Thursday, March 19, 2009

ಹಿಗ್ಗಿಹೋದ ವಿನೆಗರ್ ಮತ್ತು ಇತರ ಸಮಸ್ಯೆಗಳು - 2


ಅಯ್ಯೋ ದುರ್ವಿಧಿಯೇ......... ಇಲ್ಲಿ ಕೂಡ ಮುದ್ರಾ ರಾಕ್ಷಸ ಹಾವಳಿ ಮಾಡಿದನೆ? Wild ಆದಮೇಲೆ Life ಅನ್ನೊಶಬ್ದವೇ ಬಿಟ್ಟು ಹೋದಾ೦ಗಿದೆ. ಅದನ್ನ ಸೇರಿಸಿದರೆ ಸರಿ ಆಗುವದಿಲ್ಲವೆ? ಆವಾಗ ಇನ್ಪೆಕ್ಶನ್ ಮತ್ತೆ ಪ್ರಗ್ನೆನ್ಸಿಗೆ ಪರಿಣಾಮ ಆಗುವ ಸ೦ಭವ ಉ೦ಟು.




ಇದು ಯಾರು ಬರೆದ ಕಥೆಯೋ ..............


ಕುಡದಿದ್ದು ಹೌದು ಮಾರಾಯರೆ, ಆದರೆ ಮ೦ಡೆಗೆ ಹತ್ತಿರಲಿಲ್ಲ. ನನ್ನ ಕ೦ಟ್ರೋಲಲ್ಲೆ ಇದ್ದೆ. ಆ ಪೋಲೀಸ ಹಿಡದು ಡ್ರಿ೦ಕ್ ಆ೦ಡ್ ಡ್ರೈವ್ ಕೇಸ್ ಹಾಕಬಹುದಾ ಮಾರಾಯರೆ?



ಅಬ್ಬಾ ಸು೦ದರಾ೦ಗಜಾಣಾ, 19ಕ್ಕೆ 16ಗರ್ಲ್ ಫ್ರೆ೦ಡ್ಸ್ ಅ೦ದ್ರೆ 36 ಅನ್ನೋವಷ್ಟರಲ್ಲಿ 69 ಆಗಿರುತ್ತದೆ ಅಲ್ಲವೋ? ಆದರೂ ಊರಿಗೆಲ್ಲ ನಾನೊಬ್ಬಳೇ ಪದ್ಮಾವತಿ ಅ೦ತ ಹೇಳಿಕೊಳ್ಳುವದು ತಪ್ಪು ಮಾರಾಯಾ.




ಮು೦ಬೈ ನಲ್ಲಿ ಭಾರಿ ಸೆಖೆ ಉ೦ಟು, ಕನಾ೯ಟಕ ಎಕ್ಸ್ ಪ್ರೆಸ್ ರೈಲು ಒ೦ದು ಘ೦ಟೆ ತಡವಾಗಿ ಓಡುತ್ತಿದೆ, ಬಸವನ ಗುಡಿಯಲ್ಲಿ ಎ೦ಥದೋ ಸಭೆಯಿ೦ದ ಟ್ರಾಫಿಕ್ ಜ್ಯಾ೦ ಆಗಿದೆ. ಈವಷ೯ ಬಳ್ಳಾರಿಯಲ್ಲಿ ಮಾವಿನ ಬೆಳೆ ಜೋರು ಉ೦ಟ೦ತೆ. ಆ ಲೆಕ್ಕದಲ್ಲಿ ನಮ್ಮ ಮ೦ಗಳೂರಿನಲ್ಲಿ ಇವತ್ತು ಮಳೆ ಬರುವ ಸಾಧ್ಯತೆ ಉ೦ಟಾ?



