Saturday, November 14, 2009

ಗೋಡೆಯ ಟಾಪ್ ಹತ್ತು

ಈ ಖುಶಿಯ ಸಂದರ್ಭದಲ್ಲಿ ನೀವು ತುಂಬ ಇಷ್ಟ ಪಟ್ಟ, ನಮ್ಮ ಕೆಲವು ಟಾಪ್ ಪೋಸ್ಟುಗಳನ್ನು ಮೆಲುಕು ಹಾಕಿದರೆ:


1) ಹವ್ಯಕ ಭಾಷೆಯ ದ್ವಂದ್ವಾರ್ಥ ಮಾತುಗಳು -ಭಾಗ ೧, ಭಾಗ ೨
  • ಮಲೆನಾಡಿನ ಯಾವುದೋ ವಿಶೇಷದ ಮನೆ, "ತಡಿ ತಡಿ ಅಂದಿ , ಕೇಳಿದ್ನಿಲ್ಲೆ, ಗಡ್ ಬಡೆ ಮಾಡಿ ಹಾಕ್ಭುಟ, ಹರ್ದೋಗವನೆ ಮಾರಾಯ್ತಿ!" (ಅಪ್ಪೆ ಹುಳಿ ಬಡಿಸಿದ ಮಾಣಿಯನ್ನು ಬೈದುಕೊಳ್ಳುವ ಪರಿ).
  • "ತೋ, ಒಂದೂ ಏಳ್ತಾ ಇಲ್ಲೆ ಮಾರಾಯ್ತಿ, ಆ ಭಟ್ರಿಗಾರೂ ಒಂದು ಎದ್ದಿದ್ರೆ ಸಾಕಾಗಿತ್ತು!" (ಶ್ರಾದ್ಧದ ದಿನ ಅಡುಗೆಮನೆಯಲ್ಲಿ 'ತೊಡದೇವು' ಮಾಡುತ್ತಿದ್ದ ಹೆಂಗಸರು)......

2) ಸೇಬು ಮತ್ತು ನೀಚ
ಹಾಸ್ಟೆಲ್ನಲ್ಲಿ ಇರುವಾಗ ನಾವು ಬಳಸ್ತಾ ಇದ್ದ ಎರಡು short form ಗಳಲ್ಲೊ೦ದು ಸೇಬು. ಈ ಸೇಬು ಅನ್ನೋದು ರೂಮಿ೦ದ ರೂಮಿಗೆ, ಒಬ್ಬರಿ೦ದ ಇನ್ನೊಬ್ಬರಿಗೆ ಬಹಳ ಕಷ್ಟ ಪಟ್ಟು ಸಾಗಿಸುತ್ತಿದ್ದೆವು. ಕೆಲ್ವೊಮ್ಮೆ ಪುಸ್ತಕದ ಮಧ್ಯೆ ಇಟ್ಟು, ಮತ್ತೆ ಕೆಲವೊಮ್ಮೆ ಅ೦ಗಿಯೊಳಗಿ೦ದ ಸಿಕ್ಕಿಸಿಕೊ೦ಡು, ಇನ್ನು ಕೆಲವುಸತಿ೯ ರಾತ್ರಿ ಬಿದ್ದು, ಬಹಳ ಸಕ೯ಸ್ ಮಾಡಿ, ವಾಡ೯ನ್ಗೆ ಗೊತ್ತಾಗದ೦ತೆ , ಜ್ಯೂನಿಯರ್ಸ್ ಗೆ ತಿಳೀದ೦ತೆ ಇದನ್ನ ಸಾಗಿಸ ಬೇಕಾಗುತ್ತಿತ್ತು. ಯಾಕ೦ದ್ರೆ ಇದು ನಮ್ಮ ಹಾಸ್ಟೆಲ್ ಜೀವನದ ಪ್ರಶ್ನೆಯಾಗಿತ್ತು ಹಾಗಾಗಿ ಈ ವ್ಯವಹಾರವೆಲ್ಲಾ ಗುಟ್ಟು ಗುಟ್ಟು.....


