Showing posts with label Advertisement. Show all posts
Showing posts with label Advertisement. Show all posts

Wednesday, July 18, 2012

ಒಂದಿಷ್ಟು ಚಿತ್ರಗಳು..













Wednesday, October 21, 2009

ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ

-ರಜನಿ ಎಂ.ಜಿ.
(ವಿಜಯ ಕರ್ನಾಟಕದ ಮಹಿಳಾ ವಿಜಯ ಪುರವಣಿಯಲ್ಲಿ ಪ್ರಕಟವಾಗಿದ್ದ ಲೇಖನ)

ಮೊದಲ ಬಾರಿ ಸ್ಯಾನಿಟರಿ ನ್ಯಾಪ್‌ಕಿನ್ ಜಾಹೀರಾತು ಟಿವಿಯಲ್ಲಿ ಪ್ರಸಾರವಾಗಿದ್ದು ನೆನಪಿದೆಯೇ? ರೇಣುಕಾ ಶಹಾನೆ ('ಸುರಭಿ' ಕಾರ್ಯಕ್ರಮದಿಂದ ಜನಪ್ರಿಯಳಾಗಿದ್ದಳಲ್ಲ, ಅವಳೇ!) ಸರಳವಾದ ಉಡುಪಿನಲ್ಲಿ ಬಂದುನಿಂತು "ನಾನು ನಿಮ್ಮ ಬಳಿ ಹೇಳಲೇಬೇಕಾದ ವಿಷಯವೊಂದಿದೆ. ಆದರೆ ಹೇಗೆ ಹೇಳಲಿ?" ಎಂದು ಸಂಕೋಚದಿಂದ, ಮೆಲುದನಿಯಲ್ಲಿ ಅದರ ಬಗ್ಗೆ ಸೂಚ್ಯವಾಗಿ ಹೇಳುವ ಜಾಹೀರಾತದು. ಸಂಪ್ರದಾಯವಾದಿಗಳು ಅಂದು ಮೂಗು ಮುರಿದಿದ್ದರು. ಮಕ್ಕಳು ಇದೇನೆಂದು ಕೇಳಿದರೆ ಏನು ಹೇಳುವುದು ಎಂದು ಹೌಹಾರಿದ್ದರು. ಆದರೆ ಮಕ್ಕಳ ಗಮನ ಸೆಳೆಯುವಂಥದ್ದೇನೂ ಅದರಲ್ಲಿರಲಿಲ್ಲ. ಹೈಸ್ಕೂಲು, ಕಾಲೇಜಿಗೆ ಹೋಗುವ ತರುಣಿಯರು ಮಾತ್ರ ಪರಸ್ಪರ ಕಿವಿಯಲ್ಲಿ ಪಿಸುಗುಟ್ಟಿಕೊಂಡು ಕಿಲಕಿಲ ನಕ್ಕಿದ್ದರು. ಅಷ್ಟು ವರ್ಷಗಳಿಂದ ಆರೋಗ್ಯ ಇಲಾಖೆ ಹೇಳಲು ವಿಫಲವಾಗಿದ್ದ ನೈರ್ಮಲ್ಯದ ಪಾಠವನ್ನು ಕೇವಲ ಒಂದು ಜಾಹೀರಾತು ಸಾಧಿಸಿ ತೋರಿಸಿತ್ತು. ಮಾತ್ರವಲ್ಲ, ಜಾಹೀರಾತು ಲೋಕದಲ್ಲಿದ್ದ ಮಡಿವಂತಿಕೆಯನ್ನೂ ಕಳಚಿತ್ತು. ಅದರ ಪರಿಣಾಮವಾಗಿಯೇ ಇಂದು ಅದೇ ನ್ಯಾಪ್ಕಿನ್ ಕಂಪೆನಿ ಯಾವುದೇ ಸಂಕೋಚ, ಮುಜುಗರಗಳಿಗೆ ಅವಕಾಶವಿಲ್ಲದಂತೆ "ಹ್ಯಾವ್ ಅ ಹ್ಯಾಪಿ ಪಿರಿಯಡ್" ಎಂದು ವಿಶ್ ಮಾಡಿಕೊಳ್ಳುವಂಥ ಆರೋಗ್ಯಕರ ಪರಿಸರವನು ರೂಪಿಸಿಕೊಂಡಿತು.

