Wednesday, February 25, 2015

The troubled history of the foreskin

There has been a great debate on Circumcision is the recent past.

Here is a very detailed article on that issue.
Photo: Elvert Barnes on Flickr
Click below for the full article.

The troubled history of the foreskin


Few exceprts from the article..
  • "No Medical Excuse for Genital Abuse.”..
  • Today circumcision is among the most common surgeries in the US: an estimated 1.2 million infants are circumcised each year, at a cost of up to $270 million.
A very long article. But definitely worth reading.

Saturday, February 14, 2015

ಮಕ್ಕಳು ಎಲ್ಲಿಂದ ಬರುತ್ತಾರೆ?

ಮಕ್ಕಳು ಹೇಗೆ ಹುಟ್ಟುತ್ತಾರೆ ಎಂದು ಮೊದಲ ಬಾರಿ ತಿಳಿದ ಮಕ್ಕಳ ಪ್ರತಿಕ್ರಿಯೆ!


Not easy to explain. I love kids expression :-)

Happy Valentine's Day :-)

Be safe. Or else you will also have to explain how you forgot to put on Condom and stuff :P

Friday, September 19, 2014

ಇದಕ್ಕೂ ಒಂದು ಬ್ಯಾಂಕು ???




 ಅದರದ್ದೇ ಬ್ಯಾಂಕು ಆದ್ರೆ ಎಂತದಂತೆ, ನಮ್ಮ ಕೆಂಪು ಬಸ್ಸುಗಳಲ್ಲಿ ಬರೆದಿದ್ದು ನೆನಪಿಡಿ, "ನಿಮ್ಮ ಸಾಮಾನಿಗೆ ನೀವೇ ಜವಾಬ್ದಾರರು"  ಹಾಗೂ ............ 



ಲಾಸ್ಟ್ ಕ್ವಶ್ಚನ್ : ಆ ಬ್ಯಾಂಕ್ ಎ ಟಿ ಎಂ ಹ್ಯಾಂಗೆ ಕೆಲಸ ಮಾಡತ್ತೆ?   

Saturday, July 19, 2014

Thursday, December 5, 2013

Wednesday, November 27, 2013

Naughty Samsung Ad!

Samsung ad!
As the original article says 
"It’s either an absolutely brilliant marketing campaign or the most awkward spelling mistake ever."
Apparently, "The billboard was erected (sorry, not sorry) in Egypt, Pakistan, Kenya and France," Sowetan Live reported.
What do you think?

Update: That photo turns out to be a photoshopped version of original bill-board. Apologies Samsung. Nevertheless, it made us laugh!:)

Tuesday, August 13, 2013

ನೀಲಿಯೆಲ್ಲ ನಿಜವಲ್ಲ!

ಹಿಂದೊಮ್ಮೆ "ಸೇಬು ಮತ್ತು ನೀಚ" ಓದಿದ್ದು ನಿಮಗೆ ನೆನಪಿರಬಹುದು. ಮರೆತಿದ್ದರೆ ಬೇಗ ಓದಿ ಬಿಡಿ. ಆದರೆ ಇಂದು ನೀಲಿ ಚಿತ್ರಗಳ ಬಗ್ಗೆ ಕತೆ ಬರೆಯುತ್ತಿಲ್ಲ. ಬದಲಿಗೆ, ನೀಲಿ ಚಿತ್ರಗಳಿಗೂ ವಾಸ್ತವಕ್ಕೂ ಇರುವ gapನ್ನು ಸ್ವಲ್ಪ explore ಮಾಡೋಣ.

ಊಹೂಂ! gap, explore ಅಂತೆಲ್ಲಾ ಓದಿ ಗಾಬರಿಯಾಗಬೇಡಿ. ನನ್ನ ಅನುಭವವನ್ನು ಹೇಳುತ್ತಿಲ್ಲ. ಬಲ್ಲವರು ಹೇಳಿದ್ದು ಈ ವೀಡೀಯೋದಲ್ಲಿದೆ. ನೋಡಿ.



