Monday, November 15, 2010

ಗೌತಮನ ಕ್ಷಮಾಯಾಚನೆ!

  • ಗೌತಮ್ ಹೆಗಡೆ
ಮೆಲ್ಲಗೆ ಮೊಳಕೆಯೊಡೆದ ಚಿಗುರು ಮೀಸೆ,
ನಿದಿರೆ ಬಾರದ ಇರುಳಿಗೆ
ನಟ್ಟ ನಡುರಾತ್ರಿ ಎಬ್ಬಿಸಿ
ಕಾಡುವ ಹಾಳು ಚೆಂದದ ಕನಸಿಗೆ
ಅರ್ಥವೇನೆಂದು ಪರಧ್ಯಾನದಿ
ಅಲ್ಲಿ, ಮನೆಯೆದುರ ದಾರಿ ತಿರುವಲ್ಲಿ
ಒಂದು ಹಳದಿ ಮಧ್ಯಾಹ್ನದಿ
ಕಣ್ಣ ನೆಟ್ಟು ಕುಳಿತಾಗ ಬಂದವಳು ನೀನು..

ತುಂತುರು ಹನಿ ಸಿಂಚನವಾಗಿ
ಏನೆಲ್ಲ ಪ್ರಶ್ನೆಗಳಿಗೆ ಉತ್ತರವಾಗಿ,
ಅನರ್ಥದರ್ಥ ಹರೆಯಕ್ಕೆ ಅರ್ಥವಾಗಿ..

ಹಾಗೆ ಕಂಡವಳು ಹಾಗೇ ಹೋಗದೆ ಎನ್ನ ಕಂಡು-
ಒರೆನೋಟದಿ ಕಳ್ಳ ಮಂದಹಾಸವಾಗಿಬಿಟ್ಟೆ.
ನಾ ನಿಂತ ನಿಲುವಲ್ಲಿ ಎನ್ನ ಕಳೆದುಕೊಂಡು,
ನಿನ್ನ ಆ ಮಂದಹಾಸ, ಓರೆನೋಟ
ಎನಗೆ ಸಿಕ್ಕ ರಹದಾರಿಯೆಂದುಕೊಂಡು
ಗಡಿ ದಾಟಿಬಿಟ್ಟೆ.

ನಿದಿರೆ ಬಾರದ ರಾತ್ರಿಯೊಳು,
ಹಿಡಿದು ಕನಸಿನ ಜಾಡು,
ತಿರುಗಿ ಬಾರದಷ್ಟು ದೂರ ದೂರ
ಅಡಿಯಿಂದ ಮುಡಿವರೆಗೆ
ಕಡು ಕಷ್ಟ - ಸುಖದ ದಾರಿಯಲಿ
ದಾರಿ ಮುಗಿಯುವನಕ,
ಕನಸು ಕರಗಿ ನೀರಾಗಿ ನನಸಾಗುವನಕ
ಬೆದೆಗೆ ಬಂದ ಹರೆಯಕೆ ಈಡಾಗಿಬಿಟ್ಟೆ.

ಕ್ಷಮಿಸಿಬಿಡು ಎನ್ನದಲ್ಲದ ತಪ್ಪಿಗೆ..
ಪರವಾನಿಗೆಯ ಹಂಗಿರದೆ
ಎನ್ನ ಮಾನಸದೊಳು ನಿನ್ನಲಿ ಅಲೆದುಬಿಟ್ಟೆ..
ಕ್ಷಮಿಸಿಬಿಡು ಎನ್ನದಲ್ಲದ ತಪ್ಪಿಗೆ..