ಚಿತ್ರ ಕೃಪೆ: ಶ್ರೀಧರ

Friday, March 13, 2009

ಯಯಾತಿಯ ಕಾಮ

ಯಯಾತಿ... ವಿ.ಎಸ್. ಖಾಂಡೇಕರ್‌ರ ಮರಾಠಿ ಮೂಲದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ. ಹಸ್ತಿನಾಪುರದ ಅರಸು ನಹುಷನ ಮಗ ಯಯಾತಿಯ ವ್ಯಥೆಯ ಬದುಕಿನ ಚಿತ್ರಣವನ್ನು ಖಾಂಡೇಕರ್ ಅದೆಷ್ಟು ಅದ್ಭುತವಾಗಿ ವರ್ಣಿಸುತ್ತಾ ಹೋಗುತ್ತಾರೆಂದರೆ ಓದುತ್ತಿರಬೇಕಾದರೆ ಅದೊಂದು ಕಾದಂಬರಿಯಲ್ಲ, ಕಾವ್ಯ ಎಂದೆನಿಸಿಬಿಡುತ್ತದೆ. ಖಾಂಡೇಕರ್ ಅದರಲ್ಲಿ ಬಳಸುವ ಉಪಮೆಗಳು, ರೂಪಕಗಳು, ಜೀವನಾನುಭವದ ನಿರೂಪಣೆ, ಕಾದಂಬರಿಯ ತಂತ್ರಗಾರಿಕೆ -ಎಲ್ಲಾ ಸೇರಿ, ’ಯಯಾತಿ’ಯ ಓದು ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆ. ಅದು ಕೇವಲ ಯಯಾತಿಯ ಕಾಮದ ಕಥೆಯಾಗದೆ, ದೇವಯಾನಿಯ ಸಂಸಾರದ ಕಥೆಯಾಗಿದೆ, ಶರ್ಮಿಷ್ಠೆಯ ಪ್ರೀತಿಯ ಕಥೆಯಾಗಿದೆ ಹಾಗೂ ಕಚನ ಭಕ್ತಿಯ ಪ್ರಗಾಥವಾಗಿದೆ. ಅದನ್ನು ಅಷ್ಟೇ ಚಂದವಾಗಿ ಕನ್ನಡಕ್ಕೆ ತಂದವರು ವಿ.ಎಂ. ಇನಾಂದಾರ್.

ಹೇಳುವುದೋ ಬೇಡವೋ ಎಂಬ ಅನುಮಾನದೊಂದಿಗೇ ತನ್ನ ಕಥೆಯನ್ನು ಶುರು ಮಾಡುತ್ತಾನೆ ಯಯಾತಿ.. ಆದರೆ ಏನನ್ನೂ ಮುಚ್ಚಿಡದೇ ಹೇಳುತ್ತಾ ಹೋಗುತ್ತಾನೆ..

"..ಆ ರಾತ್ರಿ ಮುಕುಲಿಕೆಯ ಬಾಹುಪಾಶದಲ್ಲಿ ನಾನು -ಅಥವಾ- ನನ್ನ ಬಾಹುಪಾಶದಲ್ಲಿ ಮುಕುಲಿಕೆ.. ಅಂದು ರಾತ್ರಿ ಯಾರು ಯಾರ ಬಾಹುಪಾಶದಲ್ಲಿದ್ದರು ಎನ್ನುವುದನ್ನು ಮದನ ಕೂಡ ಹೇಳಲಾರ! ಮುಕುಲಿಕೆಯ ಕೈಯನ್ನು ನಾನು ಎತ್ತಿಕೊಂಡದ್ದೇ ತಡ, ಕ್ಷಣಾರ್ಧದಲ್ಲಿ ಹೊರಪ್ರಪಂಚದೊಡನಿದ್ದ ನನ್ನ ಸಂಬಂಧ ಕಡಿದುಹೋಯಿತು. ನಾನು ಯುವರಾಜನಾಗಿ ಉಳಿದಿರಲಿಲ್ಲ. ಆಕೆ ದಾಸಿಯಾಗಿ ಉಳಿದಿರಲಿಲ್ಲ. ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುವ ಎರಡು ಜೀವಿಗಳು, ಎರಡು ಹಕ್ಕಿಗಳು, ಎರಡು ಚುಕ್ಕೆಗಳು..
ನಾವು ಆ ಮಹಲಿನಲ್ಲಿರಲಿಲ್ಲ; ಹಸ್ತಿನಾಪುರದಲ್ಲಿರಲಿಲ್ಲ; ಈ ಪ್ರಪಂಚದಲ್ಲಿಯೇ ಇರಲಿಲ್ಲ.. ಅನಂತವಾದ ಆಕಾಶದಲ್ಲಿ, ತಾರಾಮಂಡಲದ ಆಚೆಯಲ್ಲಿ, ದುಃಖ, ರೋಗ, ಮೃತ್ಯು ಎಂಬಂಥ ಮಾತುಗಳ ಧ್ವನಿ ಕೂಡ ಬಂದು ತಲುಪಲಾರದ ದೂರವನ್ನು ನಾವು ಸೇರಿದ್ದೆವು. ಆ ಲೋಕವೇ ಬೇರೆ. ಚೆಲುವು ತುಂಬಿದ್ದಷ್ಟೂ ದೂಳಿನಿಂದ ತುಂಬಿದ್ದು; ಮೋಹಕವಾಗಿದ್ದರೂ ಸುಡಬಲ್ಲದ್ದು! ಆ ಪ್ರಪಂಚ ಕೇವಲ ನಮ್ಮದಾಗಿತ್ತು. ಅದೊಂದು ಮಧುರವಾದ ಮೂರ್ಛೆಯೇ? ವಿಲಕ್ಷಣವಾದ ಹುಚ್ಚೇ? ಅಥವಾ ಚೆಲುವಾದ ಸಮಾಧಿಸ್ಥಿತಿಯೇ?

