ಮೋಟುಗೋಡೆಯಲ್ಲಿ ಇಷ್ಟೆಲ್ಲ ಕಂಡಮ್ಯಾಲ, ಕನ್ನಡದಲ್ಲಿ ಶೃಂಗಾರ ಸಾಹಿತ್ಯ ಅಂಬೋದು ಬಹಳ ಸಮೃದ್ಧವಾಗಿಯೇ ಅದs ಅಂತ ನಿಮಗ ಈಗಾಗ್ಲೇ ಅನಿಸಿರ್ಲಿಕ್ಕೆ ಸಾಕು. 'ಅದರ' ಬಗ್ಗೆ ಯಾರ್ ಬರೆದಿಲ್ಲ ಹೇಳ್ರಿ? ಪೆನ್ನು ಹಿಡಿದ ಪ್ರತಿ ಸಾಹಿತಿಯೂ ಅದಕ್ಕ ತಂದೊಂದು ಗರಿ ಸೇರಿಸಿಯೇ ಸೇರಿಸಿಯಾನ. ಬಹುಶಃ ಈ ಎಲ್ಲಾನೂ ಒಟ್ಟುಮಾಡಿ ಒಯ್ದು ಮುಂದಿಟ್ರ, ವಾತ್ಸಾಯನನೇ ನಿಬ್ಬೆರಗಾದಾನು! ಮೋಟುಗೋಡೆ ಹುಡುಗರೇನು ಅಂತಹ ಪ್ರಯತ್ನಕ್ಕ ತೊಡಗ್ಯಾರಾs ಅಂತ ಕೇಳಬ್ಯಾಡ್ರಿ ಮತ್ತ!
ಶೃಂಗಾರ ಸಾಹಿತ್ಯದ ಭಂಡಾರಕ್ಕೆ ನಮ್ಮ ಕಂಬಾರರು ಸಲ್ಲಿಸಿದ ಒಂದು ಕವಿತಾ, ಇಕೋ ಇಲ್ಲಿ ಅದ. ಇದು ಈಗಷ್ಟೇ ಸುರು ಆಗಿರೋ ಚಳಿಗಾಲಕ್ಕೆ ಮೋಟುಗೋಡೆ ನೀಡ್ತಿರೋ ಹೊದಿಕೆ. ಕಾಮೋನ್ಮತ್ತ ಹೆಣ್ಣೊಬ್ಬಳು ಹೀಗೆಲ್ಲ ಹಾಡಿಯಾಳಾ ಅಂತ ನಿಮಗ ಅನುಮಾನ ಬಂದ್ರ ಮಾತ್ರ, ಉತ್ತರ ನಮ್ ಹತ್ರಾನೂ ಇಲ್ಲ ನೋಡ್ರಿ!
ನಾ ಕುಣೀಬೇಕ ಮೈ ಮಣೀಬೇಕ..
-ಚಂದ್ರಶೇಖರ ಕಂಬಾರ
ನಾ ಕುಣೀಬೇಕ ಮೈ ಮಣೀಬೇಕ ಕಾಲ್ದಣೀಬೇಕ ತಾಯಿ!
ನವಿಲಿನ್ಹಾಂಗ, ಎಳಿ ಮಣಿಕಿನ್ಹಾಂಗ, ತಿರತಿರಗಿಧಾಂಗ ಬಗರಿ!
ತೊಡೀ ತೆರೆದು ತಲಿ ಬಿಚ್ಚಿ ಕೈಯ ಎದಿ ಮಿದುವಿನಾಗ ಹುಗದು,
ಬಗಲ ಬೆವತು ಅಹ ನಾರಬೇಕ ಗಿಜಗಳಿಕಿ ಸಿಂದಿಹಣ್ಣು.
ಕಾದ ತಗಡ ಈ ತೊಗಲಿನಾಗ ಹೊತ್ತೇತಿ ಕಾಡಬೆಂಕಿ
ಸಂದಿಗೊಂದಿ ಬುಗುಬುಗು ಅಂದು ತಲಿಗೂದಲುರಿಯ ಜ್ವಾಲಿ
ಸುಡಸುಡs ಇಂಥ ಈ ಸಪ್ಪ ಬಾಳೆ ನಿಂತೇನ ದೀಪಕಂಬ!
