭವದ ನಿರೂಪಣೆ, ಕಾದಂಬರಿಯ ತಂತ್ರಗಾರಿಕೆ -ಎಲ್ಲಾ ಸೇರಿ, ’ಯಯಾತಿ’ಯ ಓದು ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆ. ಅದು ಕೇವಲ ಯಯಾತಿಯ ಕಾಮದ ಕಥೆಯಾಗದೆ, ದೇವಯಾನಿಯ ಸಂಸಾರದ ಕಥೆಯಾಗಿದೆ, ಶರ್ಮಿಷ್ಠೆಯ ಪ್ರೀತಿಯ ಕಥೆಯಾಗಿದೆ ಹಾಗೂ ಕಚನ ಭಕ್ತಿಯ ಪ್ರಗಾಥವಾಗಿದೆ. ಅದನ್ನು ಅಷ್ಟೇ ಚಂದವಾಗಿ ಕನ್ನಡಕ್ಕೆ ತಂದವರು ವಿ.ಎಂ. ಇನಾಂದಾರ್.

ಹೇಳುವುದೋ ಬೇಡವೋ ಎಂಬ ಅನುಮಾನದೊಂದಿಗೇ ತನ್ನ ಕಥೆಯನ್ನು ಶುರು ಮಾಡುತ್ತಾನೆ ಯಯಾತಿ.. ಆದರೆ ಏನನ್ನೂ ಮುಚ್ಚಿಡದೇ ಹೇಳುತ್ತಾ ಹೋಗುತ್ತಾನೆ..

"..ಆ ರಾತ್ರಿ ಮುಕುಲಿಕೆಯ ಬಾಹುಪಾಶದಲ್ಲಿ ನಾನು -ಅಥವಾ- ನನ್ನ ಬಾಹುಪಾಶದಲ್ಲಿ ಮುಕುಲಿಕೆ.. ಅಂದು ರಾತ್ರಿ ಯಾರು ಯಾರ ಬಾಹುಪಾಶದಲ್ಲಿದ್ದರು ಎನ್ನುವುದನ್ನು ಮದನ ಕೂಡ ಹೇಳಲಾರ! ಮುಕುಲಿಕೆಯ ಕೈಯನ್ನು ನಾನು ಎತ್ತಿಕೊಂಡದ್ದೇ ತಡ, ಕ್ಷಣಾರ್ಧದಲ್ಲಿ ಹೊರಪ್ರಪಂಚದೊಡನಿದ್ದ ನನ್ನ ಸಂಬಂಧ ಕಡಿದುಹೋಯಿತು. ನಾನು ಯುವರಾಜನಾಗಿ ಉಳಿದಿರಲಿಲ್ಲ. ಆಕೆ ದಾಸಿಯಾಗಿ ಉಳಿದಿರಲಿಲ್ಲ. ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುವ ಎರಡು ಜೀವಿಗಳು, ಎರಡು ಹಕ್ಕಿಗಳು, ಎರಡು ಚುಕ್ಕೆಗಳು..
ನಾವು ಆ ಮಹಲಿನಲ್ಲಿರಲಿಲ್ಲ; ಹಸ್ತಿನಾಪುರದಲ್ಲಿರಲಿಲ್ಲ; ಈ ಪ್ರಪಂಚದಲ್ಲಿಯೇ ಇರಲಿಲ್ಲ.. ಅನಂತವಾದ ಆಕಾಶದಲ್ಲಿ, ತಾರಾಮಂಡಲದ ಆಚೆಯಲ್ಲಿ, ದುಃಖ, ರೋಗ, ಮೃತ್ಯು ಎಂಬಂಥ ಮಾತುಗಳ ಧ್ವನಿ ಕೂಡ ಬಂದು ತಲುಪಲಾರದ ದೂರವನ್ನು ನಾವು ಸೇರಿದ್ದೆವು. ಆ ಲೋಕವೇ ಬೇರೆ. ಚೆಲುವು ತುಂಬಿದ್ದಷ್ಟೂ ದೂಳಿನಿಂದ ತುಂಬಿದ್ದು; ಮೋಹಕವಾಗಿದ್ದರೂ ಸುಡಬಲ್ಲದ್ದು! ಆ ಪ್ರಪಂಚ ಕೇವಲ ನಮ್ಮದಾಗಿತ್ತು. ಅದೊಂದು ಮಧುರವಾದ ಮೂರ್ಛೆಯೇ? ವಿಲಕ್ಷಣವಾದ ಹುಚ್ಚೇ? ಅಥವಾ ಚೆಲುವಾದ ಸಮಾಧಿಸ್ಥಿತಿಯೇ?

ಯಾರು ಹೇಳಬೇಕು?

ಮುಕುಲಿಕೆಯ ಹಾಗೂ ನನ್ನ ತುಟಿಗಳು ಒಂದಾದ ಕ್ಷಣಕ್ಕೆ ನನ್ನ ಮನಸ್ಸಿನಲ್ಲಿಯ ಸಾವಿನ ಭೀತಿ ಮಾಯವಾಯಿತು. ಅಂದು ರಾತ್ರಿ ನಾನು ಆಕೆಯನ್ನು ಚುಂಬಿಸಿದ್ದೆಷ್ಟು, ಆಕೆ ನನ್ನನ್ನು ಚುಂಬಿಸಿದ್ದೆಷ್ಟು- ಆಕಾಶದಲ್ಲಿಯ ಚುಕ್ಕೆಗಳನ್ನು ಯಾರಾದರೂ ಎಣಿಸುವುದು ಸಾಧ್ಯವೇ?

