ಜಗತ್ತಿನ ಜನಕ್ಕೆ ಹೆಂಗೆಗೆಲ್ಲ ಆಗಿ ಬಿಡತ್ತಪಾ ಅಂದ್ರೆ, ಅಂದ್ರಿಂದಾಗಿ ಮತ್ತೆ ಇನ್ ಹೆಂಗೆಗೋ ಆಗೋಗತ್ತೆ!.
ಮೊನ್ ಮೊನ್ನೆ, ಇರಾನಿನ ಧಾರ್ಮಿಕ ಮುಖಂಡನೊಬ್ಬನಿಗೆ, ಬೆಳಗ್ಗೆ ಏಳುತ್ತಲೇ ಹೊಸದೊಂದು ಜ್ಞಾನೋದಯವಾಗಿ ಬಿಟ್ಟಿತು. ಜಗತ್ತಿನಲ್ಲಾಗುವ ಭೂಕಂಪಗಳಿಗೆ, ಎದೆಗಾರಿಕೆ ತೋರಿಸಿಕೊಂಡು ಓಡಾಡುವ ಹೆಂಗಳೆಯರೇ ಕಾರಣರಂತೆ ಎಂಬೊಂದು ಆಘಾತಕಾರೀ ಹೇಳಿಕೆ ಕೊಟ್ಟುಬಿಟ್ಟ. ಇಂತಹ "ಅಧಾರ್ಮಿಕ" ನಡವಳಿಕೆಯಿಂದಾಗಿಯೇ ಭೂಮಿಯಲ್ಲಿ ಭೂಕಂಪನಗಳು ಸಂಭವಿಸುತ್ತಿದೆ ಅನ್ನೋದು ಈ ಪುಣ್ಯಾತ್ಮನ ಕಟ್ಟಾ ನಂಬಿಕೆ!. ಧರ್ಮಕ್ಕೆ ಕೂಡಲೇ ಶರಣಾಗಿ, ಸರಿಯಾದ ವಸ್ತ್ರ ಸಂಹಿತೆ ಪಾಲಿಸದಿದ್ದರೆ, ಈ ಅನಾಹುತಗಳನ್ನ ತಪ್ಪಿಸೋಕೆ ಸಾಧ್ಯವೇ ಇಲ್ಲವಂತೆ.
ಆತನೇನೋ ಈ ಮಾತುಗಳನ್ನಾಡಿ ಸುಮ್ಮನಾಗಿಬಿಟ್ಟ. ಆದರೆ ಈತನ ಹೇಳಿಕೆಗಳಿಂದ ರೊಚ್ಚಿಗೆದ್ದ ಹೆಂಗಳೆಯರು, ಆತನ ವಿರುದ್ದ ಹೋರಾಟಕ್ಕಿಳಿದರು! ವಿಜ್ಞಾನಕ್ಕೇ ಸವಾಲೆಸೆವ ಮಾತಾಡಿರೋ ಧಾರ್ಮಿಕ ಮುಖಂಡನ ಅಜ್ಞಾನಕ್ಕೆ ಧಿಕ್ಕಾರ ಅಂದ ಇವರುಗಳು, ಸ್ತನ ಕಂಪನ- boob equake- ಆಂದೋಲನ ಮಾಡಿಬಿಟ್ಟರು! ಯಥಾಸಾಧ್ಯ ಎದೆಗಾರಿಕೆ ಪ್ರದರ್ಶಿಸೋ ಬಟ್ಟೆ ತೊಟ್ಟುಕೊಂಡು ಓಡಾಡಿ ತೋರಿಸುತ್ತೇವೆ, ಭೂಕಂಪ ಆಗ್ಲಿ ನೋಡೋಣ ಅಂತ ಸವಾಲು ಹಾಕಿದ್ರು. ಜಾಥಾ ಗೀಥಾ ಎಲ್ಲ ಮಾಡಿ, ಯೂ ಟ್ಯೂಬಿಗೆ ವೀಡಿಯೋ ಹಾಕಿ ಜೈ ಅಂದ್ರು.