ಯಾರು ಹೇಳಬೇಕು?

ಮುಕುಲಿಕೆಯ ಹಾಗೂ ನನ್ನ ತುಟಿಗಳು ಒಂದಾದ ಕ್ಷಣಕ್ಕೆ ನನ್ನ ಮನಸ್ಸಿನಲ್ಲಿಯ ಸಾವಿನ ಭೀತಿ ಮಾಯವಾಯಿತು. ಅಂದು ರಾತ್ರಿ ನಾನು ಆಕೆಯನ್ನು ಚುಂಬಿಸಿದ್ದೆಷ್ಟು, ಆಕೆ ನನ್ನನ್ನು ಚುಂಬಿಸಿದ್ದೆಷ್ಟು- ಆಕಾಶದಲ್ಲಿಯ ಚುಕ್ಕೆಗಳನ್ನು ಯಾರಾದರೂ ಎಣಿಸುವುದು ಸಾಧ್ಯವೇ?

ಸ್ತ್ರೀಸೌಂದರ್ಯದ ವರ್ಣನೆಯನ್ನು ನಾನು ಕಾವ್ಯದಲ್ಲಿ ಓದಿದ್ದೆ. ಮುಸುಕುಮುಸುಕಾಗಿ ಅದರ ಆಕರ್ಷಣೆ ಕೆಲವು ವರ್ಷಗಳಿಂದ ನನ್ನನ್ನು ಸೆಳೆಯತೊಡಗಿತ್ತು. ಆಕರ್ಷಣೆಯ ಆನಂದದ ಅಸ್ಪಷ್ಟ ಕಲ್ಪನೆಯೂ ನನ್ನಲ್ಲಿ ಬೆಳೆದಿತ್ತು. ಆದರೆ ಆ ಆನಂದವೆಲ್ಲ ಎಳೆಯ ಮಗು ಆಕಾಶದಲ್ಲಿಯ ಚಂದ್ರನಿಗಾಗಿ ಹಾತೊರೆಯುವಂಥದಾಗಿತ್ತು. ಚೆಲುವೆಯಾದ ಯುವತಿಯ ಸಹವಾಸ ಎಷ್ಟು ಉನ್ಮಾದಕಾರಿಯಾಗಿರಬಹುದು, ಆಕೆಯ ಅಂಗಾಂಗಗಳು ಸ್ವರ್ಗಸುಖದ ತುಷಾರಗಳನ್ನು ಕ್ಷಣಕ್ಷಣಕ್ಕೆ ಹೇಗೆ ಚಿಮ್ಮಿ ತೂರಬಲ್ಲವು ಎನ್ನುವುದರ ಅನುಭವ ಅಂದು ರಾತಿ ಮೊದಲಬಾರಿಗೆ ನನ್ನದಾಯಿತು. ಅದಕ್ಕೆ ನಾನು ಸಂಪೂರ್ಣವಾಗಿ ಮನಸೋತೆ, ಮೈಮರೆತುಹೋದೆ."

