Thursday, May 6, 2010

ಆಹ್ವಾನ

 -ಗೌತಮ್ ಹೆಗಡೆ
 
ನಯ ನಾಜೂಕು ಇರದ 
ಕಾಡುಮೃಗ ನೀನು
ಒಂದು ಸಣ್ಣನೆ ಅಲರಿನಲೆಗೆ 
ತತ್ತರಿಸಿ ಕಂಗೆಡುವ 
ತೀರ ನಾಜೂಕು ಲತೆ ನಾನು

ನಿನ್ನ ಬಿರುಸಿಗೆ 
ಕಾಮನೆಯ ಹೊನಲು 
ಧುಮ್ಮಿಕ್ಕುವ ಪರಿಗೆ 
ನಿಸ್ಸಹಾಯಕಳು ನಾನು
ನಿರುತ್ತರಿ ನಾನು

ಸಾಧ್ಯವಾದರೆ 
ಒಲುಮೆಯೆಂಬ 
ತುಂತುರು ತುಂತುರು ಮಳೆಯಾಗು
ಸುರಿಸುರಿದು ಗುಂಗಾಗು
ಕಣ್ಣಿನಲೇ ನಾಲ್ಕು ಮಾತಾಗು
ತೀರ  ಸನಿಹವೇ ಕುಳಿತು 
ಬಿಸಿಯುಸಿರನಲಿ ಹಿತವಾಗಿ ತಾಕು
ತನುವ ತಾಕುವ ಮುನ್ನ 
ಮನವ ತಾಕಿ ಹದಮಾಡು
ದಕ್ಕುವೆ ನಾನಾಗ ನಿನಗೆ 
ನಿಜವಾಗಿ
ಸಿಕ್ಕುವೆ ನಾನಾಗ ನಿನಗೆ 
ಇಡಿಯಾಗಿ
ಬಾ ಆಗ 
ಬಂದೆನ್ನ ಆಳಕಿಳಿದು ಧ್ಯಾನಸ್ಥನಾಗು 
ನೀನೇ ನಾನಾಗಿ 
ನಾನೇ ನೀನಾಗಿ...

7 comments:

sunaath said...

First,Gautam has come of age!

ಎರಡನೆಯದಾಗಿ,ನಾಜೂಕು ಕುವರಿಯ ಅಭಿವ್ಯಕ್ತಿಯಂತೆ ಕವನ ನಾಜೂಕಾಗಿದೆ. ಸುಂದರವಾದ ಕವನಕ್ಕಾಗಿ ಗೌತಮನಿಗೆ ಅಭಿನಂದನೆಗಳು.

ಮೂರನೆಯದಾಗಿ,ಕಲ್ಪನೆ ಮತ್ತು ವಾಸ್ತವತೆಯ ನಡುವಿನ ಭಿನ್ನತೆಯನ್ನು ಗೌತಮ ಅರಿತಿಲ್ಲ. ಒಂಟಿಯಾದ ಲತೆ ಸುಳಿಗಾಳಿಗೂ ಅಳುಕಬಹುದು. ಆದರೆ ಮಾಮರವನ್ನು ತಬ್ಬಿಕೊಂಡ ಮಲ್ಲಿಗೆ ಬಳ್ಳಿಯು ಸುಂಟರಗಾಳಿಗೂ ಸಹ ಸರಿದಾಡುವದಿಲ್ಲ!

ಗೌತಮ್ ಹೆಗಡೆ said...

ಥ್ಯಾಂಕ್ಸ್ ಸುನಾಥ್ ಸರ್.

ನಿಮ್ಮ ಅಭಿಪ್ರಾಯ ಸರಿ.ತಿಳಿದುಕೊಳ್ಳುವ ವಿಷಯ ಇನ್ನೂ ತುಂಬಾ ಇದೆ :);)

ಮತ್ತೆ ಸುಂದರ ಕವನ ಎಂದು ಅಭಿನಂದನೆ ತಿಳಿಸಿದ್ದೀರಿ.ಆ ಅಭಿನಂದನೆ ಸುಶ್ರುತಣ್ಣನಿಗೆ ಸಲ್ಲಬೇಕು.ಒಳ್ಳೆ ಕವನ ಬರಲಿಕ್ಕೆ ಕಾರಣ ಅವನೇ :)

ಸೀತಾರಾಮ. ಕೆ. / SITARAM.K said...

ಒ೦ಟಿ ಲತೆ ಸುಕೋಮಲ ನಯ ನಾಜೂಕು!
ಪಡೆಯದು ಆಸರೆಗೆ ಇನ್ನೊ೦ದು ಲತೆಯನಪ್ಪಿ!
ಬಾಹ್ಯ ಬಿರುಸಿನ ಮ೦ದಮಾರುತ, ಮುಸಲಧಾರೆ, ಕೋಲ್ಮಿ೦ಚು!!!
ಎದುರಿಸಿ ಪ್ರಕೃತಿಯ ಅನುಭವಿಸಲು ಬೇಕು -
ಹೆಮ್ಮರವ ಸುತ್ತಿ ತಬ್ಬಿ ನಿ೦ತ ಆಲಿ೦ಗನ!!
ಅನುಭವಿಸಬೇಕು ಬದುಕಿನ ತೀವ್ರತೆಯ ಧಾವ೦ತ!
ರಭಸದಾ ಹೊಯ್ದಾಟ
ತೀಕ್ಷ್ಣ ಮಿಲನದಾಟ!!
ಚೆ೦ದದ ಕವನ ಗೌತಮ!! ಸರಳ ಸು೦ದರ ಮಧುರ ಶಬ್ದ ಜೋಡಣೆ.
ಆದರೆ ಸುನಾಥರೂ ಹೇಳಿದ೦ತೆ ಇನ್ನೂ ಅನುಭವ ಬೇಕು!! :-)))

Unknown said...

kavana matterisutide!!!

Parisarapremi said...

what-a-fine kavana it is! superb!!

ಮನದಾಳದಿಂದ............ said...

good one
i like it!

ದಿನಕರ ಮೊಗೇರ said...

soopar.... sundara shabda jodane...... blog meladalli sigoNa....