ಸ್ಯಾನಿಟರಿ ನ್ಯಾಪ್‌ಕಿನ್‌ಗಳಷ್ಟೇ ಗರ್ಭ ನಿರೋಧಕ ಮಾತ್ರೆ ಮತ್ತು ಕಾಂಡೋಮ್‌ಗಳ ಬಗ್ಗೆಯೂ ಮಡಿವಂತಿಕೆ ಇತ್ತು. ಜಾಗೃತಿಯ ಅಗತ್ಯವಿತ್ತು. ಆದರೆ ಅದರ ಸುರಕ್ಷೆಗೆ ಒತ್ತು ಕೊಡದೇ, ಕಾಮೋತ್ತೇಜಕ ಮಾತ್ರೆಗಳೇನೋ ಎಂಬಂತೆ ದೃಶ್ಯಗಳನ್ನು ಬಳಸಿದ್ದರಿಂದಲೇ ನಿರೀಕ್ಷಿತ ಮಟ್ಟದಲ್ಲಿ ಜಾಗೃತಿ ಮೂಡಿಸಲಿಲ್ಲವೆನಿಸುತ್ತದೆ. ಪಡಖಾನೆಯಲ್ಲಿ ಕೂತು ಟಿವಿ ನೋಡುವ ನಮ್ಮ ಮಂದಿ ಅಂಥ ದೃಶ್ಯಗಳನ್ನು ಕಂಡಕೂಡಲೇ ಚಾನೆಲ್ ಬದಲಾಯಿಸುತ್ತಾರೆ ಎನ್ನುವುದನ್ನು ಆ ಜಾಹೀರಾತು ಮಾಡಿದವರು ಮರೆತಿದ್ದರೇನೊ.

ಇತ್ತೀಚೆಗೆ ಟಿವಿಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಗರ್ಭ ನಿರೋಧಕ ಮಾತ್ರೆಗಳ ಜಾಹೀರಾತುಗಳನ್ನು ನೋಡಿದಾಗ ಇದೆಲ್ಲಾ ನೆನಪಾಯಿತು... ಮುಂದೆ ಓದಲು ಭೇಟಿ ಕೊಡಿ: ಜೀವನ್ಮುಖಿ

[Thanks to Rajani M.G. & Vijay Karnataka]

Tuesday, August 12, 2008

ಒಲಿಂಪಿಕ್ ಸ್ಪೆಶಲ್!

ಬೀಜಿಂಗಿನಲ್ಲಿ ಒಲಿಂಪಿಕ್ ಸದ್ದು ಜೋರಾಗಿದೆ. ಅದರ ಉದ್ಘಾಟನೆಯ ಅದ್ಧೂರಿ ಸಮಾರಂಭವನ್ನು ನೋಡಿ ಇಡೀ ಜಗತ್ತು ಚೀನಾದೆಡೆಗೆ ನಿಬ್ಬೆರಗಾಗಿದೆ. ಭಾರತಕ್ಕೆ ಚಿನ್ನದ ಪದಕ ಬಂದಮೇಲಂತೂ ಇಲ್ಲೂ ಎಲ್ಲರ ಬಾಯಲ್ಲೂ ಒಲಿಂಪಿಕ್. ವೆಬ್‍ಸೈಟುಗಳು, ನ್ಯೂಸ್‍ಪೇಪರುಗಳು, ಟೀವಿ ಚಾನೆಲ್ಲುಗಳು -ಯಾವುದೇ ಮಾಧ್ಯಮವನ್ನು ಪಿಕ್ ಮಾಡಿಕೊಂಡರೂ ಅದರಲ್ಲಿ ಒಲಿಂಪಿಕ್ಕೇ.