ಬಣ್ಣಬಣ್ಣದ ನೆರಳ ತಿರಗತಾವ ಊರ ಕೇರಿ ತುಂಬ.
ಕಣ್ಣ ಕಾಡಿಗೀ ಕೆನ್ನಿಗಿಳಿಧಾಂಗ ಮೂಡತಾವ ನೆನಪ
ಕೌದಿಯೊಳಗ ಹುಡಿಕ್ಯಾಡತೇನ ಹೊಳ್ಯಾಡತೇನ ಮತ್ತ
ಜೋಡನಾಗರಾ ತಿಡೀ ಬೀಳತಾವ ಕನಸಿನಾಗ ಬಂದಾ;
ಏನಾಡತಾವ ತಳಕ್ಯಾಡತಾವ ರೆಂಟೀಯ ಸಾಲ ಹಿಡದಾ.
ಬೆವರ ಆಗಿ ಹರಿದಾಡತೇನು ಇಡಿ ಹೊಲಾ ತುಂಬಿಕೊಂಡಾ
ಹಸಿಗೆ ಹಸೀ ಬೆರೆತಾಗ ಅಯ್ ಶಿವನ ಏಳತಾವ ನವಿರಾ!
ಬೆಳಿ ಏಳತೈತಿ ತೆನಿಗೊಂದ ಹಕ್ಕಿ ನಗತಾವ ಒಂದಸವನಾ
ಕಣ್ಣ ತೆರೆದರೇನೈತಿ ಹಾಳು ಮುದಿರಾತ್ರಿ ಮಗ್ಗುಲಾಗ!
ಕಡೀಬೇಕ ಅಹ ಕಚ್ಚಬೇಕ ಹಿಂಗಪ್ಪಬೇಕೊ ನಾನಾ
ಗಿಣಿ ಹಣ್ಣಿಗೀ ಜೋತು ಬಿದ್ಧಾಂಗ ಎಳೀಬೇಕೊ ನಿನ್ನಾ
ತೆಕ್ಕಿಮುಕ್ಯಾಗ ನೆಗ್ಗಬೇಕೊ ಮೀಸಲದ ಮಿಂಡ ಬಾರೊ
ಮಿಂಡಿ ಬಿದರ ನಿಂತೇನೊ ತೆರೆದು ಬಿರುಗಾಳಿಯಾಗಿ ಸೇರೋ
ನಿನ್ನ ಬಸವಿ ಬಸವಳಿಯತೇನೊ ಬಾ ಮೀಸೆ ಹೊತ್ತ ಧೊರಿಯೆ
ಎಲ್ಲೆಲ್ಲಿ ಹಿಡದರಲ್ಲಲ್ಲಿ ಬೆಣ್ಣೆ ಕರಗುವೆನೊ ತೋಳಿನೊಳಗೆ
ಕೋಳಿ ಒಣಗೀಯ ಹೋಳಿನಂಥ ತುಟಿಗಲ್ಲ ಕಡಿಯೊ ಗೆಣಿಯಾ
ಘಾಸಿಯಾಗಿ ಕನಸಿನಲಿ 'ಮಾವಾ' ಅನ್ನುವೆನೋ ಮೀಸಲೊಡೆಯ!
ಹಾಳಬಾಂವ್ಯಾಗ ನೀರ ಸೆಲಿ ಝಮ್ಮಂತ ಒಡೆದು ಬರಲಿ
ಕೆಳಗ ಹಾಕಿ ನೀ ಕುಟ್ಟೊ ನನ್ನ!
ಏ ನಾದೊ ನನ್ನ
ಲೇ ಮಾಡೊ ಜಿಬ್ಬಿಜಿಬ್ಬಿ!
ಅಲ್ಲಿತನಕ, ತೊಡಿ ಬೆವರುತನಕ ನವಿರೇಳುತನಕ, ತೆನಿ ಮೂಡುತನಕ
ನಾ ಕುಣೀಬೇಕ ಮೈ ಮಣೀಬೇಕ ಕಾಲ್ ದಣೀಬೇಕ ತಾಯಿ
ಹುಚ್ಚಿಯ್ಹಾಂಗ, ಮೈ ತುಂಬಿಧಾಂಗ ಬೆದಿಮಣಿಕಿನ್ಹಾಂಗ ಆಗಿ!
|| ಇದನ್ನ ಎಂ.ಡಿ. ಪಲ್ಲವಿ ಹಾಡಿದ್ದೂ ಒಸಿ ಕೇಳ್ರಿ ||
6 comments:
"ಏನಂತೀರಿ"?
