Monday, November 16, 2009

ಮೋಟುಗೋಡೆಗೆ ಜೈ ಹೋ!

ಮೋಟುಗೋಡೆಯ ಹಿಟ್ಟುಗಳ ಸಂಖ್ಯೆ ಒಂದು ಲಕ್ಷ ದಾಟಿದ ಸಂಭ್ರಮದ ಸಂದರ್ಭದಲ್ಲಿ, ಈ ಹಿಟ್ಟುಗಳಿಗೆ ಕಾರಣರಾದ ಓದುಗರು, ಬ್ಲಾಗರುಗಳು, ಹಿತೈಶಿಗಳು ಈ-ಮೇಲ್ / ಫೋನ್ ಮೂಲಕ ಶುಭ ಹಾರೈಸಿದ್ದಾರೆ:


ಜಿ.ಎನ್. ಮೋಹನ್:
ಬ್ಲಾಗ್ ಲೋಕದಲ್ಲಿ ಹಲ್ಲಂಡೆ ಅಲೆಯುತ್ತಿದ್ದಾಗ ಸಿಕ್ಕಿದ್ದು 'ಮೋಟುಗೋಡೆ'
ನನಗೆ erotica ಮತ್ತು porno ಎರಡರ ನಡುವಿನ ವ್ಯತ್ಯಾಸ ಏನು ಎಂಬ ಪ್ರಶ್ನೆ ಬಹು ವರ್ಷಗಳಿದ ಕಾಡಿತ್ತು
ಮೋಟುಗೋಡೆ ಓದತೊಡಗಿದ ಮೇಲೆ ಒಂದಿಷ್ಟು ಅರ್ಥ ಹೊಳೆಯಿತು
--
ಮೋಟುಗೋಡೆ ನಾನು ಓದಿದ ಒಳ್ಳೆಯ ಬ್ಲಾಗ್ ಗಳಲ್ಲಿ ಒಂದು
'ಮಿನಿ ಸ್ಕರ್ಟ್ ಗೆ ಓ ಕೆ, ಆದರೆ ಡೀಪ್ ನೆಕ್ ಬೇಡ' ಎಂದು ನಟಿ ನೀತು ಹೇಳಿದಂತೆ ಬಿಚ್ಚುತ್ತಾ ಮುಚ್ಚುತ್ತಾ ಇರುವ ಬ್ಲಾಗ್ ಇದು
ನಿಮ್ಮ ಸಂಭ್ರಮದಲ್ಲಿ ನಾನೂ ಭಾಗಿ
ಅದಕ್ಕಾಗಿ ನಾನು ರಾಮೋಜಿ ಫಿಲಂ ಸಿಟಿ ಯಲ್ಲಿ ತೆಗೆದ ಒಂದು ಫೋಟೋ ನಿಮಗಾಗಿ-