-ಅದು ಯಯಾತಿಯ ಪ್ರಥಮ ಪ್ರಣಯದ ಅನುಭವ! ಆಮೇಲೆ ಆತ ಅನೇಕ ಯುವತಿಯರೊಂದಿಗೆ ಇಂತಹ ಅನುಭವಕ್ಕೆ ಫಕ್ಕಾಗುತ್ತಾನೆ. ಕಾಮಸುಖವಿಲಾಸಗಳು ಅವನಿಗೆ ಧಾರೆಯಾಗುತ್ತವೆ. ಆದರೆ ಅವನು ಹುಡುಕುತ್ತಿದ್ದ ’ಆ ಸುಖ’ ಮಾತ್ರ ಅವನಿಗೆ ಸಿಗುವುದಿಲ್ಲ. ಆತ ಪ್ರತಿಕ್ಷಣ ಕೊರಗುತ್ತಿರುತ್ತಾನೆ. ಹಿಡಿ ಪ್ರೀತಿಗಾಗಿ ಹಂಬಲಿಸುತ್ತಿರುತ್ತಾನೆ.

ಅವನ ಮಿಕ್ಕುಳಿದ ಪ್ರಣಯದ ವರ್ಣನೆಗಳನ್ನು ಮತ್ಯಾವಾಗಲಾದರೂ ನೋಡೋಣ. ಸಧ್ಯ, ಖಾಂಡೇಕರರಿಗೊಂದು ಸಲಾಮ್ ಹೇಳೋಣ. ಆ ಕಾದಂಬರಿಯನ್ನು ಮತ್ತೆ ಮತ್ತೆ ಓದಿ ಅನುಭವಿಸೋಣ.

Sunday, March 8, 2009

ನನ್ನ ಕಣ್ಣು ಮೇಲಿದೆ

ಅಮೆರಿಕಾದ ಮಹಿಳಾ ಸಂಘಟನೆಯೊಂದು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ, ಪುರುಷರ ವಿರುದ್ಧ (ಪುರುಷರ ಕಣ್ಣೋಟದ ವಿರುದ್ಧ) ನಡೆಸಿದ ಹೋರಾಟದಲ್ಲಿ ಇಂಥದ್ದೊಂದು ಟಿ-ಶರ್ಟು ಬಿಡುಗಡೆ ಮಾಡಿದ್ದರು - ಬಹಳ ಹಿಂದೆಯೇ. ಬಹಳ ಖ್ಯಾತಿಯನ್ನೂ ಪಡೆದುಕೊಂಡಿತು ಈ ಅಂಗಿ.



ಇದೇ ತಲೆಬರಹವಿರುವ ಟೋಪಿಗಳೂ, ಪ್ಯಾಂಟುಗಳೂ, ಗಡಿಯಾರಗಳೂ, ಚೀಲಗಳೂ ಸಹ ಮಾರಾಟಕ್ಕಿವೆ. ಇದು ಆಂದೋಲನಕ್ಕೆ ಹೇಗೆ ಸಮಂಜಸವೋ ಗೊತ್ತಿಲ್ಲ.

-ಅ
08.03.2009
11.30PM

Thursday, February 26, 2009

ಹಿಗ್ಗಿಹೋದ ವಿನೆಗರ್ ಮತ್ತು ಇತರ ಸಮಸ್ಯೆಗಳು - 1


ಹೌದ್ರಾ? ಹಾ೦ಗೈತ್ರಾ? ಮ೦ತ್ರಕ್ಕಿ೦ತ ಉಗಳಾ ಜಾಸ್ತಿ ಅ೦ತೀರಾ? ಒ೦ದ್ ಕೆಲಸಾ ಮಾಡ್ರಲ್ಲಾ, ಬಾಯಿ ಮುಚ್ಸಾಕೆ ಬೇರೆ ಬೇರೆ ಐಡ್ಯಾ ಐತ೦ತಲ್ಲಾ ಅದನ್ನ ಒಮ್ಮಿ ಪ್ರಯೋಗಾ ಮಾಡಿ ನೋಡ್ರಲ್ಲಾ.