ಒಲಿಂಪಿಕ್ಕಿನಿಂದಾಗಿ ಚೀನಾ ದೇಶದ ಚಿತ್ರಣವೇ ಬದಲಾಗಿಹೋಗಿದೆ. ಅದರ ಬಗ್ಗೆ ನಾಗರಾಜ ವಸ್ತಾರೆಯವರ ಒಂದು ಒಳ್ಳೆಯ ಲೇಖನ ಕೆಂಡಸಂಪಿಗೆಯಲ್ಲಿದೆ. ಡಾ| ಲೀಲಾ ಸಂಪಿಗೆಯವರು, ಒಲಿಂಪಿಕ್ಕಿನಿಂದಾಗಿ ಕಿಕ್ಕಿರಿದಂತಾಗಿರುವ ಚೀನಾದಲ್ಲಿ ಬಳಸಲ್ಪಡುತ್ತಿರುವ ಕಾಂಡೋಮುಗಳ ಬಗ್ಗೆ, ಅದನ್ನು ಎಲ್ಲೆಂದರಲ್ಲಿ ಎಸೆಯುವುದರಿಂದಾಗಿ ಉಂಟಾಗುವ ಪರಿಸರ ಮಾಲಿನ್ಯದ ಬಗ್ಗೆ, ಏಡ್ಸ್ ಜಾಗೃತಿ-ಲೈಂಗಿಕ ಕಾರ್ಯಕರ್ತೆಯರ ಬಗ್ಗೆ -ಇತ್ಯಾದಿ ವಿಷಯಗಳ ಬಗ್ಗೆ ಗಮನ ಹರಿಸಿ ಬರೆದ ಪುಸ್ತಕ 'ಒಲಿಂಪಿಕ್ಸ್ ಎಂಬ ಕೆಂಪು ದೀಪ' ಮೊನ್ನೆ ಮೊನ್ನೆ ಬಿಡುಗಡೆಯಾಗಿದೆ. ಏಡ್ಸ್ ಜಾಗೃತಿ ಮೂಡಿಸಲು, ಚೀನಾದಲ್ಲಿ ಕಾಂಡೋಮುಗಳ ಜಾಹೀರಾತನ್ನು ಆದಷ್ಟೂ ಪರಿಣಾಮಕಾರಿಯಾಗಿ - ಆಕರ್ಷಕವಾಗಿ ಪ್ರದರ್ಶಿಸಲು ಅಲ್ಲಿನ ಕಾಂಡೋಮ್ ತಯಾರಿಕಾ ಕಂಪನಿಗಳು ಹರಸಾಹಸ ಮಾಡುತ್ತಿರುವುದನ್ನು ಡಾ| ಲೀಲಾ ಸಂಪಿಗೆ ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.

ಹಾಗಾದರೆ ಅದೆಂತಹ ಜಾಹೀರಾತುಗಳು ಅಲ್ಲಿ ಪ್ರದರ್ಶಿಸಲ್ಪಡುತ್ತಿರುವುದು? ಹುಡುಕ ಹೊರಟಾಗ ಮೋಟುಗೋಡೆ ಟೀಮಿಗೆ ಸಿಕ್ಕ ಕೆಲವನ್ನು ನಿಮ್ಮ ಕುತೂಹಲಕ್ಕಾಗಿ ಇಲ್ಲಿ ಕೊಡುತ್ತಿದ್ದೇವೆ. 'Elasun' ಎಂಬ ಕಂಪನಿಯ ಜಾಹೀರಾತುಗಳು ಇವು. ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ಇನ್ನೂ ಹೆಚ್ಚಿನ ಪದಕಗಳು ಬರಲಿ; ಏಡ್ಸ್ ತಡೆಗಟ್ಟುವಲ್ಲಿ ಈ ಜಾಹೀರಾತುಗಳು ನೆರವಾಗಲಿ ಎಂದು ಆಶಿಸೋಣ.

ಸೈಕ್ಲಿಂಗ್


ಬಾಸ್ಕೆಟ್ ಬಾಲ್


ಸ್ವಿಮ್ಮಿಂಗ್


ಒಲಿಂಪಿಕ್ಸ್ ಚಿಹ್ನೆ