Monday, February 1, 2010

ಮಿದುವ ಹದ ಮಾಡಿದ ಮುತ್ತು..

-ಗೌತಮ್ ಹೆಗಡೆ


ಚುಕ್ಕಿ ಲೆಕ್ಕ ಕಲಿಸುವೆನೆಂದು
ಆಕಾಶ ನೋಡುವ ಕಲೆಯ
ಹೇಳಿಕೊಡುವೆ ಬಾ ಎಂದು
ಹೊಳೆಯ ದಂಡೆಯ ಹುಣಿಸೆ ಮರದ ಕೆಳಗೆ
ಎದೆಯ ತಾಳದ ಲೆಕ್ಕ ತಪ್ಪಿಸಿ
ಗೋವಿಂದ ಕಲೆ ಕಲಿಸಿದವನು ನೀನು... ...

ಅಂದು ಆ ರಾತ್ರಿ
ನನ್ನೇ ಮರೆತ ನಾನಿದ್ದೆ;
ಎನ್ನೊಡನೆ ನೀನಿದ್ದೆ.
ಹೊಳೆ ನೀರ ಸವರಿ ತೇಲಿ ಬರುತಲಿದ್ದ
ತಂಗಾಳಿಯಿತ್ತು
ಏರಿಳಿವ ಎದೆಯ ಗೂಡಿನ ತುಂಬಾ
ಉಸಿರು ಬೆಚ್ಚಗಾಗಿತ್ತು
ತನುವೆಲ್ಲ ಉಪ್ಪು ಹುಳಿ ಖಾರದ
ಹದವಾದ ಪಾಕವಾಗಿತ್ತು
ನಮ್ಮ ನಡುವೆ ಅರ್ಥವಿಲ್ಲದ ಒಂದಡಿಯ ಅಂತರ
ತೀರ ಸಪ್ಪೆಯಾಗಿತ್ತು..
ಮೌನ ಸಾಕಾಗಿತ್ತು
ಮಾತೂ ಬೇಡವಾಗಿತ್ತು

ಸಾಕಾದ ಮೌನ
ಬೇಡವಾದ ಮಾತಿನ ನಡುವೆ
ಕೈಗೆ ಕೈ ಸೋಕಿ ಅಪ್ಪುಗೆ ಹುಟ್ಟಿತ್ತು,
ಜೊತೆ ಜೊತೆಗೆ ಅಸಂಖ್ಯ ಮುತ್ತು..
ಹಣೆಗೊಂದು
ಕಣ್ಣ ಮೇಲೊಂದು
ತುಟಿಗೊಂದು
ನೀಳ ಕೊರಳ ಮೇಲೊಂದು
ನಾಜೂಕಿನ ಮುತ್ತು..
ಮತ್ತೆ ಎದೆಯ ಮಿದುವಿನಲ್ಲೊಂದು
ಅತಿ ಮಧುರ ಮುತ್ತು
ಮಿದುವನ್ನೊಮ್ಮೆ ಹದ ಮಾಡಿ
ಮುತ್ತು ಮುಂದೆ ಹೊರಟಿತ್ತು
ಇಳಿಜಾರ ಹಾದಿಯಲಿ ಜಾರಿ ಜಾರಿ
ಹೊಕ್ಕಳ ಸರಹದ್ದು ದಾಟಿ
ಮುತ್ತು ಇನ್ನೆಲ್ಲೋ ಸೇರಿತ್ತು..

ನಾನರಳಿ ಸುಖದಲ್ಲಿ ನರಳಿ
ಹೂವಾದೆ
ನೀ ತೃಪ್ತ ದುಂಬಿಯಾದೆ
ನಾ ಬಟ್ಟಬಯಲಾದೆ
ನೀ ಖಾಲಿ ಮುಗಿಲಾದೆ...

9 comments:

ಸೀತಾರಾಮ. ಕೆ. / SITARAM.K said...

nice one Goutham
Keep it up

Subrahmanya said...

ರಸಿಕತೆಯ ಪರಮಾವಧಿಯನ್ನು ಕವನದಲ್ಲೇ ತಲುಪಿ(ಸಿ)ಬಿಟ್ಟೀದ್ದೀರಿ...ಕಲೆಗೆ ಬೆಲೆ ಕಟ್ಟಲಾದೀತೇ ಕಾಂತಾ,,!!ಉತ್ತಮ ಕವನ..Thank u

umesh desai said...

ಎಂಥಾ ಕವಿತಾ ಭೇಷ್ ಗೌತಮ....!

sunaath said...

ಮಾಣಿ, ನೀ ಬರೆದದ್ದಾ ಇದು? ನಂಬಲು ಆಯ್ತಿಲ್ಲೆ!

ಗೌತಮ್ ಹೆಗಡೆ said...

:):)sunath kaka yaake intha doubt?

V.R.BHAT said...

ಗೋವಿಂದ ಕಲೆ -ಎಂಬ ಶಬ್ಧ ಶುರುವಾಗಿದ್ದು ಹಂಸಲೇಖರ ಹಾಡಿನಿಂದ, ನೀವೂ ಅದನ್ನು ಬಳಸಿ ಭಾಷೆಯ ಸೊಗಸನ್ನು ತೊರ್ಪಡಿಸಿದ್ದೀರಿ!

ಅಲೆಮಾರಿ said...

ನಿಜ ವಿ.ಆರ್.ಭಟ್ ಸರ್. ' ಗೋವಿಂದ ಕಲೆ 'ಎಂಬ ಪದ ' ಗಡಿಬಿಡಿ ಗಂಡ 'ಚಿತ್ರದ " ಪಂಚರಂಗಿ ಪುಟ್ಟ ರಾಮನಾದ " ಎಂಬ ಹಾಡಲ್ಲಿ ಬಳಕೆಯಾಗಿದೆ.ನೀವು ಸರಿಯಾಗಿ ಗುರುತಿಸಿದ್ದೀರಿ. ಹಂಸಲೇಖ ಎಂಬ ದೈತ್ಯ ಪ್ರತಿಭೆಗೆ ವಂದಿಸುತ್ತಾ, ಅವರನ್ನು ನೆನಪಿಸಿದ ನಿಮಗೂ ಒಂದು ಧನ್ಯವಾದ:)

ಸುಪ್ತವರ್ಣ said...

ಇದೇನು ಸಹಸ್ರಲಿಂಗದಲ್ಲಿ ನಡೆದಿದ್ದಾ ಅಂತ ಅನುಮಾನ...ಸಕ್ಖತ್ತಾಗಿದೆ ಗೌತಮ್! ಕವಿತೆಗೆ ಸಕ್ಖತ್ rhythm ಮತ್ತು ಅರ್ಥ ಎರಡೂ ಇವೆ!

Unknown said...

Simply superb... I think only hamsalekHa write like this.

Keep it up