Thursday, April 9, 2009

ಕಂಪ್ಯೂಟರ್ ಕರ್ಮಕಾಂಡ

ನಾನು ಕಂಪ್ಯೂಟರ್ ಸೈನ್ಸು ಹೇಳಿಕೊಡುವ ಮೇಷ್ಟ್ರು. ಚಿಕ್ಕ ಮಕ್ಕಳಿಗೆ ಕಂಪ್ಯೂಟರ್‍ನಲ್ಲಿ ಹಾರ್ಡವೇರ್ ಯಾಕೆ ಇಡುತ್ತಾರೆಂದು ನಾನು ಅದೆಷ್ಟು ಸಲ ತಲೆ ಚಚ್ಚಿಕೊಂಡಿದ್ದೇನೋ ಗೊತ್ತಿಲ್ಲ. Floppy Disk ಎಂದು ಬರೆಯಲು ಅದೆಷ್ಟು ಮಕ್ಕಳು Floppy Dick ಎಂದು ಬರೆಯುತ್ತಾರೆ! ಅದು ಏಕೆಂದೇ ಅರ್ಥವಾಗುವುದಿಲ್ಲ.

ಲ್ಯಾಬಿನಲ್ಲಿ ಎರಡೆರಡು ಮಕ್ಕಳು ಒಂದೊಂದು ಕಂಪ್ಯೂಟರಿನಲ್ಲಿ ಕುಳಿತು ಕೆಲಸ ಮಾಡುತ್ತಾರೆ. ಒಬ್ಬನ ಸರದಿಯಿದ್ದಾಗ, ಇನ್ನೊಬ್ಬ ಸುಮ್ಮನೆ ಕುಳಿತಿರುತ್ತಾನೆ. ಅವನ ಸರಿದಿ ಮುಗಿದಾಗಲೂ ಕೊಡದಿದ್ದರೆ ಇವನಿಗೆ ಸಿಟ್ಟು. ಶುರು ಚಾಡಿ. "sir, he is not giving my mouse.." ಎಂದೋ, "sir, he is playing with my mouse.." ಎಂದೋ ಮಕ್ಕಳು ಚಾಡಿ ಹೇಳುವಾಗ, "ಥು ಏನದು ಅಸಹ್ಯ!" ಎಂದು ಬೈದಿದ್ದೇನೆ.

ಅದು ಹಾಳಾಗಿ ಹೋಗಲಿ. ಅನರ್ಥ ಬಂದಿದ್ದು ಹಿಂದೆ ನಾನು ಮೇಷ್ಟ್ರಾಗುವ ಮುಂಚೆ Hardware Engineer ಕೆಲಸ ಮಾಡುತ್ತಿದ್ದಾಗ. ಫೋನು ಮಾಡಿ ತಮ್ಮ ಸಮಸ್ಯೆಗಳನ್ನು ನನ್ನ ಬಳಿ ಹೇಳಿಕೊಳ್ಳುತ್ತಿದ್ದ ಜನರಲ್ಲಿ ಯಾರೋ ಒಬ್ಬ ಪುಣ್ಯಾತ್ಮನಿಗೆ ಮಾಲಪ್ರೋಪಿಸಮ್ಮು. (ಬಿ.ಜಿ.ಎಲ್. ಸ್ವಾಮಿಯವರ ಹಸುರುಹೊನ್ನು ಓದಿದರೆ ಈ ಮಾಲಪ್ರೋಪಿಸಮ್ ಬಗ್ಗೆ ತಿಳಿದೀತು). ಆತ ನನಗೆ ಹೇಳಿದ್ದು ಹೀಗೆ: "I got your number from ......, i want to increase my hard dicks! how much does it cost?"

ರಾಮರಾಮ! ಇದನ್ನು ನನ್ನ ಕೇಳಿದರೆ ಹೇಗೆ? ನಾನೇನು......... ಇರಲಿ. "Sorry??" ಎಂದೆ. ಆತ "I have an old hard dicks, i want a new one with more capacity." ಎಂದ. ನಾನು ನಗಲಾರದೆ, ಅಳಲಾರದೆ, "ok, what is your current configuration?" ಎನ್ನುವಾಗ ನೆಲಕ್ಕುರುಳಿ ಬೀಳುವುದೊಂದು ಬಾಕಿ. ಆತನಿಗೆ ಬೇಕಾಗಿದ್ದುದು Hard Disk ಎಂದು ನಾನು ಬಿಡಿಸಿ ಬೇರೆ ಹೇಳಬೇಕಿಲ್ಲವೆನಿಸುತ್ತೆ.

ಎಸ್.ಪಿ.ರೋಡಿಗೆ ಹೋದಾಗ ಕಂಪ್ಯೂಟರ್ ಅಂಗಡಿಯವನು ನನ್ನನ್ನು ತಬ್ಬಿಬ್ಬಾಗಿಸಿದ್ದ ಒಮ್ಮೆ. "160 GB Hard Disk ಬೇಕಾಗಿತ್ತು." ನಾನು ಕೇಳಿದೆ. ಅವನು, "ಓಹ್, ಬನ್ನಿ. 250 GBದು ತೊಗೊಳಿ, ನಾನು "ಸಾಟಾ" ನೇ ಕೊಡ್ತೀನಿ ಅಂದ.