ನೋಡಿ ಕಲಿ, ಮಾಡಿ ನಲಿ :-)

Friday, October 19, 2012

ಗುಬ್ಬಿ ಚಟ

"ಗುಬ್ಬಿ ಚಟ" ಅನ್ನೋ ಈ ನಾಣ್ಣುಡಿಯನ್ನ ತಾವು ಕೇಳಿರಲೇಬೇಕು. ಅದ್ರ ಅರ್ಥನೂ ಗೊತ್ತಿರಲೇ ಬೇಕು. ಆದ್ರೆ  ಗುಬ್ಬಿ ಚಟ ಅನ್ನೋ ಗಾದೆ ಅಥವಾ ಮಾತು ಹ್ಯಾಗೆ ಬಂತು ಗೊತ್ತ? ಇಲ್ಲಿ ಕೇಳಿ ಅದರ ಕತೆ.

ಒಂದಲ್ಲ ಒಂದು ದೊಡ್ಡ ಕಾಡಲ್ಲಿ ಒಂದು ದೊಡ್ಡ ಆನೆ ಇತ್ತಂತೆ. ಅದಕ್ಕೆ ಒಂದು  ದಿನ ಯಾಕೊ ಬೆನ್ನಲ್ಲಿ ತುರಿಕೆ ಬಂತು. ಅದು ಅಂತಿಂತಾ ಜಾಗ ಅಲ್ಲ, ಅದೆಲ್ಲೋ ಕೆರಕೊಳೋದು ಕಷ್ಟವಾದ ಜಾಗ. ತುರಿಕೆಯಿಂದ ಅದು ಅಸಹನೆಗೆ  ಒಳಗಾಯಿತು, ಘೀಳಿಡುತ್ತಾ ಅತ್ತ ಇತ್ತ ಸುತ್ತ ಮುತ್ತ ತಿರುಗಾಡ ತೊಡಗಿತು. ಇದನ್ನೆಲ್ಲಾ ಒಂದು ಪುಟ್ಟ ಗುಬ್ಬಿ ಅಲ್ಲೇ ಪಕ್ಕದ ಮರದಮೇಲೆ  ಕೂತು ನೋಡುತ್ತಿತ್ತು. ಅದಕ್ಕೆ ಆನೆಯ ಅಂತರಾಳ ಅರ್ಥವಾಗಲಿಲ್ಲ, ತನಗೆ ತಿಳಿದಂಗೆ ಅದು ಯೋಚಿಸತೊಡಗಿತು.

ಆನೆ ಬೆದೆಗೆ ಬಂದಿದೆ ಅದರ ಸಾಥಿ ಹಾಥಿಗಾಗಿ ಘಿಳಿಡುತ್ತಿದೆ ಅಂದುಕೊಂಡಿತು. ಆನೆಯ  ತುರಿಕೆಯ ಅಸಹನೆ ಹೆಚ್ಚಾಗುತ್ತ ಸಾಗಿತು. ಗುಬ್ಬಿ ಅತ್ತಿತ್ತ ಸುತ್ತಮುತ್ತೆಲ್ಲ ಹಾರಾಡಿ  ಗಂಡಾನೆ ಇದೆಯೋ ನೋಡಿತು, ಯಾವುದೂ ಕಂಡುಬರಲಿಲ್ಲ. ಆನೆ ದಾರಿಕಾಣದೆ ಸಿಕ್ಕಸಿಕ್ಕಲ್ಲೆಲ್ಲ ಓಡತೊಡಗಿತು. ಅತ್ತಿತ್ತ ಓಡಿದ ಆನೆಗೊಂದು ತೆಂಗಿನ ಮರ ಕಂಡಿತು. ತನ್ನ ತುರಿಕೆಯ ಬೆನ್ನನ್ನು ಹಾಕಿ ಅದಕ್ಕೆ ತಿಕ್ಕಿಕೊಳ್ಳ ತೊಡಗಿತು. ಇತ್ತ ಈ ಗುಬ್ಬಿಗೆ, ಆನೆಗೆ ಏನಾದರು ಸಹಾಯ ಮಾಡೇ ತೀರಬೇಕೆಂಬ ಬಯಕೆ ಮತ್ತಷ್ಟು ಜೋರಾಯಿತು. ಆನೆಗೆ ಸಂಗಾತಿ ಹಾತಿ ಸಿಗದಿದ್ದರೆ ಏನಂತೆ, ತನ್ನ ಕೈಲಾದಷ್ಟು (?) ಸಹಾಯ ಮಾಡುವ ಉದ್ದೇಶದಿಂದ ಆನೆಯ ಹಿಂದಿಂದ ತನ್ನೆಲ್ಲ ಶಕ್ತಿ ಹಾಕಿ ಬಜಾಯಿಸ ತೊಡಗಿತು. ಇದೇ ಸಮಯಕ್ಕೆ ಸರಿಯಾಗಿ ಆನೆ ಬೆನ್ನು ಹಾಕಿ ಉಜ್ಜಿದ ರಭಸಕ್ಕೆ  ಒಂದು ಒಣ ತೆಂಗಿನ ಕಾಯಿ ಆನೆಯ ತಲೆಯಮೇಲೆ ಬಿತ್ತು. ತೆಂಗಿನ ಕಾಯಿ ಬಿದ್ದ ಏಟಿಗೆ ಆನೆ ಒಮ್ಮೆ ಸೊಂಡಿಲೆತ್ತಿ ಜೋರಾಗಿ ಘೀಳಿಟ್ಟಿತು. ಗುಬ್ಬಿ ಅದನ್ನ ಕೇಳಿ, "ಆಹ್, ಆನೆ ಸಂತೃಪ್ತ ವಾಗಿದೆ, ತನ್ನ ಶ್ರಮ ಸಾರ್ಥಕ ಅಂದುಕೊಂಡು ಅಲ್ಲಿಂದ ಹಾರಿ ಹೋಯಿತು.