ಮೊನ್ನೆ ಇಪ್ಪತ್ತಾರಂದು ಮಾಡಿದ ವಿಶ್ವವ್ಯಾಪೀ ಸ್ತನಕಂಪನದ ಫಲಿತಾಂಶ ಹೊರಬಿದ್ದಿದ್ದು, ಎದೆ ಪ್ರದರ್ಶನದಿಂದ ಎಲ್ಲೂ ಭೂಕಂಪ ಆಗಿಲ್ಲ ಅಂತ ಸಂಘಟಕಿಯೊಬ್ಬಳು ಆಧಾರ ಸಮೇತ ಹೇಳಿಕೊಂಡಿದ್ದಾಳೆ. ಅಲ್ಲಿ ಯಾರೋ ಚಂದದ ಕಮೆಂಟೂ ಬರೆದಿದ್ದಾರೆ, I do believe breasts doesn't cause earthquakes -- in fact, I think it can feed and nourished people (e.g: haiti) ಅಂತ!
ಇರ್ಲಿ, ಆವತ್ತು ಭೂಕಂಪ ಆಗಿರ್ಲಿಲ್ಲ ನಿಜ, ಆದ್ರೆ ಹುಡುಗೀರ ಸಡನ್ನಾದ ಎದೆಗಾರಿಕೆಯಿಂದಾಗಿ ಎಷ್ಟು ಜನರೊಳಗೆ ಕಂಪನವಾಗಿದೆ ಅನ್ನುವ ಲೆಕ್ಕ ಸಿಗುವುದು ಕಷ್ಟ.
Thursday, April 29, 2010
Thursday, April 15, 2010
ಮೊದಲ ಅನುಭವ
ಇಬ್ಬರು ಮಹಿಳಾಮಣಿಗಳು ಮಾತಾಡ್ತಾ ಇದ್ರು.....
"ಲೇ, ನಿನ್ನೆದು ನ೦ದು ಮೊದಲನೇಬಾರಿ ಆಗಿತ್ತು ಕಣೇ... "
ಹೌದಾ? ನಿಜ್ವಾಗ್ಲೂ? ಏನಾಯ್ತು ಹೇಳೇ....
"ಮೊದಮೊದಲು ನಿಧಾನವಾಗಿ ಒಳಕ್ಕೆ ತಗೋಳೋದು ಹೊರಕ್ಕೆ ಬಿಡೋದು ಮಾಡಿದೆ"
ಆಮೇಲೆ?
"ಹಾಗೇ ಸುಮಾರು ಹತ್ತು ನಿಮಿಷ ಮಾಡಿದೆ. ಅವರೇ ಹೇಳಿದ್ರು, ಮೊದಲು ನಿಧಾನವಾಗೇ ಮಾಡಬೇಕ೦ತೆ."
ಹೂ೦...
"ತು೦ಬಾ ಕಷ್ಟ ಆಗ್ತಿತ್ತು ಕ೦ಟ್ರೋಲ್ ಮಾಡ್ಕೊಳ್ಳೋಕೆ. ಹಾಗೇ ನಿಧಾನದಿ೦ದ ಜೋರಾಗಿ ಮಾಡೋಕೆ ಸುರುವಿಟ್ಕೊ೦ಡಮೇಲೆ ರೂಮಿನ ತು೦ಬೆಲ್ಲಾ ಉಸಿರಾಟದ್ದೇ ಶಬ್ಧ."
ಒಹ್ ಗಾಡ್, ಆಮೇಲೆ ? ಆಮೇಲೆ?
"ಜೋರಾಗಿ ಮಾಡೋಕೆ ಶುರುವಾದಮೇಲೆ ಕಿಬ್ಬೊಟ್ಟೆ ಹತ್ರಾ ನೋವಾಗ್ತಿತ್ತುಕಣೇ..... ಸ್ವಲ್ಪ ಜೋರಾಗೇ ನೋಯ್ತಿತ್ತು. "
ಹೌದಾ?
" ಆಮೇಲೆ ಸ್ವಾಮೀಜಿ ಹೇಳಿದ್ರು, ಹೀಗೇ ಪ್ರಾಣಾಯಾಮದಲ್ಲಿ ಉಸಿರಾಟವನ್ನು ನಿಯ೦ತ್ರಣ ಮಾಡು, ಮನಸ್ಸಿಗೆ ತು೦ಬಾ ಆನ೦ದ ಸಿಗುತ್ತದೆ"
ಬೋಲೋ................ ಸ್ವಾಮೀ ನಿತ್ಯ"ನ೦ಗಾ" ಮಹಾರಾಜ್ ಕೀ.............. ಜೈ......
"ಲೇ, ನಿನ್ನೆದು ನ೦ದು ಮೊದಲನೇಬಾರಿ ಆಗಿತ್ತು ಕಣೇ... "
ಹೌದಾ? ನಿಜ್ವಾಗ್ಲೂ? ಏನಾಯ್ತು ಹೇಳೇ....