3) ಶ್ಯಾಮಸುಂದರನ ಸಮಸ್ಯೆ
ಶ್ಯಾಮಸುಂದರನಿಗೆ ಎಲ್ಲದೂ ಸರಿಯಾಗಿಯೇ ಇತ್ತು. ಸುಖ ಸಂಸಾರ, ಒಂದು ಪುಟ್ಟ ಮಗು, ಒಳ್ಳೇ ಕೆಲಸ. ಎಲ್ಲ ಚೆನ್ನಾಗಿದೆ ಅಂದುಕೊಂಡು ಒಂದು ಬೆಳಗ್ಗೆ ಎದ್ದು ಬಚ್ಚಲಿಗೆ ಬಂದ ಆತನಿಗೆ ತನ್ನ ಬಲ ಬೀಜ ಯಾಕೋ ನೀಲಿಯಾಗಿದೆ ಅನ್ನಿಸಿತು. ಮತ್ತೊಮ್ಮೆ ಸರಿಯಾಗಿ ನೋಡಿಕೊಂಡ - ಹೌದು, ನೀಲಿಯಾಗಿದೆ. ಏನು ಮಾಡುವುದೋ ತಿಳಿಯಲಿಲ್ಲ. ಹೆಂಡತಿಗೆ ಹೇಳಲು ಯಾಕೋ ಮುಜುಗರ ಅನ್ನಿಸಿತು. ಗಡಿಬಿಡಿಯಲ್ಲಿ ತಿಂಡಿ ತಿಂದು, ಮನೆ ಹತ್ತಿರದ ನರ್ಸಿಂಗ್ ಹೋಮ್ ಗೆ ಓಡಿದ.....


4) ಕಾಮಸೂತ್ರ ಚಾಕೋಲೇಟ್ಸ್
ಚಾಕ್ಲೇಟು ಅಂದ್ರೆ ಯಾರಿಗೆ ತಾನೆ ಬಾಯಲ್ಲಿ ನೀರೂರೋದಿಲ್ಲ? ಅದು ಕ್ಯಾಡ್ಬರೀಸ್ ಇರಬಹುದು ಅಥವಾ ಅಪ್ಪ ತಂದುಕೊಡುತ್ತಿದ್ದ ಹಸಿರು ಜರಿಯ ಚಾಕ್ಲೇಟ್ ಇರಬಹುದು; ಆದರೆ ಚಾಕ್ಲೇಟಿಗೆ ಹಾತೊರೆಯದ ಜೀವವಿಲ್ಲ. ಕೋಕೋ, ಬಟರ್, ಮಿಲ್ಕ್, ನಟ್ಸ್, ಡ್ರೈ ಫ್ರೂಟ್ಸ್, ಲಿಕ್ಕರ್... ಏನಿಲ್ಲ ಏನಿದೆ ಚಾಕ್ಲೇಟಿನಲ್ಲಿ?

ಆದರೆ ಚಾಕಲೇಟುಗಳು ಇನ್ನು ಬರೀ ಬಾಯಲ್ಲಿ ಸವಿಯಲಿಕ್ಕೆ ಮಾತ್ರ ಮೀಸಲಲ್ಲ.....


5) ಸಖಿಯ ಸ್ವಗತ
ಕತ್ತಲೆತ್ತಲಡಗಿತೋ
ಗೊತ್ತೇ ಆಗಲಿಲ್ಲವಲ್ಲೋ ಸಖ,
ಬೆತ್ತಲಲ್ಲಿತ್ತೋ ಸುಖ, ಈಗ
ಮೆತ್ತ ಮರೆಯಾಯ್ತೋ ||೧||

ಸುತ್ತ ಕವಿದಿತ್ತೋ, ಮೈಗೆ..
.........


6) ಮೊಳೆ
ಬಸ್ಯಾನ್ ದನ, ಹೀಟಿಗ್ ಬಂದಿತ್ತು. ಹಿ೦ದೆ ಕಲ್ಲೇಶಿ ಮನಿ ಹೋರಿ ತಾವ ಮೂರ್ ಬಾರಿ ದನ ಹೊಡ್ಕಂಡ್ ಹೋಗ್ ಬಂದಿದ್ರೂ ಕಟ್ಟಿರಲಿಲ್ಲ. ಈ ಸತಿ೯ ಪಶುವೈದ್ಯ ಶಾಲಿಗೆ ಹೊಸಾ ಡಾಕ್ಟ್ರು ಬ೦ದಾರೆ, ಅವರ ಕೈ ಗುಣ ಚೊಲೋ ಐತಿ ಅ೦ತ ಊರಾಗೆ ಮಾತಿತ್ತು. ಹಾ೦ಗ೦ತ ಬೇರೆಯುವ್ರು ಮಾತಾಡತಿದ್ರೇ ಶಿವಾಯ್ ಬಸ್ಯ೦ಗೆ ಅವರ ಬಗ್ಗೆ ಏನ್ ಏನೂ ತಿಳಿವಲ್ದು. ತ೦ಗೇ ಹುಶಾರಿಲ್ದೇ ಹೋದ್ರೆ ನಾಟೀ ವೈದ್ಯನ ತಾವಾ ಹೋಗ್ತಿದ್ನೇ ಶಿವಾಯ್ ಇ೦ಗ್ಲೀಸ್ ಮದ್ದು ತಕ೦ಡವ ಅಲ್ಲ. ಇನ್ನು ದನಕ್ಕೆ ಇ೦ಗ್ಲೀಸ್ ಮದ್ದು ಮಾಡ್ಯಾನೇ? ಆದ್ರೂ ಈಗ ಬೇರೆ ದಾರಿ ಇಲ್ಲದ್ರಿ೦ದ ಜೊತೀಗೆ ಮನೆಯವ್ರ ವರಾತ ಬೇರೆ ಇದ್ದಿದ್ರಿ೦ದ ದನ ಹೊಡ್ಕ೦ಡು ಹೊಸಾ ಡಾಕ್ಟರ್ ಮನಿಗೆ ಹೋಗೂ ಪ್ರಸ೦ಗ ಬ೦ತು.....