ಹೇಗಿದೆ ಗುಬ್ಬಿ ಚಟದ ಕಥೆ?           



Thursday, September 20, 2012

Monday, August 20, 2012

ಹೀಗೊಂದು ಹೊಸ ಜೆಲ್!!

ವಿಷಯ ಹೀಗಿದೆ: ಅಲ್ಟ್ರಾಟೆಕ್ ಇಂಡಿಯಾ ಎಂಬ ಕಂಪನಿ, ಹೊಸದೊಂದು ಕ್ರಾಂತಿಕಾರಿ ಜೆಲ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೆಂಗಸರ ಯೋನಿಯನ್ನು ಮತ್ತೆ ಹದಿನೆಂಟರ ಪ್ರಾಯದಲ್ಲಿದ್ದಾಗ(!) ಮಾಡುವಂತಹ, "18 Again" ಎಂಬ ಈ ಜೆಲ್ ಭಾರತದ ಮಟ್ಟಿಗೆ ಹೊಸದು. ಬಾಲಿವುಡ್ ನಟಿ ಸೆಲಿನಾ ಜೇಟ್ಲಿ ಈ ಜೆಲ್ ನ ಬಿಡುಗಡೆ ಮಾಡಿದ್ದಾರೆ. ಯೂ ಟ್ಯೂಬ್ ನಲ್ಲಿರುವ ಈ ಜಾಹೀರಾತು ಸದ್ಯಕ್ಕೆ ಎಲ್ಲೆಡೆ ಹವಾ ಎಬ್ಬಿಸ್ತಾ ಇದೆ.ಅಲ್ಟ್ರಾಟೆಕ್ ಎಂ.ಡಿ ರಿಶಿ ಭಾಟಿಯಾ ಪ್ರಕಾರ, ಹೆಂಗಸರ "ಸಬಲೀಕರಣ" ಕ್ಕೆಈ ಜೆಲ್ ಸಹಕರಿಸಲಿದೆಯಂತೆ!!



ವಿದೇಶಗಳಲ್ಲಿ ಇಂತಹ ಜೆಲ್ ಗಳು ಈಗಾಗಲೇ ಪ್ರಚಲಿತದಲ್ಲಿದೆ. ಆದರೆ ನಮ್ಮಲ್ಲಿ ಇಂತಹ ಜೆಲ್ ಗಳನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವದನ್ನು ಕಾದು ನೋಡಬೇಕಿದೆ.

Wednesday, July 18, 2012

Tuesday, June 19, 2012

ಕಾಮ ಕಲೆಗೆ 28,000 ವರ್ಷಗಳ ಇತಿಹಾಸ!

 ಆಸ್ಟ್ರೇಲಿಯಾದ ಗುಹೆಯೊಂದರಲ್ಲಿ ಕಂಡ ಪೇಟಿಂಗು, ಕಾಮಕಲೆಗೆ 28 ಸಾವಿರ ವರ್ಷಗಳ ಇತಿಹಾಸ ಇದೆ ಅನ್ನೋದನ್ನ ಪ್ರೂವ್ ಮಾಡಿದೆ ಎಂದು ವರದಿಯೊಂದು ಹೇಳಿದೆ.ವಿವರಗಳು ಇಲ್ಲಿವೆ:)

http://www.indiatimes.com/art-and-culture/porn-may-be-28000-years-old-28426.html

Monday, June 11, 2012

ಅಕ್ಕಾ……ನಿಜವೇನೆ….