ಶ್ರೀವತ್ಸ ಜೋಶಿ:
ಆರಂಭದಲ್ಲಿ ಮೋಟುಗೋಡೆ ಬ್ಲಾಗ್ ವಿಸಿಟಿಸಿಸುತ್ತಿದ್ದೆ, ಆಮೇಲೆ ಬ್ಲಾಗ್-ವಿಹಾರ‍ಕ್ಕೆ ಸಮಯವೇ ಇಲ್ಲವಾದಾಗ ಎಲ್ಲ ತಪ್ಪಿಹೋಯ್ತು. ಒಂದು ಲಕ್ಷ ಹಿಟ್ಸ್ ಆಗಿವೆ/ಆಗಲಿವೆ ಎಂದು ತಿಳಿದು ನಿಮ್ಮ ಬಳಗದ ನಿಲ್ಲದ ('ನಿಂತ' ಎಂದು ಹೇಳಿದರೆ ಮೋಟುಗೋಡೆಬಲ್ ಅಡ್ಜೆಕ್ಟಿವ್ ಆಗ್ತದಲ್ವಾ? ;) ) ಉತ್ಸಾಹ ಕಂಡು ಹೆಮ್ಮೆಯೆನಿಸಿತು.
ಗೋಡೆ 'ಮೋಟು' ಆಗಿದ್ದದ್ದೇ ಒಂದು ಲಕ್ಷ ಹೊಡೆತಗಳಿಗೆ ಕಾರಣ ಅಂತೀರಾ? ಅಥವಾ ಗೋಡೆ ಪೂರ್ಣಪ್ರಮಾಣದಲ್ಲಿದ್ದರೆ ಜನ ಇನ್ನೂ ಹೆಚ್ಚು ಬಲಪ್ರಯೋಗ ಮಾಡ್ತಿದ್ದರಾ?
ಇಷ್ಟು ಹೊಡೆತ ತಿಂದ "ಗೋಡೆಯ ಸ್ವಗತ" ಎಂದು ಒಂದು ಬರಹ ತಯಾರಿಸಿದರೆ ಹೇಗೆ? ಮೋಟುಗೋಡೆಯಾಚೆ ಇಣುಕಿದವರು ಏನನ್ನು ನೋಡಿದರು ಎಂದು ನೋಡಿದವರಿಗೆ ಗೊತ್ತಿರುತ್ತದೆ. ಆದರೆ ಆ ಇಣುಕುಗಾರ‍ರನ್ನು ನೋಡಿದ ಗೋಡೆಯ ಅನಿಸಿಕೆಗಳೇನಿರಬಹುದು? ಭಲೇ ಮಜಾ ಲಹರಿಸಬಹುದಲ್ಲ? (ಲಹರಿ + ಹರಿಸಬಹುದಲ್ಲ; "ಹರಿ" ಲೋಪ ಸಂಧಿ; ಏನು ಹರಿಯಿತು, ಏನು ಲೋಪ, ಯಾವ ಸಂದಿ ಎಂಬುದರ ಬಗ್ಗೆಯೆಲ್ಲ ತಲೆಕೆಡಿಸ್ಕೋಬೇಡಿ)

ಎಚ್. ಡುಂಡೀರಾಜ್: (ಫೋನಿನಲ್ಲಿ)
ಓಹೋಹೋಹೋ! ಇಣುಕ್ತಾ ಇರ್ತೀನ್ರೀ ನಾನೂ.. ನನ್ ಕವನಗಳನ್ನೂ ಹಾಕ್ಕೊಂಡ್‌ಬಿಟ್ಟಿದ್ರಿ ಯಾವಾಗ್ಲೋ! ಮಜಾ ಇದೆ, ಸುಪರ್ರ್!


ಪವನಜ ಯು.ಬಿ.:
(ಕನ್ನಡ ಬ್ಲಾಗರ್ಸ್ ಕೂಟದಲ್ಲಿ)
ಅಭಿನಂದನೆಗಳು.

ಬ್ಲಾಗಿಗೆ ಬಿದ್ದ ಹಿಟ್ಟುಗಳ ಸಂಖ್ಯೆ 1,00,000 ದಾಟಿದೆ


ಸದ್ಯದಲ್ಲೆ ೧,೦೦,೦೦೦ ದೋಸೆ ಅಥವಾ ಇಡ್ಲಿ ತಯಾರಾಗಲಿ ಎಂದು ಆಶಿಸುತ್ತೇನೆ :)

ಸುನಾಥ ಕಾಕಾ:
ಆರೋಗ್ಯಪೂರ್ಣ ಜೀವನೋಲ್ಲಾಸ, ಬೌದ್ಧಿಕ ವಿನೋದ ಹಾಗು ಸಾಹಿತ್ಯರಸ ಇವುಗಳ ತ್ರಿವೇಣಿ ಸಂಗಮವಾದ “ಮೋಟುಗೋಡೆಯಾಚೆ ..” ನನ್ನ ಅಚ್ಚುಮೆಚ್ಚಿನ ಬ್ಲಾಗ್ ಆಗಿದೆ. ಕಿಶೋರರಿಗೆ ಕೈಪಿಡಿ, ತರುಣರಿಗೆ ರಂಜನೆಯ ಸಾಧನ ಹಾಗು ಇಳಿವಯಸ್ಸಿನವರಿಗೆ ಜ್ಞಾಪಕಚಿತ್ರಶಾಲೆಯಾಗಿರುವ ಇಂತಹ ಬ್ಲಾಗ್ ಕನ್ನಡದಲ್ಲಿ ಮತ್ತೊಂದಿಲ್ಲ. ಇಣುಕಿ ನೋಡುವ ಪ್ರವೃತ್ತಿಯನ್ನು ನನ್ನಲ್ಲಿ ಸದಾ ಪ್ರೇರೇಪಿಸುತ್ತಿರುವ ಹಾಗು ಸದಭಿರುಚಿಯ ಹಿತಾನುಭವವನ್ನು ಸದಾ ನೀಡುತ್ತಲಿರುವ ಈ ‘ಮೋಟುಗೋಡೆ’ಗೆ ನಾನು ಕೃತಜ್ಞನಾಗಿದ್ದೇನೆ.