"ಕಂಬಾರ ಸಾಹೇಬರು ಅನ್ನಾಕ ಏನೂ ಉಳಸಿಲ್ಲ ಬಿಡರಿ!"
ಇದನ್ನ ಓದೊದಕಿಂತ ಎಂ.ಡಿ. ಪಲ್ಲವಿ ಹಾಡಿದ್ದೆ ತುಂಬಾ ಚೆನ್ನಾಗಿದೆ.!!
>>ತೆಕ್ಕಿಮುಕ್ಯಾಗ ನೆಗ್ಗಬೇಕೊ ಮೀಸಲದ ಮಿಂಡ ಬಾರೊ
ಮಿಂಡಿ ಬಿದರ ನಿಂತೇನೊ ತೆರೆದು ಬಿರುಗಾಳಿಯಾಗಿ ಸೇರೋ
ಹಾಳಬಾಂವ್ಯಾಗ ನೀರ ಸೆಲಿ ಝಮ್ಮಂತ ಒಡೆದು ಬರಲಿ
ಕೆಳಗ ಹಾಕಿ ನೀ ಕುಟ್ಟೊ ನನ್ನ!
ಏ ನಾದೊ ನನ್ನ
ಲೇ ಮಾಡೊ ಜಿಬ್ಬಿಜಿಬ್ಬಿ!<<
ಈ ಸಾಲುಗಳು ಹಾಡಲ್ಲಿ ಕೇಳಲೇ ಇಲ್ಲ.. ಅದು ಸಂಗೀತ ನಿರ್ದೇಶಕನ ಸೆಲ್ಫ್ ಸೆನ್ಸಾರ್ ಸಿಸ್ಟಮ್ ಇರಬಹುದಾ?:)
ಯಾರದು..?? ನಾ ಕುಣೀಬೇಕ ಅಂತ ಹೇಳ್ತಿರೋದು..?? ಜೊತೀಗ ನಾವೂನು ಕುಣೀತೀವಿ...!!
ಬ್ಯಾಡ ಅಂತೀರೇನು..? ಆಗ್ಲಿ ತಗೋರಿ... ಅವ್ಳು ಒಬ್ಬಾಕೀನ ಕುಣೀಲಿ.. ನಾವು ಕುಂತ ನೋಡ್ತೀವಿ..ಭಾಳ ಚಂದ ಅದ ನೋಡ್ರೀ ಕವಿತಾ.. ಮತ್ತ ಪಲ್ಲವಿ ಮೇಡಂ ಭಾಳ ಚಲೋ ಹಾಡ್ಯಾರ.. ಚಂದ ಪದ್ಯ ಓದ್ಸಿದ್ದಕ್ಕ ನಿಮಗ ಥ್ಯಾಂಕ್ಸ್ ರೀ.. ಗೋಡಿ ಮಗ್ಗಲ್ದಾಗ ಇಣ್ಕಿದ್ರ ಏನ್ ಏನ್ ದರ್ಶನ ಆಗ್ತೆತೋ ಯಪ್ಪಾ.. ಶಿವನೆ ಶಂಭುಲಿಂಗ..
ಈ ಛಳಿ ಅದರಾಗಇಂಥಾ ಕವಿತಾ ಸುಬಹಾನಲ್ಲ....!
ನೆನಪಾದ್ವು ಏನು ಮಾಡೋದು ಆ ಹುಡುಗಿಗಿರೋ ಕಸು ಈಗಿನವರಿಗೆಲ್ಲಿ
ಕೊನೀಯ.. ಎರಡಾ.. ಪ್ಯಾರ ನುಂಗ್ಯಾಕವ್ಳಲ್ಲಾ.. ಯವ್ವ... ಯಾಕಿಂಗ್ ಮಾಡಿದ್ಳಪ್ಪಾ... ಅರ್ಥ ಆಗ್ತಾ ಇಲ್ಲಮ್ಮೋ...
Post a Comment