ಸಂಜೆ ಮುಡಿದ ಮಲ್ಲಿಗೆ
ಮೆಲ್ಲಗೆ ಬಾಡಿದೆ,
ಹಣೆಯ ಕುಂಕುಮ
ಯಾರೋ ತೀಡಿದ ಹಾಗಿದೆ…

ಅಧರಾಮೃತದ ಬಟ್ಟಲು ಕಾಲಿ,
ನೋಡು ನಡೆಯುವಾಗಲು ಯಾಕಿಷ್ಟು ಜೋಲಿ….
ಕೆನ್ನೆ ಬೆಂಕಿಯ ಕೆನ್ನಾಲಿಗೆ!!
ನಿನ್ನ ಗಲ್ಲವೇನು ಬೆಲ್ಲದುಂಡೆಯ?
ಯಾಕಿಷ್ಟು ಗಾಯಾ…!

ಕೊರಳಬಳ್ಳಿಯಲ್ಯಾರು ಜೋಕಾಲಿ ಆಡಿದರು,
ಎದೆಯ ಹೊಲದೊಳಗ್ಯಾರು ಓಕುಳಿ ಹಚ್ಚಿದರು…
ಎದೆಯ ಇಳಿಜಾರಿನಲ್ಲಿ
ಸುಖದ ಹೂವೆನೆ,
ಮತ್ತೆ ಹಿತವಾದ ನೋವೇನೆ….

ಮುತ್ತಿನ ಮೂಗುತಿ ಎಲ್ಲಿ ಮರೆತೆಯೆ?
ಇಂತ ಬಂಗಾರದ ಮೈಯ್ಯಿಗೂ ಬಟ್ಟೆಯ ಕೊರತೆಯೆ…!!
ಸೆರಗಲ್ಲೇನು ಮಕ್ಕಳನ್ನಾಡಿಸುತ್ತಿದ್ದೆಯ?
ಕಣ್ಣುಗಳಲ್ಲಿ ಬೆಳದಿಂಗಳನ್ನೇ ಸುರಿದುಕೊಂಡಿದ್ದೀಯ….

ಬೆಳ್ಳಿ ಗೆಜ್ಜೆಗಳನ್ನೇನು ಗಿರವಿ ಇಟ್ಟೆಯ,
ಹಸಿರು ಬಳೆಗಳನ್ನ ಬೆಂಕಿಯಲ್ಲಿ ಸುಟ್ಟೆಯ…
ರೆಪ್ಪೆಗಳೇಕೆ ಕಾಡಿಗೆ ಬೇಡುತ್ತಿವೆ?
ನಿನ್ನ ತುಂಟ ಹೊಕ್ಕಳೇಕೆ ಎನೋ ಹೇಳುತ್ತಿದೆ…
ಅಕ್ಕಾ.. ನಿನ್ನ ಗುಟ್ಟುರಟ್ಟು ಮಾಡಿಬಿಟ್ಟೆ
ಮಜವೇನೆ? ಇಲ್ಲ ನನಗೆ ಸಜೆಯೇನೆ?..
ಅಕ್ಕಾ……ನಿಜವೇನೆ….


(ಬರೆದಿದ್ದು ನ.ಸೋಮು) :)

Thursday, March 29, 2012

ತುಂಟ ಜಾಹೀರಾತುಗಳು

ಮೋಟುಗೋಡೆಯಲ್ಲಿ ನಾವು ಆಗಿಂದಾಗ ತುಂಟ  ಜಾಹೀರಾತುಗಳನ್ನು ಹಾಕುತ್ತ ಬಂದಿದ್ದೇವೆ. ಇಲ್ಲಿ ಇನ್ನೊಂದಿಷ್ಟು ಚಿತ್ರಗಳಿವೆ. ನೋಡಿ ಆನಂದಿಸಿ. ಕೆಲವನ್ನು ನೀವು ಮೊದಲೇ ನೋಡಿರಬಹುದು. ಇನ್ನು ಕೆಲವು ಹೊಸತಿರಬಹುದು. ಅರ್ಥವಾದರೆ ನಕ್ಕುಬಿಡಿ, ಅರ್ಥವಾಗದಿದ್ದರೆ, ಮತ್ತೊಮ್ಮೆ ನೋಡಿ:)