‘ಮೋಟುಗೋಡೆ’ ಚಿರಾಯುವಾಗಲಿ!

ವಿಕಾಸ್ ಹೆಗಡೆ:
ಅಬ್ಬಾ, ನೋಡ್ತಾ ನೋಡ್ತಾನೇ ಲಕ್ಷ ದಾಟಿಬಿಟ್ಟಿತಲ್ಲ ಅನ್ನಿಸಿತು. ಲಕ್ಷ ಸಲ ಕಳ್ಳರು ಗೋಡೆ ಹಣುಕಿ ಹೋಗಿದ್ದಾರೆ ಅಂದರೆ ಆ ಗೋಡೆಯಾಚೆಗಿನ ಸೆಳೆತ ಸಾಮಾನ್ಯ ಅಲ್ಲ. ಮೋಟುಗೋಡೆಯ ಪೋಸ್ಟ್ ಗಳನ್ನು ಓದುವುದೆಂದರೆ ಹಾಸ್ಟೆಲ್ಲಿನಲ್ಲಿ ಗೆಳೆಯರ ಜೊತೆ ರಾತ್ರಿ ಎರಡು ಗಂಟೆಯಲ್ಲಿ ಕೂತು ಹೊಡೆಯುವ ಪಟ್ಟಾಂಗದಂತೆ. ಬರಹಗಳನ್ನೋದುತ್ತಾ ಎಷ್ಟೋ ಸಲ ಒಬ್ಬೊಬ್ಬನೇ ನಕ್ಕಿದ್ದೇನೆ. ತೀರಾ ಮನೆಯ ಮಾತುಗಳಿಂದ ಹಿಡಿದು ದೂರದೇಶದ ಮ್ಯೂಸಿಯಂ ವರೆಗೆ ಮಾಹಿತಿಗಳನ್ನು ತೋರಿಸಿ ಗೋಡೆಯಾಚೆ ಇಣುಕೋಕೆ ನಮ್ಮನ್ನು ಸದಾ ಸಿದ್ಧರನ್ನಾಗಿಟ್ಟಿರುವ ಮೋಡುಗೋಡೆ ತಂಡದ ಎಲ್ಲಾ ಮಿತ್ರರಿಗೂ ಶುಭಾಶಯಗಳು ಮತ್ತು ಧನ್ಯವಾದಗಳು. ಸಭ್ಯ ಪೋಲಿತನ ಅಂದರೆ ಮೋಡೆಗೋಡೆಯದ್ದೇ ಹೌದು. ಮುಂದುವರೆಯಲಿ ಜೈತ್ರಯಾತ್ರೆ.

3 comments:

sughosh s. nigale said...

ಮೋಟುಗೋಡೆ ಮೋಟುಗೋಡೆ
ನಾನು ನಿನ್ನನ್ನು ವಿಸಿಟ್ ಮಾಡ್ತೀನಿ ಎವ್ರೀ ಡೇ
ಹಿಟ್ಸ್ ಒಂದು ಲಕ್ಷ ಆಗಿದ್ದಕ್ಕೆ
ಇನ್ನಾದರೂ ಹಾಕುತ್ತಿರು ಒಂದು ಪೋಸ್ಟ್ ಪರ್ ಡೇ...

Dileep Hegde said...

ಲಕ್ಷ ತಲುಪಿದ ಖುಷೀಲಿ ಕಳೆದು ಹೋದ್ರೋ ಹ್ಯಾಗೆ..? ಮುಂದಿನ ಅಪ್ಡೇಟ್ ಬೇಗ ಬರಲಿ... :P

Shashi jois said...

ನಿಮ್ಮ "ಮೊಟಕು ಗೋಡೆಯ" ಬ್ಲಾಗನ್ನು ಇಣುಕಿ ನೋಡಿದ್ದೇ ಇಂದು . ಲಕ್ಷ ದಾಟಿದ್ದಕ್ಕೆ ಅಭಿನಂದನೆಗಳು