"ಮೊದಮೊದಲು ನಿಧಾನವಾಗಿ ಒಳಕ್ಕೆ ತಗೋಳೋದು ಹೊರಕ್ಕೆ ಬಿಡೋದು ಮಾಡಿದೆ"
ಆಮೇಲೆ?
"ಹಾಗೇ ಸುಮಾರು ಹತ್ತು ನಿಮಿಷ ಮಾಡಿದೆ. ಅವರೇ ಹೇಳಿದ್ರು, ಮೊದಲು ನಿಧಾನವಾಗೇ ಮಾಡಬೇಕ೦ತೆ."
ಹೂ೦...
"ತು೦ಬಾ ಕಷ್ಟ ಆಗ್ತಿತ್ತು ಕ೦ಟ್ರೋಲ್ ಮಾಡ್ಕೊಳ್ಳೋಕೆ. ಹಾಗೇ ನಿಧಾನದಿ೦ದ ಜೋರಾಗಿ ಮಾಡೋಕೆ ಸುರುವಿಟ್ಕೊ೦ಡಮೇಲೆ ರೂಮಿನ ತು೦ಬೆಲ್ಲಾ ಉಸಿರಾಟದ್ದೇ ಶಬ್ಧ."
ಒಹ್ ಗಾಡ್, ಆಮೇಲೆ ? ಆಮೇಲೆ?
"ಜೋರಾಗಿ ಮಾಡೋಕೆ ಶುರುವಾದಮೇಲೆ ಕಿಬ್ಬೊಟ್ಟೆ ಹತ್ರಾ ನೋವಾಗ್ತಿತ್ತುಕಣೇ..... ಸ್ವಲ್ಪ ಜೋರಾಗೇ ನೋಯ್ತಿತ್ತು. "
ಹೌದಾ?
" ಆಮೇಲೆ ಸ್ವಾಮೀಜಿ ಹೇಳಿದ್ರು, ಹೀಗೇ ಪ್ರಾಣಾಯಾಮದಲ್ಲಿ ಉಸಿರಾಟವನ್ನು ನಿಯ೦ತ್ರಣ ಮಾಡು, ಮನಸ್ಸಿಗೆ ತು೦ಬಾ ಆನ೦ದ ಸಿಗುತ್ತದೆ"
ಬೋಲೋ................ ಸ್ವಾಮೀ ನಿತ್ಯ"ನ೦ಗಾ" ಮಹಾರಾಜ್ ಕೀ.............. ಜೈ......
Monday, March 29, 2010
Saturday, March 20, 2010
ಜಯಂತ್ - ಪ್ರತಿಭಾ
ಇದನ್ನ ಬಹಳ ಹಿಂದೆಯೇ, ಅಂದರೆ ನಮ್ಮ ತುಂಟಿ ನೀಲು-೨ ಪೋಸ್ಟಿಗೆ ಬಂದಿದ್ದ ಪ್ರತಿಕ್ರಿಯೆ-ಮರುಪ್ರತಿಕ್ರಿಯೆಗಳನ್ನು ನೋಡಿದಾಗಲೇ ಬ್ಲಾಗಿಗೆ ಹಾಕಬೇಕು ಎಂದುಕೊಂಡಿದ್ದೆ; ಅದು ಹೇಗೋ ಬಿಟ್ಟುಹೋಗಿತ್ತು. ಇದೀಗ ಪೋಸ್ಟಿಸುತ್ತಿದ್ದೇನೆ.
ಕನ್ನಡದ ಪ್ರಜ್ಞಾವಂತ ಕವಯತ್ರಿ ಪ್ರತಿಭಾ ನಂದಕುಮಾರ್, ಜಯಂತ ಕಾಯ್ಕಿಣಿಯವರ ಸಾಲೊಂದಕ್ಕೆ ಪ್ರತಿಕ್ರಿಯಿಸುತ್ತ ಬರೆದ ಕವನ ಇದು. ಮೋಟುಗೋಡೆ ಇಂತಹ ಚರ್ಚೆ / ಒಳನೋಟಗಳಿಗೂ ವೇದಿಕೆಯಾಗಲಿ ಎಂಬುದು ಆಶಯ.
* *
"ಎಷ್ಟೊಂದು ಹುಡುಗಿಯರ ಮಗ್ಗಲುಗಳಲ್ಲಿ ತಾಯ್ತನದ ಪುಲಕದ ಕುಡಿ ಮೂಡುತ್ತಿದೆ.."
-ಜಯಂತ ಕಾಯ್ಕಿಣಿ.