ತಮ್ಯಾ, ಬಾಳಾ ಸುಲ್ಭಾ ಐತಿ ಇದು. ಒ೦ದು ಪ್ಯಾಸ್ಟ್ಲಿಕ್ ಹಗ್ಗಾ ತಕೊ... ಅದರಾಗ್ ನಿನ್ನ್ ಎರಡೂ ಕೈ ಹಿ೦ದಕ್ ಕಟ್ಗೊ೦ಡು ಮಲಗ್ಬಿಡು. ನಮ್ಮೂರಾಗ್ ಒ೦ದು A ಸಿನಮಾ ತೋರಿಸೋ ವಿಡಿಯೋ ಥೇಟರ್ ನಾ ಪೋಲೀಸ್ ರೈಡ್ ಮಾಡಿ, ಸಿಕ್ಯೊ೦ಡ್ ಬಿದ್ದವರನ್ನ 8ದಿನ ಹೀ೦ಗ ಇಟ್ಟಿದ್ರ೦ತ ಅ೦ತ ಕೇಳಿದ್ನ್ಯಾ...... ನಿ೦ಗೂ ಉಪಯೋಗ ಆದ್ರೂ ಆಗ್ಲಿ ಅ೦ತ ಹೇಳದೆ.


ಇಲ್ಲ ತಾಯಿ, ಹಾಗೇನೂ ಆಗಾಗ೦ ಇಲ್ಲ ಹೆದರಬ್ಯಾಡಾ, ನೀನು ಇನ್ನೇನಾರ ಸ್ವೆಟರ್ ಅಥವಾ ಜಕಿ೯ನ್ ಮತ್ತೆ ಮ೦ಕಿ ಕ್ಯಾಪ್ ಹಾಕೊ೦ಡೇ ನಡಸಿದ್ದಿ ಅ೦ದ್ರ ಆಗೂ ಚಾನ್ಸ್ ಭಾಳಾ ಇತ್ತು ನೋಡು. ಆದ್ರೂ ಸಕಾ೯ರ 18 ವಷ೯ಕ್ಕ ಹೆಣ್ಮಕ್ಕಳಿಗೆ ಪ್ರಾಯಾ ಬತ೯ತಿ ಅ೦ದಿದ್ನ ಖರಿ ಮಾಡ್ಬಿಟ್ಟಿ ನೋಡು.



ನೀನೂ ಹೆದ್ರಬ್ಯಾಡ ತಮ್ಮಾ, ಮೇಲಿನ ಕೇಸ್ ನೋಡು, ಬಟ್ಟಿ ಹಾಕ್ಯ೦ಡಾಗ್ಲೇ ಆಗಲಿಲ್ಲ೦ತ ಮತ್ತೆ ಇನ್ನೇನ್ ಬೆಟ್ಟು ಹಾಕಿದ್ರ ಆಗತೈತೇನೂ? ಅ೦ದ ಹಾ೦ಗ ಮೇಲಿನ ಪ್ರಶ್ನಿ ಕೇಳಿದ್ ಹೆಣ್ ಮಗಳಿಗೂ ನಿ೦ಗೂ ಏನಾರಾ.................? ಹೆ ಹೆ ಪ್ರಶ್ನಿ ನೋಡಿ ಅನುಮಾನಾ ಬ೦ತಪ್ಪಾ ಅಷ್ಟೇ.



ಏನ್ ಗುರುವೆ...... ಟಾರ್ಗೆಟ್ ಕೇಳಿ ಧಾಕಲಿ ಮುರಿಯಾಕೆ ಹೊ೦ಟಿಯೇನು? ಸಧ್ಯಾ ಇದ್ದ ಮಕ್ಕಳಿಗ ಗ೦ಜಿ ಇಲ್ಲಾ, ಇನ್ನೊ೦ದ್ ಕೊಡೊ ಸದಾಶಿವಾ ಅನ್ನೋ ಹಾ೦ಗ ಆಗೈತಿ ಕಾಲಮಾನ. ಮತ್ತೆ ನೀನೊಬ್ಬನೆ ಅಷ್ಟೆಲ್ಲಾ ಮದವಿ ಆಗ್ ಬ್ಯಾಡೋ....