Tuesday, October 26, 2010

ಕೃಷ್ಣನ್ ಲವ್ ಸ್ಟೋರಿ

-ಪರಮೇಶ್ವರ ಗುರುಸ್ವಾಮಿ

ಹನ್ನೆರಡನೆಯ ಶತಮಾನದ ಸಂಸ್ಕೃತ ಕವಿ ಜಯದೇವ ತನ್ನ ಶೃಂಗಾರ ಕಾವ್ಯ, ‘ಗೀತ ಗೋವಿಂದ’ದಲ್ಲಿ, ಕೃಷ್ಣ ಮತ್ತು ಗೋಪಿಕೆಯರ ಅದರಲ್ಲೂ ರಾಧೆs ಮತ್ತು ಕೃಷ್ಣರ ಪ್ರಣಯವನ್ನು ರಸಿಕತೆಯಿಂದ ವರ್ಣಿಸಿದ್ದಾನೆ. ಆತ್ಮವು ಭಗವಂತನಿಗಾಗಿ ಕಾತರಿಸುವುದು ಈ ಪದ್ಯಗಳಲ್ಲಿ ಪ್ರಣಯದ ಅನ್ಯೋಕ್ತಿಯಾಗಿದೆ. ನಮ್ಮ ಸಂಗೀತ ಮತ್ತು ಚಿತ್ರಕಲೆಗಳ ಮೇಲೆ ಜಯದೇವನ ಈ ಕೃತಿ ಅಪಾರ ಪ್ರಭಾವ ಬೀರಿದೆ. ೧೮ನೆಯ ಶತಮಾನದಲ್ಲಿ ಹಿಮಾಲಯದ ತಪ್ಪಲು ಪ್ರದೇಶದಲ್ಲಿ ಉತ್ತುಂಗಕ್ಕೇರಿದ ಚಿಕಣಿ ಅಥವ ಮಿನಿಯೇಚರ್ ಚಿತ್ರಕಲೆ ‘ಪಹಾಡಿ (ಗುಡ್ಡಗಾಡು) ಚಿತ್ರಕಲೆ’ ಎಂದೇ ಜಗತ್ಪ್ರಸಿದ್ಧ.  ಸಸ್ಯಗಳು ಮತ್ತು ಖನಿಜಗಳಿಂದ ಮಾತ್ರ ಸಂಗ್ರಹಿಸಲಾದ ನೈಸರ್ಗಿಕ ಬಣ್ಣಗಳನ್ನು ಬಳಸಿ ರಚಿಸಲಾಗಿರುವ ಪಹಾಡಿ ಶೈಲಿಯ ಮಿನಿಯೇಚರ್ ಚಿತ್ರಗಳು ತಮ್ಮ ಭಾವಗೀತಾತ್ಮಕ, ಕುಸುರಿಯ ಸೂಕ್ಷ್ಮತೆಯಿಂದ, ಚಿತ್ರ ರಚನಾ ಕೌಶಲದಿಂದ, ನಾಜೂಕು ಗುಣಗಳಿಂದ,  ನೈಸರ್ಗಿಕ ಸೌಂದರ್ಯ ಮತ್ತು ಹೆಣ್ಣನ್ನು ಅವಳೆಲ್ಲ ಸೌಂದರ್ಯದೊಂದಿಗೆ ಅಂದಿನ ಅತ್ಯುತ್ತಮ ಮಾದರಿಯಲ್ಲಿ (ಹಾವ ಭಾವ ವಿಲಾಸ ವಿಭ್ರಮಂಗಳನೆಲ್ಲ ಸೇರಿಸಿ) ಚಿತ್ರಿಸಿರುವುದು ಮನ ಸೆಳೆಯುತ್ತದೆ. ಪಹಾಡಿ ಕಲಾವಿದರು ‘ಭಾಗವತ ಪುರಾಣ’, ‘ಗೀತ ಗೋವಿಂದ’, ‘ನಳ ದಮಯಂತಿ’, ‘ರಾಗಮಾಲ’, ‘ಕೃಷ್ಣಲೀಲಾ’, ‘ಸತ್ಸಾಯಿ’ (ಸಪ್ತ ಶತ ಪದ್ಯಗಳು) ಮುಂತಾದ ಸಾಹಿತ್ಯವನ್ನವಲಂಬಿಸಿ ಮನೋಹರವಾದ ಚಿತ್ರಗಳನ್ನು ರಚಿಸಿದ್ದಾರೆ. ಈ ಚಿತ್ರಗಳ ಕೇಂದ್ರ ಶೃಂಗಾರವಾದರೂ ತುಡಿತ ಆಧ್ಯಾತ್ಮಿಕವಾಗಿದೆ (ಹಿಂದು ಪುರಾಣ ಅವಲಂಬಿತ).. ಭಾರತೀಯ ಕಲೆಯಲ್ಲಿ ರಸಾನುಭವವು ಒಂದು ನಿರ್ಧಿಷ್ಟವಾದ ಅನುಕೂಲಕರ ದೃಷ್ಟಿಕೋನವನ್ನು ಮೀರಿ ವಾಸ್ತವದ ಅಸ್ತಿತ್ವವನ್ನು ಸಂವಹನಿಸುತ್ತದೆ. ಅದಕ್ಕಾಗಿ ಕಲಾವಿದರು ಹಲವಾರು ಕಣ್ನೆಲೆಗಳನ್ನು ತಮ್ಮ ಕೃತಿಗಳಲ್ಲಿ ದುಡಿಸಿಕೊಂಡಿದ್ದಾರೆ. ಈ ಮಾತನ್ನು ಪಹಾಡಿ ಮಿನಿಯೇಚರ್‌ಗಳಲ್ಲೂ ಕಾಣ ಬಹುದು.