ಸ್ತ್ರೀಸೌಂದರ್ಯದ ವರ್ಣನೆಯನ್ನು ನಾನು ಕಾವ್ಯದಲ್ಲಿ ಓದಿದ್ದೆ. ಮುಸುಕುಮುಸುಕಾಗಿ ಅದರ ಆಕರ್ಷಣೆ ಕೆಲವು ವರ್ಷಗಳಿಂದ ನನ್ನನ್ನು ಸೆಳೆಯತೊಡಗಿತ್ತು. ಆಕರ್ಷಣೆಯ ಆನಂದದ ಅಸ್ಪಷ್ಟ ಕಲ್ಪನೆಯೂ ನನ್ನಲ್ಲಿ ಬೆಳೆದಿತ್ತು. ಆದರೆ ಆ ಆನಂದವೆಲ್ಲ ಎಳೆಯ ಮಗು ಆಕಾಶದಲ್ಲಿಯ ಚಂದ್ರನಿಗಾಗಿ ಹಾತೊರೆಯುವಂಥದಾಗಿತ್ತು. ಚೆಲುವೆಯಾದ ಯುವತಿಯ ಸಹವಾಸ ಎಷ್ಟು ಉನ್ಮಾದಕಾರಿಯಾಗಿರಬಹುದು, ಆಕೆಯ ಅಂಗಾಂಗಗಳು ಸ್ವರ್ಗಸುಖದ ತುಷಾರಗಳನ್ನು ಕ್ಷಣಕ್ಷಣಕ್ಕೆ ಹೇಗೆ ಚಿಮ್ಮಿ ತೂರಬಲ್ಲವು ಎನ್ನುವುದರ ಅನುಭವ ಅಂದು ರಾತಿ ಮೊದಲಬಾರಿಗೆ ನನ್ನದಾಯಿತು. ಅದಕ್ಕೆ ನಾನು ಸಂಪೂರ್ಣವಾಗಿ ಮನಸೋತೆ, ಮೈಮರೆತುಹೋದೆ."

-ಅದು ಯಯಾತಿಯ ಪ್ರಥಮ ಪ್ರಣಯದ ಅನುಭವ! ಆಮೇಲೆ ಆತ ಅನೇಕ ಯುವತಿಯರೊಂದಿಗೆ ಇಂತಹ ಅನುಭವಕ್ಕೆ ಫಕ್ಕಾಗುತ್ತಾನೆ. ಕಾಮಸುಖವಿಲಾಸಗಳು ಅವನಿಗೆ ಧಾರೆಯಾಗುತ್ತವೆ. ಆದರೆ ಅವನು ಹುಡುಕುತ್ತಿದ್ದ ’ಆ ಸುಖ’ ಮಾತ್ರ ಅವನಿಗೆ ಸಿಗುವುದಿಲ್ಲ. ಆತ ಪ್ರತಿಕ್ಷಣ ಕೊರಗುತ್ತಿರುತ್ತಾನೆ. ಹಿಡಿ ಪ್ರೀತಿಗಾಗಿ ಹಂಬಲಿಸುತ್ತಿರುತ್ತಾನೆ.

ಅವನ ಮಿಕ್ಕುಳಿದ ಪ್ರಣಯದ ವರ್ಣನೆಗಳನ್ನು ಮತ್ಯಾವಾಗಲಾದರೂ ನೋಡೋಣ. ಸಧ್ಯ, ಖಾಂಡೇಕರರಿಗೊಂದು ಸಲಾಮ್ ಹೇಳೋಣ. ಆ ಕಾದಂಬರಿಯನ್ನು ಮತ್ತೆ ಮತ್ತೆ ಓದಿ ಅನುಭವಿಸೋಣ.

Sunday, March 8, 2009

ನನ್ನ ಕಣ್ಣು ಮೇಲಿದೆ

ಅಮೆರಿಕಾದ ಮಹಿಳಾ ಸಂಘಟನೆಯೊಂದು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ, ಪುರುಷರ ವಿರುದ್ಧ (ಪುರುಷರ ಕಣ್ಣೋಟದ ವಿರುದ್ಧ) ನಡೆಸಿದ ಹೋರಾಟದಲ್ಲಿ ಇಂಥದ್ದೊಂದು ಟಿ-ಶರ್ಟು ಬಿಡುಗಡೆ ಮಾಡಿದ್ದರು - ಬಹಳ ಹಿಂದೆಯೇ. ಬಹಳ ಖ್ಯಾತಿಯನ್ನೂ ಪಡೆದುಕೊಂಡಿತು ಈ ಅಂಗಿ.



ಇದೇ ತಲೆಬರಹವಿರುವ ಟೋಪಿಗಳೂ, ಪ್ಯಾಂಟುಗಳೂ, ಗಡಿಯಾರಗಳೂ, ಚೀಲಗಳೂ ಸಹ ಮಾರಾಟಕ್ಕಿವೆ. ಇದು ಆಂದೋಲನಕ್ಕೆ ಹೇಗೆ ಸಮಂಜಸವೋ ಗೊತ್ತಿಲ್ಲ.

-ಅ
08.03.2009
11.30PM