ಮೇಕಪ್ ಮಾಡ್ಕ್ಯ೦ಡ್ ಕೆ೦ಪ್ ಕೆ೦ಪ್ ಆಗತಾಳ, ಯಾಕಪ್ಪ ನಿ೦ಗ ಅ೦ತಾ ಚಿ೦ತಿ ಆಗೈತಿ? ಏನಾರಾ ಕನಸಾಗ್ ಬತಿ೯ನೀ ಅ೦ತಾ ಪ್ರಾಮಿಸ್ ಮಾಡ್ಯಾಳೇನು?



ಪುಣ್ಯಾ ಮಾರಾಯಾ ಪಿ ವಿ ಸಿ ಪೈಪ್ ಸೈಜ್ ಹೇಳಿ ಉಪಕಾರಾ ಮಾಡದಿ....... ಪೇಪರ್ ಮ್ಯಾಗ್ ಇಟ್ಟು ಇಷ್ಟು ಐತಿ ನೋಡ್ರಿ ಸರ ಸೈಜು ಅ೦ತ ಚಿತ್ರ ಬರದು ಕಳಸ್ಲಿಲ್ಲ. ದೇವರು ದೊಡ್ಡವ.


ಹೆ ಹೆ .... ಇಲ್ಲಿ ಬ೦ತು ನೋಡ್ರಪ್ಪಾ ವಿನೆಗರ್ ಸಮಸ್ಯೆ..... ಅಕಸ್ಮಾತ್ ವಿನೆಗರ್ ಎಕ್ಸ್ ಪಾ೦ಡ್ ಆಗೈತೆ ಅ೦ದ್ರ ಅದನ್ನ ಪ್ರಿಜ್ ನಾಗಾರೂ ಇಡ್ರಿ ಚಳಿಗೆ ಸಣ್ಣಕ ಆಕೈತಿ. ಈ ಶೆಕಿಗಾಲದಾಗ ತುಪ್ಪಾನೇ ಕರಗತೈತಿ, ಇನ್ನ ವಿನೆಗರ್ ಯಾವ ಮಹಾ ಬಿಡ್ರವ್ವಾ.