ಗೀತ ಗೋವಿಂದದ ೧೨ನೆಯ ಸರ್ಗದಲ್ಲಿ ಪುಷ್ಪಭರಿತ ಮರದಡಿಯಲ್ಲಿ ಹಸಿರು ಹಾಸಿಗೆಯ ಮೇಲೆ ಕೃಷ್ಣ ರಾಧೇಯರ ಉತ್ಕಟ ಪ್ರಣಯ ಸಮಾಗಮವನ್ನು ಜಯದೇವ ವರ್ಣಿಸಿದ್ದಾನೆ.  ಆ ವರ್ಣನೆಯನ್ನಿಲ್ಲಿ ಪಹಾಡಿ ಕಲಾವಿದ ಅಭಿವ್ಯಕ್ತಿಸಿದ್ದಾನೆ.


‘ಗೀತ ಗೋವಿಂದ’ವನ್ನಾಧರಿಸಿದ ಚಿತ್ರಗಳು ಅವುಗಳಲ್ಲಿ ವ್ಯಕ್ತವಾಗುವ ಸೊಬಗು ಮತ್ತು ಪರಿಪೂರ್ಣತೆಗಳಿಂದಾಗಿ ಮಹತ್ವದ್ದಾಗಿವೆ. ಆನಂದ ಕೆ. ಕೂಮಾರಸ್ವಾಮಿ ಹೇಳುವಂತೆ ಗೀತ ಗೋವಿಂದ ಚಿತ್ರಗಳ ಮಾಯಾ ಲೋಕ, “ಅವಾಸ್ತವ ಅಥವಾ  ಭ್ರಾಮಕವಲ್ಲ, ಕಲ್ಪನೆ ಮತ್ತು ಅನಂತತೆಯ ಲೋಕ. ಪ್ರೇಮ ದಿವ್ಯತೆಯ ಕಣ್ಣುಗಳಲ್ಲಿ ಕಾಣುವುದನ್ನು ನಿರಾಕರಿಸದ ಎಲ್ಲರಿಗೂ (ಈ ಲೋಕ) ಗೋಚರವಾಗುವಂತಹದ್ದು..” 

[ಇದನ್ನು ಮೋಟುಗೋಡೆಗಾಗಿ ಕಳುಹಿಸಿಕೊಟ್ಟ ಶ್ರೀ ಪರಮೇಶ್ವರ ಗುರುಸ್ವಾಮಿಯವರಿಗೆ ನಮ್ಮ ಧನ್ಯವಾದಗಳು.]

Wednesday, October 20, 2010

ರಾಮ್ ತೇರಿ ಗಂಗಾ ಬರಿಮೈಲಿ

೧೯೮೫ ರಲ್ಲಿ ರಾಜ್ ಕಪೂರ್ ನಿರ್ಮಾಣದ ಚಿತ್ರ ರಾಮ್ ತೇರಿ ಗಂಗಾ ಮೈಲಿ. ರಾಜೀವ್ ಕಪೂರ್ ಮತ್ತು ಮಂದಾಕಿನಿ ಅಭಿನಯದ ಈ ಚಿತ್ರ ೮೫ರ ಸೂಪರ್ ಹಿಟ್. ಈ ಯಶಸ್ವಿ ಚಿತ್ರ ಹಲವಾರು ವಿವಾದಗಳಿಗೂ ಕಾರಣವಾಯಿತು. ಇದು ಚಿತ್ರೀಕರಣವಾದಾಗ ಮಂದಾಕಿನಿ ಇನ್ನು ೧೬ ವರ್ಷದ ಕುವರಿ, ಹಾಗಾಗಿ ಚಿತ್ರದ ಈ ಹಾಡು ಚೈಲ್ಡ್ ಪೋರ್ನೋಗ್ರಫಿ ಆನ್ನುವದು ದೊಡ್ಡ ವಾದವಾಗಿತ್ತು. ಇದನ್ನೆಲ್ಲಾ ಕಳೆದು ಈ ಚಿತ್ರ ಬಿಡುಗಡೆಯಾಗಿ ೨೫ ಮಳೆಗಾಲಗಳೇ ಕಳೆದು ಹೋದವು, ಆದರೆ ಈ ಹಾಡು ಮಾತ್ರ ಇನ್ನೂ ರಸಿಕರ ಮನ ತಣಿಸುತ್ತಲೇ ಈದೆ.