ಪುಳಕ
-ಪ್ರತಿಭಾ ನಂದಕುಮಾರ್
ಮಗ್ಗಲುಗಳ ನಡುವೆ ಮೂರು ಲೋಕದ ಗುಟ್ಟು
ಬಿಟ್ಟು ಕೊಡದಂತೆ ಆತುಕೊಳ್ಳುವ ಜೋತು
ಬೀಳುವ ತೆವಲುಗಳು ಮೂಡಿಸಿ ಸಿಟ್ಟು
ಭಗ್ನ ಸ್ವಪ್ನಗಳ ದ್ವಾರಗಳಲ್ಲಿ ಹಸೆಯಿರದೆ
ಹಾಡಿರದೆ ಖಾಲಿ ನಡೆಯಲ್ಲಿ ಗೂಟ ನೆಟ್ಟು
ಸುಳ್ಳು ಕಥೆಗೆ ದುಡ್ಡಿನಾಸೆಗೆ ನಟಿಸಿದ ಯಾವುದೋ
ನಟಿಯ ಅಮಲಿನಲ್ಲಿ ಶೃಂಗಕ್ಕೇರಿದವನ ಪಕ್ಕದಲ್ಲಿ ಕಿಬ್ಬೊಟ್ಟೆ ನೇವರಿಸುತ್ತ ಮಗ್ಗುಲಾಗಿ
ಬಿಗಿಯಾಗಿ ಕಣ್ಣು ಮುಚ್ಚಿದರೆ ಕನಸು
ಕಾಣಬಹುದೆನ್ನುವ ಭ್ರಮೆಯಲ್ಲಿ ಎಷ್ಟೊಂದು
ಹುಡುಗಿಯರು ಪುಳಕಗಳಿಗೆ ಹಾತೊರೆಯುತ್ತ...
ಕುಡಿ ಎಂದರೆ ಕುಡಿದು ಬೆಳೆದೇಬಿಟ್ಟ
ಹಸಿರು ಚಿಗುರಿನ ತುದಿಯಲ್ಲಿ ಹೂವರಳಿ
ಜೀವವೇ ನೀರಾಗಿ ಹರಿದು ಕಟ್ಟೆಯೊದೆದು
ಕುಸಿದು ತೆವಳಿ ನೋವು ತಿನ್ನುತ್ತ
ಊಟ ಮಾಡುವಾಗಲೇ ಎದ್ದಳುವ ಕೂಸಿಗೆ
ಒಂದು ಕೈಯಲ್ಲಿ ಎದೆ ಕೊಟ್ಟು
ಅವಸರದಲ್ಲಿ ನುಂಗುವ ಬಿಸಿ ಅನ್ನ ಸಾರು
ನಾಲಿಗೆ ಸುಟ್ಟು ಕಣ್ಣಲ್ಲಿ ನೀರು
ಅಲ್ಲೇ ಕೈತೊಳೆದು ಗೋಡೆಗೊರಗುವ
ಎಷ್ಟೊಂದು ಹುಡುಗಿಯರು ಇದೇ ಪುಳಕೆವೆನ್ನುತ್ತ...
ಪುಟ್ಟ ಕೈಗಳ ಬಡಿತಕ್ಕೆ ತಪ್ಪು ಹೆಜ್ಜೆಯ ಹಾದಿ
ಹಗಲಿರುಳು ಅಳೆದು ಕಾಲನ ಕಾಲಡಿಯಲ್ಲಿ
ಹಿಂದೆ ಒತ್ತಿ ಜಗತ್ತು ಎಲ್ಲ ದೃಶ್ಯಗಳು
ಕಣ್ಮರೆಯಾಗಿ ನೇಪಥ್ಯದಲ್ಲಿ ಇಲ್ಲವಾದ
ಕೃಷ್ಣ ಯಶೋಧೆಯರಾಟ ನೋಡುವಾಗ
ಬಳೆ ತುಂಬಿದ ಕೈಗಳು ಮೆಲ್ಲನೆ ಆಧರಿಸಿ
ಒಡಲು ಪುಳಕದ ಕುಡಿ ಚಿಗುರೊಡೆಯುತ್ತಿತ್ತು.
Labels:
ಕವಿತೆ,
ಜಯಂತ ಕಾಯ್ಕಿಣಿ,
ಪ್ರತಿಭಾ ನಂದಕುಮಾರ್,
ಸ್ತ್ರೀ
Tuesday, March 2, 2010
Subscribe to:
Posts (Atom)
.jpg)
.jpg)
.jpg)
.jpg)
.jpg)
.jpg)