"ಏನು??????????" ನಾನು ಕೇಳಲು ಹೊರಟೆ. ನನ್ನ ಕಿವಿಗೆ ಅದು ಬೇರೆ ರೀತಿಯೇ ಕೇಳಿಸಿತು.

"ಈಗ ಎಲ್ಲ ಚೇಂಜ್ ಆಗಿದೆ, ಮುಂಚೆ ಥರ ನೀವು ದೊಡ್ಡ ಕೇಬಲ್ ಹಾಕ್ಬೇಕಾಗಿಲ್ಲ. Data Transfer Rate ಕೂಡ ಫಾಸ್ಟು. ಸಾಟಾ ತೊಗೊಳಿ." ಎಂದ.

ನನ್ನ ತಲೆ ತಿರುಗಿತು!

ಅದಕ್ಕೇ ಹೇಳೋದು ತಂತ್ರಜ್ಞಾನದಲ್ಲಿ update ಆಗಿರಬೇಕು ಎಂದು. ಇಲ್ಲವಾದರೆ ಹೀಗೇ ಆಗೋದು. SATA ಎಂದರೆ Serial Advanced Technology Attachment ಎಂದು. ಉಚ್ಚಾರಣೆ ತೊಂದರೆಯಿದ್ದರೆ ಕಷ್ಟ.

-ಅ
10.04.2009
12AM

5 comments:

sunaath said...

ಮಣಕ ಯಂತ್ರದ ಬಗೆಗೆ ನೀವು ಕೊಟ್ಟ ಮಾಹಿತಿ ಚೆನ್ನಾಗಿದೆ. ಚಿತ್ರಗಳನ್ನೂ ಪೂರೈಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

Shankar Prasad ಶಂಕರ ಪ್ರಸಾದ said...

ಅಣ್ಣಾ...ಸಖತ್ Conceive ಆಗಿದೀನಿ. ಅರ್ಥ ಆಗ್ತಾ ಇಲ್ಲ. ನಮ್ಮ Hard Diks ನಲ್ಲಿ ಆಷ್ಟೊಂದು ಕ್ಯಪಾಸಿಟಿ ಇಲ್ಲ.. ದಯವಿಟ್ಟು ಅಡ್ಜಸ್ಟ್ ಮಾಡಿ.

ಕಟ್ಟೆ ಶಂಕ್ರ

Prashant said...

ಗುರುಗಳೆ Diks ನಲ್ಲಿ
ಕ್ಯಪಾಸಿಟಿ ಇಲ್ಲಾಂದ್ರೆ Hard ಹೆಂಗ್ ಅಗುತ್ತೆ ??? :D

ದೀಪಸ್ಮಿತಾ said...

tamaasheyagide

ನನ್ನೊಳಗಿನ ಮಾತು............ said...

ತುಂಬಾ ಚೆನ್ನಾಗಿದೆ, ಇಂತಹದ್ದೇ ಒಂದು ಹಾಸ್ಯ ಪ್ರಸಂಗ ನನ್ನ ಸ್ನೇಹಿತ ಹೇಳಿದ್ದು, ಅದನ್ನು ಇಲ್ಲಿ ಹಂಚಿಕೊಳ್ಳಬೇಕೆನಿಸಿತು.
ನಮ್ಮದು ಮೈಸೂರು ಜಿಲ್ಲೆಯ ಒಂದು ಹೋಬಳಿ ಕೇಂದ್ರ, ಅಲ್ಲಿ ನನ್ನ ಸ್ನೇಹಿತನ ಒಂದು ಅಂಗಡಿ ಇದೆ ಅದರ ಜೊತೆಗೆ ಅವರು ಗೊಬ್ಬರದ ವ್ಯಾಪಾರವನ್ನು ಮಾಡುತ್ತಾರೆ. ಹೀಗೆ ಒಂದು ದಿನ ಅವರ ತಂದೆ ಅಂಗಡಿಯಲ್ಲಿ ಇರುವಾಗ ಒಬ್ಬ ಪಕ್ಕದೂರಿನ ರೈತ ಓಡೋಡಿ ಬಂದು ಶೆಟ್ರೆ ಅರ್ಜೆಂಟ್ 2 ಕೆ .ಜಿ ವೀರ್ಯ(ಯೂರಿಯ ಗೊಬ್ಬರ) ಕೊಡಿ ಅಂದ ಅದಕ್ಕೆ ನನ್ನ ಸ್ನೇಹಿತನ ತಂದೆ ನಿನಗೆ 2 kg ನೇ ಬೇಕು ಅಂದ್ರೆ ದನದ ಆಸ್ಪತ್ರೆಗೆ ಹೋಗ್‌ಬೇಕು ಇಲ್ಲಿ ಅಷ್ಟೊಂದು ಸಿಗೋದಿಲ್ಲ ಅಂದ್ರಂತೆ(ದನದ ಆಸ್ಪತ್ರೆಯಲ್ಲಿ ವೀರ್ಯ (Semen) ವನ್ನು ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡಲು ಶೇಖರಿಸಿ ಇಡುತ್ತಾರೆ) .