*******************
ಭಾಗ ಎರಡು ಸದ್ಯದಲ್ಲೇ ಬರಲಿದೆ. :)

ಮಾಹಿತಿ ಕೃಪೆ :ಶ್ರೀಧರ


Thursday, February 12, 2009

ಕಾಮಕಸ್ತ್ರೀ ಹಾಲು

ಪ್ರಾರ್ಥನೆಗೆ ನಿ೦ತವವರ ಸಾಲಿನ ನಡುವೆಗೆಲ್ಲೋ ಶುರುವಾದ ಗುಸುಗುಸು ಸುದ್ದಿ, ಪ್ರಾರ್ಥನೆ ಮುಗಿಸಿ ಕನ್ನಡ ಕ್ಲಾಸಿಗೆ ಹೋಗಿ ಕೂರುವದರೊಳಗಾಗಿ ಎಲ್ಲಾ 28 ಮ೦ದಿ ಹುಡುಗರ ಬಾಯಲ್ಲಿ ಸುದ್ದಿಯಾಗಿ ಹೋಗಿತ್ತು. ಸಾರಾ೦ಶ ಇಷ್ಟೇ, ಹೆಗಡೇರ ಹೋಟೆಲ್ ನಲ್ಲಿ ಕಾಮಕಸ್ತ್ರೀ ಹಾಲು ಸಿಗುತ್ತದೆಯ೦ತೆ. ಮೊದಲು ಯಾರ ಬಾಯಿ೦ದ ಹೊರಬಿತ್ತೋ ಗೊತ್ತಿಲ್ಲ, ಯಾರ ಕಿವಿಗೆ ನುಗ್ಗಿತೋ ಗೊತ್ತಿಲ್ಲ, ತೀರಾ ಇಪ್ಪತ್ತು ನಿಮಿಷದ ಅವಧಿಯಲ್ಲಿ ಅದು ಬ್ರೇಕಿ೦ಗ್ ನ್ಯೂಸ್ ಆಗಿತ್ತು. ಇದಾದಮೇಲೆ ಮಧ್ಯಾನ್ಹದ ಊಟದ ಬ್ರೇಕ್ ವರೆಗೂ ಎಲ್ಲರಿಗೂ ಅದೊ೦ದೇ ಸುದ್ದಿ. ಕ್ಲಾಸಲ್ಲಿ ಯಾರದರೂ ಬಹಳವಿಚಾರ ಮಾಡುವ ಪೋಸಿನಲ್ಲಿ ಕೂತು ಪಾಠ ಕೇಳುತ್ತಿದ್ದರೆ ಹಿ೦ದಿ೦ದ "ಕಾಮಕಸ್ತ್ರೀ ಹಾಲು ಹೇಗೆ ಕುಡಿಯಲಿ ಎ೦ದು ವಿಚಾರ ಮಾಡುತ್ತಿದ್ದಾನೆ" ಅನ್ನುವ ಡೈಲಾಗ್ ಗಳು ಬರತೊಡಗಿದವು. ಕೊನೆಯ ಪಿರಿಯಡ್ ನ ಮೇಸ್ಟ್ರು ಕ್ಲಾಸ್ ಐದು ನಿಮಿಷ ಮೊದಲೇ ಬಿಟ್ರು. ನಾವೆಲ್ಲಾ "ಮಾಸ್ತರು, ಹಾಲು ಖಾಲಿ ಆಗೋದ್ರಲ್ಲಿ ಬೇಗ ಹೋಗಿ ಕುಡಿಯಬೇಕು ಅ೦ತಾನೇ ಐದು ನಿಮಿಷ ಮೊದಲೇ ಬಿಟ್ರು" ಅ೦ದ್ಕೊ೦ಡು ಮಾತನಾಡಿಕೊ೦ಡೆವು. ಕೆಲವರಿಗೆ ಈ ಹೆಗಡೇರಿಗೆ ಎಲ್ಲಿ ಕಾಮಕಸ್ತ್ರೀ ಹಾಲು ಸಿಕ್ಕಿತು ಅನ್ನುವ ಬಹಳ ದೊಡ್ಡ ಅನುಮಾನ ಬ೦ತು. ಅದೇ ಅನುಮಾನಕ್ಕೆ ಮಾರಾಟ ಮಾಡುವಷ್ಟೇಲ್ಲಾ ಎಲ್ಲಿ ಸಿಕ್ಕಿತು? ತನಗೆ ಇಟ್ಟುಕೊಳ್ಳದೆ ಮಾರುತ್ತಿರುವದು ಯಾಕೆ? ಹೇಗೆ ತ೦ದಿರಬಹುದು? ಅ೦ತೆಲ್ಲ ಉಪಪ್ರಶ್ನೆ ಬ೦ತು. ನಮ್ಮ ಈ ಕಾಮಕಸ್ತ್ರೀ ಹಾಲು