Friday, October 8, 2010

ಮೂರು ಚಿತ್ರಗಳು

೧. ಪಪ್ಪಾಯಿ ಹಣ್ಣು ಬೀಳದಂತೆ ರಕ್ಷಿಸುವುದು ಹೇಗೆ?



೨. ಕೂಲೋ? ಹಾಟೋ??

Photograph: Mayhem Chaos



೩. ಪೆರುಚಿತ್ರ:


ಪೆರು ದೇಶದ ಲಾರ್ಕೋ ಮ್ಯೂಸಿಯಂನಲ್ಲಿನ ಒಂದು ಕಲಾಕೃತಿ.



ಮೊದಲನೇ ಚಿತ್ರವನ್ನು ನಮಗೆ ಕಳುಹಿಸಿಕೊಟ್ಟವರು ರೋಹಿತ್ ಕೆ.ಜಿ. ಎರಡನೇ ಚಿತ್ರದ ಲಿಂಕ್ ಕೊಟ್ಟವರು ಶ್ರೀನಿವಾಸ್ ಗೌಡರು.  ಮೂರನೇ ಚಿತ್ರದ ಬಗ್ಗೆ ಗಮನ ಸೆಳೆದವರು ಜಿ.ಎನ್. ಮೋಹನ್.  ಮೂವರಿಗೂ ಥ್ಯಾಂಕ್ಸ್. :-)

Copyrights (c): respective photographers.

Friday, September 17, 2010

ಮೊಗ್ಗಿನ ಮಧು

ಮೊಲೆ ಮೊಗ್ಗ ಮುಗ್ಧತೆಯ
ಆಹ್ವಾನ ದೊರೆತಾಯ್ತು
ತಡವೇಕೆ ಇನ್ನ? ಎನ್ನ ಮನದನ್ನ..

ಸವಿಯ ಕುಂಭವ ನೀನು ಮನಸಾರೆ ಮುತ್ತು,
ಪಡೆ ಮನದಣಿಯೆ ಮತ್ತು
ಬಾಯ್ತುಂಬ ಸುಖದ ಕೈತುತ್ತು

ತುಂಬಿಹುದು ಎದೆ ತುಂಬ
ಪ್ರೀತಿ ಅಮೃತ ಧಾರೆ
ಕ್ಷಣ ಕ್ಷಣಕೂ ತಲ್ಲಣ,
ಮಧುರ ಪೇಮದ ಸಿಂಚನ-
ಹನಿ ಹನಿಯಾಗಿ ನೀ ಈ ಪ್ರೀತಿ ರಸ ಹೀರೆ.

ನನ್ನಯ ಎದೆಯರಸ,
ಮಧುರವೀ ರಸನಿಮಿಷ
ಈ ಮೊಗ್ಗಿನಾ ಮಧುವ
ಮೆಲ್ಲ ಮೆಲ್ಲನೆ ಮೆಲ್ಲು
ತನುವ ಮೊಗ್ಗಿದು, ಮನದ ಹೂವರಳಿಸುವುದು
ನನ್ನ ತನು-ಮನಗಳೆರಡನ್ನೂ
ಒಟ್ಟೊಟ್ಟಿಗೇ ಗೆಲ್ಲು

ತಣಿವಾಗಿ ದಣಿ ದಣಿದು
ಮುದವಾಗಿ ಮಣಿ ಮಣಿದು
ಸಾಮೀಪ್ಯದಾ ಸೋನೆ ಸುರಿದು ತೇಲೋಣ
ಸಂತೃಪ್ತಿಯಲಿ.. ಮತ್ತೊಂದು ಜಗದಲ್ಲಿ..
ನಮ್ಮ ತೋಳ್ತೆಕ್ಕೆಯಲಿ..


* *
ಇದು ಅಧಿಕೃತವಾಗಿ ಮೋಟುಗೋಡೆಗೆ ಬಂದ ಮೊದಲ ಮಹಿಳಾ ಎಂಟ್ರಿ! ಇದನ್ನು ಬರೆದು ಕಳುಹಿಸಿರುವುದು ಸಹಬ್ಲಾಗಿಣಿಯೊಬ್ಬರು. ತಮ್ಮ ಹೆಸರನ್ನು ಅನಾಮಿಕವಾಗಿಡುವಂತೆ ಸೂಚಿಸಿದ ಅವರಿಗೆ ಥ್ಯಾಂಕ್ಸ್ ಹೇಳುತ್ತಾ, ಈ ಪ್ರಕ್ರಿಯೆ ಮುಂದುವರೆಯಲಿ ಅಂತ ಹಾರೈಸುತ್ತೇವೆ.