Friday, September 17, 2010

ಮೊಗ್ಗಿನ ಮಧು

ಮೊಲೆ ಮೊಗ್ಗ ಮುಗ್ಧತೆಯ
ಆಹ್ವಾನ ದೊರೆತಾಯ್ತು
ತಡವೇಕೆ ಇನ್ನ? ಎನ್ನ ಮನದನ್ನ..

ಸವಿಯ ಕುಂಭವ ನೀನು ಮನಸಾರೆ ಮುತ್ತು,
ಪಡೆ ಮನದಣಿಯೆ ಮತ್ತು
ಬಾಯ್ತುಂಬ ಸುಖದ ಕೈತುತ್ತು

ತುಂಬಿಹುದು ಎದೆ ತುಂಬ
ಪ್ರೀತಿ ಅಮೃತ ಧಾರೆ
ಕ್ಷಣ ಕ್ಷಣಕೂ ತಲ್ಲಣ,
ಮಧುರ ಪೇಮದ ಸಿಂಚನ-
ಹನಿ ಹನಿಯಾಗಿ ನೀ ಈ ಪ್ರೀತಿ ರಸ ಹೀರೆ.

ನನ್ನಯ ಎದೆಯರಸ,
ಮಧುರವೀ ರಸನಿಮಿಷ
ಈ ಮೊಗ್ಗಿನಾ ಮಧುವ
ಮೆಲ್ಲ ಮೆಲ್ಲನೆ ಮೆಲ್ಲು
ತನುವ ಮೊಗ್ಗಿದು, ಮನದ ಹೂವರಳಿಸುವುದು
ನನ್ನ ತನು-ಮನಗಳೆರಡನ್ನೂ
ಒಟ್ಟೊಟ್ಟಿಗೇ ಗೆಲ್ಲು

ತಣಿವಾಗಿ ದಣಿ ದಣಿದು
ಮುದವಾಗಿ ಮಣಿ ಮಣಿದು
ಸಾಮೀಪ್ಯದಾ ಸೋನೆ ಸುರಿದು ತೇಲೋಣ
ಸಂತೃಪ್ತಿಯಲಿ.. ಮತ್ತೊಂದು ಜಗದಲ್ಲಿ..
ನಮ್ಮ ತೋಳ್ತೆಕ್ಕೆಯಲಿ..


* *
ಇದು ಅಧಿಕೃತವಾಗಿ ಮೋಟುಗೋಡೆಗೆ ಬಂದ ಮೊದಲ ಮಹಿಳಾ ಎಂಟ್ರಿ! ಇದನ್ನು ಬರೆದು ಕಳುಹಿಸಿರುವುದು ಸಹಬ್ಲಾಗಿಣಿಯೊಬ್ಬರು. ತಮ್ಮ ಹೆಸರನ್ನು ಅನಾಮಿಕವಾಗಿಡುವಂತೆ ಸೂಚಿಸಿದ ಅವರಿಗೆ ಥ್ಯಾಂಕ್ಸ್ ಹೇಳುತ್ತಾ, ಈ ಪ್ರಕ್ರಿಯೆ ಮುಂದುವರೆಯಲಿ ಅಂತ ಹಾರೈಸುತ್ತೇವೆ.

8 comments:

Christy said...
This comment has been removed by the author.
Christy said...

super... aa mahila manige krutajnategalu... aa punyaatagitti innashtu shrungaara kaavyagalannu baredu namagella unabadisali.. dhanyavaadagalu

ಚಿತ್ರಾ said...

ಸುಶ್ರುತ,
ಒಳ್ಳೆಯ ಶೃಂಗಾರ ಗೀತೆ . ಸುಂದರವಾಗಿ ಮೂಡಿದೆ . ಕವಯಿತ್ರಿಗೆ ನನ್ನ ಅಭಿನಂದನೆಗಳು .

ಮನದಾಳದಿಂದ............ said...

ಶುಶ್ರುತ ಅವರೇ,
ಒಂದು ಒಳ್ಳೆಯ ಶೃಂಗಾರ ಗೀತೆಯನ್ನು ಪ್ರಕಟಿಸಿದ ನಿಮಗೂ ಬರೆದು ಕಳುಹಿಸಿದ ಅನಾಮಿಕ ನಾರೀಮಣಿಗೂ ಧನ್ಯವಾದಗಳು.

umesh desai said...

ಇದು ಅನ್ಯಾಯ ನೋಡ್ರಿ ಇಷ್ಟು ಛಂದ ಕವಿತಾ ಬರದವರು ಅನಾಮಿಕಾ ಆಗಿ ಉಳಿಬಾರದು

ಪ್ರಗತಿ ಹೆಗಡೆ said...

ಚೆನ್ನಾಗಿದೆ ಕವನ... ಕವಯಿತ್ರಿಗೆ ನನ್ನ ಅಭಿನಂದನೆಗಳನ್ನು ತಿಳಿಸಿ...

Shashi jois said...

ಕವನ ಚೆನ್ನಾಗಿದೆ.
ಆದರೆ ಇಷ್ಟು ಚೆನ್ನಾಗಿ ಬರೆದ ಕವಯಿತ್ರಿಗೆ ಮುಖ ಮುಚ್ಚಿ ಕೊಳ್ಳುವ ಅವಶ್ಯಕತೆ ಉಂಟೇ!!!

ಜಲನಯನ said...

ಸುಶೃತ...ಚನ್ನಾಗಿದೆ ಗೀತೆಯ ರಸಿಕತೆ ಶೃಂಗಾರಕ್ಕೆ ಶೃಂಗಾರ...