7) ಇಳಿಯಬೇಕು ನಿನ್ನೊಳಗೆ ನಾನು
ಇಳಿಯಬೇಕು ನಿನ್ನೊಳಗೆ ನಾನು
ಸುರಿದಂತೆ, ಸೋನೆ ಇಳೆಗೆ
ಒಳಗೊಳಗಿನಾಳ ಶೋಧಿಸುವ ಬಯಕೆ
ಮರಬೇರು ಬಸಿದಂತೆ ಭುವಿಗೆ

ಮುತ್ತಿಕ್ಕಬೇಕು ಉನ್ಮತ್ತ ತುಟಿಗೆ
................

8) ಕೋನಾರ್ಕಿನ ಕ್ಲಿಕ್ಕುಗಳು
ಕೊನಾರ್ಕಿನ ಸೂರ್ಯ ದೇಗುಲದ ಚಿತ್ರಗಳು ಇವು. ಪ್ರಾಯಶಃ ಯಾವ ಚಿತ್ರಗಳಿಗೂ ವಿವರಣೆ ಬೇಕಿರುವುದಿಲ್ಲ ಅಂದುಕೊಂಡಿದ್ದೇನೆ. ಆದರೂ ಕೆಲವು ಚಿತ್ರಕ್ಕೆ ಅಡಿಬರಹ ನೀಡಿದ್ದೇನೆ. ಬಾಕಿ ಉಳಿದವೆಲ್ಲ "ನೋಡಿ ಕಲಿ, ಮಾಡಿ ತಿಳಿ".....



9) ಹಿಗ್ಗಿಹೋದ ವಿನೆಗರ್ ಮತ್ತು ಇತರ ಸಮಸ್ಯೆಗಳು
ಪತ್ರಿಕೆಗಳಲ್ಲಿ ಬರುವ 'ಪ್ರಶ್ನೋತ್ತರ ಕಾಲಂ'ನ ಕೆಲವು ಅಗದೀ ಫನ್ನೀ ಮತ್ತು ಮುಗ್ಧ ಪ್ರಶ್ನೆಗಳು....

10) ಏನು ಫಲ? ಈ ಫಲ??
ಅರುಣ್ ಮೇಷ್ಟ್ರ ಪಾಠ: ಕಲ್ಲಂಗಡಿ ಹಣ್ಣನ್ನು ಚಾಕುವಿನಿಂದ ಹೆಚ್ಚಿ. ಮಿಕ್ಸರ್ ಒಳಗೆ ಹಾಕಿ. ಜ್ಯೂಸ್ ಮಾಡಿ. ನೀರು ಬೆರೆಸಬೇಡಿ. ಕಲ್ಲಂಗಡಿ ಹಣ್ಣಿನಲ್ಲಿರುವ ನೀರು ಸಾಕು. ಪಾತ್ರೆಯೊಳಗೆ ಈ ಜ್ಯೂಸನ್ನು ಸುರಿದು ನಿಂಬೆ ಹಣ್ಣನ್ನು ಚಾಕುವಿನಿಂದ ಹೆಚ್ಚಿ ಕಲ್ಲಂಗಡಿ ರಸವಿರುವ ಪಾತ್ರೆಯೊಳಗೆ ಹಿಂಡಿರಿ.....

1 comment:

sunaath said...

ಟಾಪ್ ಹತ್ತು ಓದಿ ಮತ್ತೊಮ್ಮೆ ಸುಖಪಟ್ಟೆ. ಗೋಡೆ ಹತ್ತಿಸಿದ್ದಕ್ಕಾಗಿ ಅನೇಕ ಧನ್ಯವಾದಗಳು.