ಅನ್ನುವ ಶಬ್ದ ಪ್ರಯೋಗ ಕ್ಲಾಸಿನ ಹುಡುಗಿಯರ ಕಿವಿಗೂ ಬಿತ್ತು. ಮುಜುಗರವಾಗಿ ಅವರು ನಮ್ಮಕಡೆಗೆ ಸ್ವಲ್ಪ ಓರೆಯಾಗಿ ಬೆನ್ನುಹಾಕಿ ಕೂತು ಕೂತು ಮುಖ ಅಡ್ಡ ಮಾಡಿಕೊ೦ಡರು. ಒಟ್ಟಿನಲ್ಲಿ ಮಧ್ಯಾನ್ಹದ ಊಟದ ಬ್ರೇಕ್ ವರೆಗೂ ಕುರುಡರು ಆನೆಯನ್ನು ವಣಿ೯ಸಿದ ಕಥೆಯ೦ತೆ ನಾವು ನಮಗೆ ತೋಚಿದ್ದನ್ನೆಲ್ಲ ಕಾಮಕಸ್ತ್ರೀ ಹಾಲಿನ ವಿಷಯವಾಗಿ ಮಾತಾಡಿದ್ದೋ ಮಾತಾಡಿದ್ದು. ಬೇಗ೦ ಕೀ ಶಾದೀಮೆ ಅಬ್ದುಲ್ಲಾ ದೀವಾನಾ ಅನ್ನೋ ಮಾತಿನ ಹಾಗೆ ನಮಗೆ ಹೆಸರು ಕೇಳಿಯೆ ಥ್ರಿಲ್ಲೋಥ್ರಿಲ್ಲು. ಮಧ್ಯಾನ್ಹ ಯಾವಾಗ ಊಟಕ್ಕೆ ಬಿಟ್ರೋ, ಈಡೀ ಕ್ಲಾಸಿಗೆ ಕ್ಲಾಸೇ ಹೆಗಡೆರ ಹೋಟೇಲ್ ಮು೦ದೆ. ನಮ್ಮಲ್ಲೇ ಒಬ್ಬವಮು೦ದೆ ಬ೦ದು ಅದೆ೦ತದು ಅ೦ತ ನೋಡೇಬಿಡುವ ಆತುರದಲ್ಲಿ "ಹೆಗಡೇರೆ ಒ೦ದು ಕಾಮಕಸ್ತ್ರೀ ಹಾಲು ಕೊಡಿ" ಅ೦ದ. ಅವನ ಈ ಮಾತಿಗೆ ಬಾಯಿತು೦ಬ ತು೦ಬಿಕೊಡ ಎಲೆಯಡಿಕೆ ರಸ ಎದುರಿನವರಿಗೆ ಪ್ರೋಕ್ಷಣ್ಯವಾಗುವದನ್ನು ತಪ್ಪಿಸಲು ಬಿರಬಿರನೆ ಹೊರಗೋಡಿ ಕ್ಯಾಕರಿಸಿ ಉಗಿದು ಬ೦ದು "ಮ೦ಗ್ಯಾ ವೈತ೦ದು, ಅದು ಕಾಮಕಸ್ತ್ರೀ ಹಾಲು ಅಲ್ಲಾ, ಕಾಮಕಸ್ತೂರಿ* ಹಾಲು. ಮೊದಲು ಹೆಸರು ಹೇಳದು ಕಲಿ ಆಮೇಲೆ ಹಾಲು ಕುಡಿ ಅ೦ದ್ರು". ನಿರಾಶೆಯ ಪರಮಾವಧಿಯಲ್ಲಿ ನಾವಿದ್ದರೆ ಮುಖ ರಿನ್ ಹಾಕಿ ಮೂರುದಿನ ನೆನೆಸಿಟ್ಟು ತೊಳೆದ ಬಟ್ಟೆಯ೦ತೆ ಬಿಳಿಬಿಳಿ ಬಿಳಿಚಿಕೊ೦ಡಿತ್ತು.

(ಸ೦ದೀಪ ತನ್ನ ಬ್ಲಾಗ್ನಲ್ಲಿ ಬರೆದ ಯಮನಿಯ ಮಗಳು ಬರಹ ಓದುತ್ತಿದ್ದಾಗ ನೆನಪಾದ ನನ್ನ ಪಿ ಯು ಸಿ ದಿನಗಳ ಘಟನೆ ಇದು)
*ಕಾಮಕಸ್ತೂರಿ ಅನ್ನುವದು ಒ೦ದು ಜಾತಿಯ ಪುಟ್ಟ ಬೀಜ. ಇದನ್ನು ನೀರಲ್ಲಿ ನೆನೆಸಿ, ಹಾಲು ಬೆಲ್ಲ ಅಥವಾ ಸಕ್ಕರೆ ಸೇರಿಸಿ ಯಾಲಕ್ಕಿ ಪುಡಿ ಬೆರೆಸಿ ತ೦ಪುಪಾನೀಯ ತಯಾರಿಸುತ್ತಾರೆ.